ಲಾಲು, ಮುಲಾಯಂಸಿಂಗ್ ನೆಂಟರಾಗ್ತಾರಾ?

ನವದೆಹಲಿ: ವರ್ಷಗಳ ಹಿಂದೆ ಹರಿದು ಹಂಚಿ ಹೋಗಿದ್ದ ಜನತಾ ಪರಿವಾರದ ಹಿರಿಯ ಮುಖಂಡರೆಲ್ಲಾ ಇತ್ತೀಚೆಗೆ ಸಭೆ ಸೇರಿ ಒಟ್ಟಾಗಿ ಸೇರಿ ಪರಸ್ಪರ ಮೈತ್ರಿ ಮಾಡಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರು. ಈ ನಾಯಕರಲ್ಲಿ ಪ್ರಮುಖರಾಗಿದ್ದ ಮುಲಾಯಂ ಸಿಂಗ್ ಯಾದವ್ ಹಾಗೂ ಲಾಲು ಪ್ರಸಾದ್ ಯಾದವ್ ಮೈತ್ರಿಗಿಂತಲೂ ಒಂದು ಹೆಜ್ಜೆ ಮುಂದಕ್ಕೆ ಸಾಗಿ ನೆಂಟಸ್ತಿಕೆಗೆ ಮುಂದಾಗಿದ್ದಾರೆ.
ಲಾಲು ಪ್ರಸಾದ್ ಕಿರಿಯ ಮಗಳಾದ ರಾಜಲಕ್ಷ್ಮಿ ಅವರನ್ನು ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಹತ್ತಿರದ ಸಂಬಂಧಿಕರ ಮಗ ಹಾಗೂ ಮೈನ್‌ಪುರಿಯ ಹಾಲಿ ಸಂಸದ ತೇಜ್ ಪ್ರತಾಪ್ ಸಿಂಗ್ ಯಾದವ್ ಅವರಿಗೆ ಕೊಟ್ಟು ಮದುವೆ ಮಾಡುವ ಬಗ್ಗೆ ಮಾತುಕತೆ ನಡೆದಿದೆ. ತೇಜ್ ಪ್ರತಾಪ್ ಸಹ ಇದಕ್ಕೆ ಒಪ್ಪಿಕೊಂಡಿದ್ದಾರೆ. ಆದರೆ, ಇದು ವೈಯುಕ್ತಿಕ ವಿಚಾರ. ಈ ಮದುವೆ ಪ್ರಸ್ತಾಪಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ' ಎನ್ನುತ್ತಿದ್ದಾರೆ ಎರಡೂ ಕುಟುಂಬಗಳ ಸದಸ್ಯರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


