ಗುಂಡಿಗೆ ಬಿದ್ದ ಆನೆ ಮರಿ ಪಾರು
ಜೆಸಿಬಿ ಯಂತ್ರದ ಮೂಲಕ ಆನೆ ಮರಿಯನ್ನು ಹೊರತೆಗೆಯುವಲ್ಲಿ ಯಶಸ್ವಿ

ಊಟಿ: ದಾರಿತಪ್ಪಿ ಗುಂಡಿಯೊಂದಕ್ಕೆ ಬಿದ್ದ ಮರಿ ಆನೆಯೊಂದನ್ನು ಸ್ಥಳೀಯರ ಸಹಾಯದೊಂದಿಗೆ ಅರಣ್ಯ ಇಲಾಖಾ ಸಿಬ್ಬಂದಿ ಸುರಕ್ಷಿತವಾಗಿ ಪಾರು ಮಾಡಿದ ಘಟನೆ ಊಟಿಯಲ್ಲಿ ನಡೆದಿದೆ.
ನೀಲಗಿರಿ ತಾಲೂಕಿನ ಕೂಡಲೂರು ಅರಣ್ಯಪ್ರದೇಶದಲ್ಲಿ ಕಳೆದ ರಾತ್ರಿ ಗುಂಪಿನಿಂದ ಪ್ರತ್ಯೇಕವಾದ ಮರಿಯಾನೆ ಆಹಾರವನ್ನರಸಿ ಕಡಲೂರಿನ ಅರಣ್ಯ ಪ್ರದೇಶದತ್ತ ಧಾವಿಸಿತು. ದಾರಿತಪ್ಪಿ ಬಂದ ಆನೆಮರಿ, ದಾರಿತಪ್ಪಿದ ಈ ಮರಿಯಾನೆ ದಾರಿಯಲ್ಲಿದ್ದ ಗುಂಡಿಯೊಳಕ್ಕೆ ಬಿದ್ದು ಸಿಲುಕಿಕೊಂಡಿತು.
ಆನೆಯ ಕಿರುಚಾಟ ಕೇಳಿದ ಸ್ಥಳೀಯ ಗ್ರಾಮಸ್ಥರು ಆನೆ ಮರಿಯನ್ನು ಹೊರತೆಗೆಯಲು ಮುಂದಾದರೂ, ಅದು ಸಾಧ್ಯವಾಗಲಿಲ್ಲ. ಕೂಡಲೇ ಈ ಕುರಿತು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಲಾಯಿತು. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖಾ ಸಿಬ್ಬಂದಿ, ಜೆಸಿಬಿ ಯಂತ್ರದ ಮೂಲಕ ಆನೆ ಮರಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಅಲ್ಲದೆ ಆನೆಮರಿಯನ್ನು ಅದರ ತಾಯಿ ಆನೆಯೊಂದಿಗೆ ತಲುಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


