ಬಿಜೆಪಿ ವಿರುದ್ಧ ಮಹಾಭಾರತ ಯುದ್ಧ: ಲಾಲೂ ಪ್ರಸಾದ್
ಎನ್ ಡಿಎ ಸರ್ಕಾರದ ವಿವಾದಿತ ಭೂಸ್ವಾಧೀನ ಮಸೂದೆ ವಿರುದ್ಧ ತಾವು ಮಹಾಭಾರತ ಯುದ್ಧ ಸಾರುವುದಾಗಿ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಹೇಳಿದ್ದಾರೆ...

ನವದೆಹಲಿ: ಎನ್ ಡಿಎ ಸರ್ಕಾರದ ವಿವಾದಿತ ಭೂಸ್ವಾಧೀನ ಮಸೂದೆ ವಿರುದ್ಧ ತಾವು ಮಹಾಭಾರತ ಯುದ್ಧ ಸಾರುವುದಾಗಿ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಹೇಳಿದ್ದಾರೆ.
ನವದೆಹಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಲಾಲು ಪ್ರಸಾದ್ ಯಾದವ್ ಅವರು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರೈತ ವಿರೋಧಿ ಭೂಸ್ವಾಧೀನ ಮಸೂದೆ ಮತ್ತು ಕಪ್ಪುಹಣವನ್ನು ಭಾರತಕ್ಕೆ ತರುವ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಮಹಾರಾಭಾರತದಂತೆ ಯುದ್ಧ ಮಾಡಲು ಕೂಡ ತಾವು ಸಿದ್ಧ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿನ ಯಶಸ್ಸು ಬಿಜೆಪಿ ತಲೆಗೇರಿದ್ದು, ಅದನ್ನು ಎದುರಿಸಲು ಜನತಾ ಪರಿವಾರ ಇದೀಗ ಒಗ್ಗೂಡಿದೆ. ಜನತಾಪರಿವಾರ ಒಗ್ಗೂಡಿರುವುದೇ ಬಿಜೆಪಿಯನ್ನು ಹೇಳಹೆಸರಿಲ್ಲದಂತೆ ಮಾಡಲು. ಬಿಜೆಪಿ ಮತ್ತು ನರೇಂದ್ರ ಮೋದಿ ಅವರು ಗಂಟುಮೂಟೆ ಕಟ್ಟಿಕೊಳ್ಳುವಂತೆ ಮಾಡುವುದೇ ಜನತಾ ಪರಿವಾರ ಒಟ್ಟುಗೂಡುತ್ತಿರುವುದರ ಉದ್ದೇಶ` ಎಂದು ಲಾಲೂ ಗುಡುಗಿದ್ದಾರೆ. ಕೇಂದ್ರಸರ್ಕಾರ ರೈತರನ್ನು ಒಳಗೊಂಡಂತೆ ದೇಶದ ಜನತೆಗೆ ಮೋಸ ಮಾಡಿದ್ದು, ನಾವು ಇದನ್ನು ಸಹಿಸಿಕೊಳ್ಳುವುದಿಲ್ಲ. ಬಿಜೆಪಿ ಸರ್ಕಾರವನ್ನು ಮೂಲೆಗುಂಪು ಮಾಡುವ ಕಾರ್ಯ ಬಿಹಾರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಿಂದಲೇ ಆರಂಭವಾಗುತ್ತದೆ. ಈ ಕಾರ್ಯಕ್ಕೆ ಇನ್ನಷ್ಟು ಸಮಾನ ಮನಸ್ಕ ಪಕ್ಷಗಳನ್ನು ಜನತಾ ಪರಿವಾರದೊಂದಿಗೆ ವಿಲೀನ ಮಾಡಿಕೊಳ್ಳುವ ಕಾರ್ಯಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುತ್ತದೆ ಎಂದು ಹೇಳಿದರು.
ಜನತಾ ಪರಿವಾರದ ಆರು ಪಕ್ಷಗಳಾದ ಸಂಯುಕ್ತ ಜನತಾದಳ, ಆರ್.ಜೆ.ಡಿ., ಸಮಾಜವಾದಿ ಪಕ್ಷ, ರಾಷ್ಟ್ರೀಯ ಲೋಕದಳ, ಜಾತ್ಯತೀತ ಜನತಾದಳ ಮತ್ತು ಸಮಾಜವಾದಿ ಜನತಾ ಪಾರ್ಟಿ ವಿಲೀನವಾಗಲು ತೀವ್ರ ಚರ್ಚೆಗಳು ಮುಂದುವರೆದಿದ್ದು, ವಿಲೀನದ ಘೋಷಣೆಯನ್ನು ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಮಾಡಲಿದ್ದಾರೆ ಎಂದು ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಲಾಲೂ ಯಾದವ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


