ದೇಶ

ಪಟ್ನಾ: ದಸರಾ ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ 32 ಜನರ ಸಾವು

ದಸರಾ ಆಚರಣೆಗಳ ಅಂಗವಾಗಿ ಇಲ್ಲಿನ ಗಾಂಧಿ ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ ಸಿಲುಕಿ...

ಪಟ್ನಾ: ದಸರಾ ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ 32 ಜನರ ಸಾವು
ಕಾಲ್ತುಳಿತ ದುರಂತ ನಡೆದ ಗಾಂಧಿ ಮೈದಾನದಲ್ಲಿ ನಡೆದ 'ರಾವಣ ವಧೆ' ಕಾರ್ಯಕ್ರಮದ ವೈಮಾನಿಕ ದೃಶ್ಯ.
Published On :

ಪಟ್ನಾ: ದಸರಾ ಆಚರಣೆಗಳ ಅಂಗವಾಗಿ ಇಲ್ಲಿನ ಗಾಂಧಿ ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೂವತ್ತೆರಡು ಜನ ಸಾವನ್ನಪ್ಪಿರುವ ಮತ್ತು ಹಲವಾರು ಜನ ಗಾಯಗೊಂಡಿರುವ ದುರ್ಘಟನೆ ಶುಕ್ರವಾರ ಸಂಭವಿಸಿದೆ.

ಸತ್ತವರಲ್ಲಿ ಸುಮಾರು 20 ಜನ ಮಹಿಳೆಯರು ಹಾಗು 5-6 ಮಕ್ಕಳು ಎಂದು ಬಿಹಾರ ಗೃಹ ಕಾರ್ಯದರ್ಶಿ ಅಮಿರ್ ಸುಭಾನಿ ತಿಳಿಸಿದರು.

ದಸರಾದ ಪ್ರಮುಖ ಕಾರ್ಯಕ್ರಮವನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಜನರು 'ರಾವಣ ವಧೆ' ಕಾರ್ಯಕ್ರಮವನ್ನು ವೀಕ್ಷಿಸಿ ವಾಪಸ್ಸಾಗುವಾಗ ಈ ದುರಂತ ನಡೆದಿದೆ.

ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಂಜಿ ಅವರು ಸಹ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 60 ಅಡಿ ಎತ್ತರದ ರಾವಣ ಪ್ರತಿಕೃತಿಗೆ ಬಾಣಬಿಟ್ಟು ಅಗ್ನಿಸ್ಪರ್ಶ ಮಾಡುವುದನ್ನು ವೀಕ್ಷಿಸಲು ಜನ ನೆರೆದಿದ್ದರು.

ಪ್ರಧಾನಿ ನರೇಂದ್ರ ಮೋದಿಯವರು ಬಿಹಾರ ಮುಖ್ಯಮಂತ್ರಿ ಜೊತೆ ಮಾತನಾಡಿ ಕಾಲ್ತುಳಿತ ದುರಂತದ ವಿವರಗಳನ್ನು ಪಡೆದುಕೊಂಡರು. ಅವರು ಸತ್ತವರ ಹತ್ತಿರದ ಸಂಬಂಧಿಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು.

ಕೆಲವು ಪ್ರತ್ಯಕ್ಷದರ್ಶಿಗಳ ಪ್ರಕಾರ, ವಿದ್ಯುತ್ ತಂತಿಯೊಂದು ಕತ್ತರಿಸಿ ಮೈದಾನದಲ್ಲಿ ಬಿದ್ದಿದೆ ಎಂಬ ವದಂತಿಯಿಂದ ಜನ ಗಾಬರಿಗೊಂಡು ಉಂಟಾದ ನೂಕುನುಗ್ಗಲಿನಿಂದ ಕಾಲ್ತುಳಿತ ದುರಂತ ಸಂಭವಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.