ದೇಶ

ಸಾನಿಯಾ ರಾಯಭಾರಿ

ಸಾನಿಯಾ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವ ಮಹಿಳೆಯರ ಪರವಾಗಿ ನಿಂತಿದ್ದಾರೆ...

ಸಾನಿಯಾ ರಾಯಭಾರಿ
ಸಾನಿಯಾ ಮಿರ್ಜಾ
Published On :

ನವದೆಹಲಿ: ಲಿಂಗ ಸಮಾನತೆ ಮತ್ತು ಸ್ತ್ರೀ ಸಬಲೀಕರಣಕ್ಕಾಗಿ ಭಾರತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ದಕ್ಷಿಣ ಏಷ್ಯಾದ ರಾಯಭಾರಿಯನ್ನಾಗಿ ಆಯ್ಕೆ ಮಾಡಿದೆ.

ಭಾರತದ ಯಶಸ್ವಿ ಮಹಿಳಾ ಟೆನಿಸ್ ತಾರೆಯಾಗಿರುವ ಸಾನಿಯಾ ಮಿರ್ಜಾ ವಿಶ್ವ ಟೆನಿಸ್ ರ್ಯಾಂಕಿಂಗ್ನಲ್ಲಿ ಅಗ್ರ 50ರ ಸ್ಥಾನವನ್ನು ಪ್ರವೇಶಿಸಿದ ಮೊದಲ ಆಟಗಾರ್ತಿಯಾಗಿದ್ದಾರೆ. ಈಗ ವಿಶ್ವ ಸಂಸ್ಥೆಯ ದಕ್ಷಿಣ ಏಷ್ಯಾಗೆ ರಾಯಭಾರಿಯಾದ ಮೊದಲ ಮಹಿಳೆಯಾಗಿದ್ದಾರೆ.

ಸಾಕಷ್ಟು ಯುವ ಬಾಲಕಿಯರು ತಮ್ಮ ಸಮಸ್ಯೆಯನ್ನು ಮೆಟ್ಟುನಿಂತು ನಿಂತು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಸಾನಿಯಾ ಮಿರ್ಜಾ ಮಾದರಿಯಾಗಲಿದ್ದಾರೆ.

ಸಾನಿಯಾ ತಮ್ಮ ವೃತ್ತಿ ಜೀವನದಲ್ಲಿನ ಯಶಸ್ಸನ್ನು ಬಳಸಿಕೊಂಡು ಭಾರತದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವ ಮಹಿಳೆಯರ ಪರವಾಗಿ ನಿಂತಿದ್ದಾರೆ ಎಂದು ವಿಶ್ವ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.