ಐವರು ಐಎಸ್ಐ ಉಗ್ರರ ಎನ್‌ಕೌಂಟರ್ ಮಾಡಿದ ತೆಲಂಗಾಣ ಪೊಲೀಸರು
ಕೋರ್ಟ್ ವಿಚಾರಣೆಗೆಂದು ಕರೆತರುವ ವೇಳೆ ಪರಾರಿಯಾಗಲು ಯತ್ನಿಸಿದ್ದ ಪಾಕಿಸ್ತಾನದ ಐಎಸ್ಐನ ಐವರು ಉಗ್ರರರನ್ನು ತೆಲಂಗಾಣ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.

ಜನಗಾಂವ್(ವರಂಗಲ್): ಕೋರ್ಟ್ ವಿಚಾರಣೆಗೆಂದು ಕರೆತರುವ ವೇಳೆ ಪರಾರಿಯಾಗಲು ಯತ್ನಿಸಿದ್ದ ಪಾಕಿಸ್ತಾನದ ಐಎಸ್ಐನ ಐವರು ಉಗ್ರರರನ್ನು ತೆಲಂಗಾಣ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.
ವಿಚಾರಣೆಗೆಂದು ಈ ಐವರನ್ನು ವರಂಗಲ್ ಜೈಲಿನಿಂದ ಹೈದರಾಬಾದ್ ಗೆ ಕರೆತರಲಾಗುತ್ತಿತ್ತು. ಈ ವೇಳೆ ವರಂಗಲ್ ಜಿಲ್ಲೆ ಜನಗಾಂವ್ ಗ್ರಾಮದ ಬಳಿ ಆರೋಪಿಗಳು ಭದ್ರತಾ ಸಿಬ್ಬಂದಿಗಳಿಂದ ಬಂದೂಕುಗಳನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದು, ಅವರ ವಿರುದ್ಧ ಗುಂಡು ಹಾರಿಸಲಾಯಿತು ಎಂದು ಪೊಲೀಸ್ ಉನ್ನತ ಮೂಲಗಳು ತಿಳಿಸಿವೆ.
ಮೃತರನ್ನು ವಿಕಾರ್ ಅಹ್ಮದ್, ಸುಲೇಮಾನ್, ಇಝಾರ್ ಖಾನ್, ಮೊಹಮ್ಮದ್ ಜಾಕೀರ್, ಮೊಹಮ್ಮದ್ ಹನೀಫ್ ಎಂದು ಗುರುತಿಸಲಾಗಿದೆ.
ಆರೋಪಿ ವಿಕಾರುದ್ದೀನ್ ಅಹ್ಮದ್ ತಂಡ ಈ ಹಿಂದೆ ಹೈದರಾಬಾದ್ ನ ಪೊಲೀಸ್ ಕಾನ್ಸ್ ಟೇಬಲ್ ಓರ್ವರನ್ನು ಹತ್ಯೆ ಮಾಡಿದ್ದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೂ ಸಂಚು ರೂಪಿಸಿದ್ದರು ಎನ್ನಲಾಗಿದೆ.
ವಿಕಾರುದ್ದೀನ್ ಭಯೋತ್ಪಾದನೆ ಹಿನ್ನೆಲೆ
ಉಗ್ರ ವಿಕಾರುದ್ದೀನ್ ತೆಹ್ರಿಕ್-ಗುಲಾಬ್-ಇ-ಇಸ್ಲಾಂ ಉಗ್ರ ಭಯೋತ್ಪಾದನೆ ಸಂಘಟನೆ ನಡೆಸುತ್ತಿದ್ದು, 2007ರಿಂದ ಉಗ್ರ ಚಟುವಟಿಕೆಯಲ್ಲಿ ಈ ಐವರು ತೊಡಗಿದ್ದರು.
2007ರಲ್ಲಿ ಬ್ಯಾಂಕ್ ಲೂಟಿ ವೇಳೆ ಕಾನ್ಸ್‌ಟೇಬಲ್ ಕೊಲೆ, 2009ರ ಮೇಲೆ 18ರಂದು ಗುಂಡಿನ ದಾಳಿ, 2010 ಮೇನಲ್ಲಿ ಕಾನ್ಸ್‌ಟೇಬಲ್ ಮೇಲೆ ಈ ಐವರ ತಂಡ ಹೈದರಾಬಾದ್ ನ ಫಲಕ್ ನಾಮಾದಲ್ಲಿ ಗುಂಡಿನ ದಾಳಿ ಕೊಲೆ ಮಾಡಿತ್ತು. ಪೊಲೀಸ್ ಕಾನ್ಸ್‌ಟೇಬಲ್ ಕೊಲೆ ಹಿನ್ನೆಲೆ 2010 ಜೂನ್ ನಲ್ಲಿ ವಿಕಾರುದ್ದೀನ್ ನನ್ನ ಪೊಲೀಸರು ಬಂಧಿಸಿದ್ದು, ಈ ವೇಳೆ ಭಾರಿ ಶಸ್ತ್ರಾಸ್ತ್ರ ಜಪ್ತಿ ಮಾಡಲಾಗಿತ್ತು. ವಿಕಾರುದ್ದೀನ್ ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


