ಎವರೆಸ್ಟ್ ನಲ್ಲಿ ಭಾರತದ ಸ್ವಚ್ಛ ಸಾಹಸ
ಪ್ರಧಾನಿ ನರೇಂದ್ರ ಮೋದಿ ಕನಸಿನ ಸ್ವಚ್ಛ ಭಾರತ ಅಭಿಯಾನ ಅಕ್ಷರಶಃ ಜನಪ್ರಿಯತೆಯ ಶಿಖರಕ್ಕೇರಲಿದೆ. ಎವರೆಸ್ಟ್ ನ...

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕನಸಿನ ಸ್ವಚ್ಛ ಭಾರತ ಅಭಿಯಾನ ಅಕ್ಷರಶಃ ಜನಪ್ರಿಯತೆಯ ಶಿಖರಕ್ಕೇರಲಿದೆ. ಎವರೆಸ್ಟ್ ನ ತುದಿಗೂ ಇನ್ನು ಅಭಿಯಾನನ ಲಗ್ಗೆ ಹಾಕಲು ಮುಂದಾಗಿದೆ. ದಶಕಗಳಿಂದ ಪರ್ವತಾರೋಹಿಗಳು ಅಲ್ಲಿ ಬಿಟ್ಟು ಬಂದಿರುವ 4 ಸಾವಿರ ಕೆಜಿಗೂ ಅಧಿಕ ಪ್ರಮಾಣದ ಕಸ ಕೆಳತರಲು ಅಭಿಯಾನಕೈಗೊಳ್ಳಲಾಗುತ್ತಿದೆ. ಭಾರತೀಯ ಸೇನಾ ಚಾರಣ ವಿಭಾಗದ 34 ಅಧಿಕಾರಿಗಳು ಮತ್ತು ಸಿಬ್ಬಂದಿ ಇಂಥ ಸಾಹಸಕ್ಕೆ ಮುಂದಾಗಿದ್ದಾರೆ.
50 ವರ್ಷ: ಭಾರತದ ಲೆ.ಕ.ಎಂ.ಎಸ್.ಕೋಹ್ಲಿ ನೇತೃತ್ವದ ತಂಡ ಎವರೆಸ್ಟ್ ಏರಿ 50 ವರ್ಷಗಳು ಪೂರ್ತಿಯಾಗಿವೆ. ಈ ಸಾಧನೆಯ ಸ್ಮರಣೆಗಾಗಿ ಸೇನೆ ಈ ಸಾಹಸಕ್ಕೆ ಮುಂದಾಗಿದೆ. ಅದಕ್ಕಾಗಿ ಒಂದು ವರ್ಷದಿಂದ ಕಠಿಣ ತರಬೇತಿ ಪಡೆದುಕೊಂಡಿದ್ದಾರೆ.
ಏನು ಮಾಡಲಿದೆ? ಶಿಖರ ದಲ್ಲಿರುವ ಬಾಟಲಿ, ಪ್ಲಾಸ್ಟಿಕ್, ಟೆಂಟ್, ಸ್ಲೀಪಿಂಗ್ ಬ್ಯಾಗ್, ಆಕ್ಸಿಜನ್ ಸಿಲಿಂಡರ್‍ಗಳನ್ನು ತಂಡ ಕೆಳಕ್ಕೆ ತರಲಿದೆ. ಜತೆಗೆ ಶಿಖರದಲ್ಲಿ ಅಸುನೀಗಿದವರ ಮೃತ ದೇಹಗಳನ್ನೂ ಹೊತ್ತು ತರಲಿದ್ದಾರೆ.
ಯಾವಾಗ? ಮೇ ಮಧ್ಯಭಾಗದಿಂದ ಮೇ.ರಣವೀರ್ ಸಿಂಗ್ ಜುಮ್ವಾವಲ್ ನೇತೃತ್ವದ ತಂಡ ಅಭಿಯಾನ ಆರಂಭಿಸಲಿದೆ. ಏ.4ರಂದು ತಂಡ ಕಠ್ಮಂಡುವಿಗೆ ತೆರಳಲಿದೆ. ಸೇನಾ ಸಿಬ್ಬಂದಿಗೆ ಸ್ಥಳೀಯ ಶೆರ್ಪಾಗಳು ಎವರೆಸ್ಟ್ ಸ್ವಚ್ಛತಾ ಅಭಿಯಾನನದಲ್ಲಿ ನೆರವು ನೀಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


