ಕಾಶ್ಮೀರದಲ್ಲಿ ಶಾಂತಿಯುತ, ಜಾರ್ಖಂಡ್‌ನಲ್ಲಿ ಶೇ.18 ರಷ್ಟು ಮತದಾನ
ಜಮ್ಮು ಮತ್ತು ಕಾಶ್ಮೀರ ಹಾಗೂ ಜಾರ್ಖಡ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ...

ರಾಂಚಿ/ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಹಾಗೂ ಜಾರ್ಖಡ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಮಂಗಳವಾರ ಬೆಳಗ್ಗೆಯಿಂದ ಆರಂಭವಾಗಿದ್ದು, ಶಾಂತಿಯುತ ಮತದಾನ ನಡೆಯುತ್ತಿದೆ.
ಜಾರ್ಖಂಡ್‌ನಲ್ಲಿ ಬೆಳಗ್ಗೆ 10 ಗಂಟೆಯವರೆಗೆ ಶೇ.18 ರಷ್ಟು ಮತದಾನವಾಗಿದೆ. ಜಾರ್ಖಂಡ್ ನ 13 ಹಾಗೂ ಕಣಿವೆ ರಾಜ್ಯ ಕಾಶ್ಮೀರದ 15 ಕ್ಷೇತ್ರಗಳಲ್ಲಿ ಮಂಗಳವಾರ ಮತದಾನ ಆರಂಭವಾಗಿದೆ.
ಜಾರ್ಖಂಡ್ ನಲ್ಲಿ ಮತದಾನ ನಡೆಯಲಿರುವ ಎಲ್ಲ 13 ಕ್ಷೇತ್ರಗಳೂ ನಕ್ಸಲ್ ಪೀಡಿತ ಪ್ರದೇಶಗಳಾಗಿದ್ದು, ಈ ಹಿನ್ನೆಲೆಯಲ್ಲಿ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಇಲ್ಲಿ ಒಟ್ಟು 5 ಹಂತದ ಮತದಾನ ನಡೆಯಲಿದೆ.
ಇದೇ ವೇಳೆ, ಜಾರ್ಖಂಡ್ನಲ್ಲಿ ಪ್ರಸಕ್ತ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ರ್ಯಾಲಿಗಳನ್ನು ನಡೆಸಲಿದ್ದಾರೆ. ಮಂಗಳವಾರ ಚೈಬಾಸಾದಲ್ಲಿ ಚುನಾವಣಾ ಪ್ರಚಾರ ರ್ಯಾಲಿ ನಡೆಸಲಿದ್ದು, ಮತ್ತೊಂದು ರ್ಯಾಲಿ ನ.29ರಂದು ನಡೆಯಲಿದೆ.
ಸ್ಫೋಟಕ ಸಾಗಣೆಗೆ ಯತ್ನ: ಜಮ್ಮು ಮತ್ತು ಕಾಶ್ಮೀರದಲ್ಲಿ ಅಸೆಂಬ್ಲಿ ಚುನಾವಣೆ ಆರಂಭವಾಗುತ್ತಿರುವಂತೆ ಗಡಿಯಲ್ಲಿ ಭಾರಿ ಪ್ರಮಾಣದ ಐಇಡಿಗಳು ಹಾಗೂ ಸ್ಫೋಟಕಗಳನ್ನು ದೇಶದೊಳಕ್ಕೆ ತರಲು ಉಗ್ರರು ಯತ್ನಿಸುತ್ತಿದ್ದಾರೆ ಎಂದು ಸೇನೆ ತಿಳಿಸಿದೆ.
ಉಗ್ರರ ಒಳನುಸುಳುವಿಕೆ ಯತ್ನ ನಡೆಯುತ್ತಲೇ ಇದೆ. ಅವರಿಗೆ ಯಶಸ್ಸು ಸಿಗದಂತೆ ನಾವು ನೋಡಿಕೊಂಡಿದ್ದೇವೆ. ನುಸುಳಲು ಯತ್ನಿಸುತ್ತಿರುವ ಉಗ್ರರ ಸಂಖ್ಯೆ ಹಿಂದೆಂದಿಗಿಂತಲೂ ಹೆಚ್ಚಿದೆ ಎಂದು ಲೆ.ಜ. ಸುಬ್ರತಾ ಸಹಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


