ದೇಶ

ಭಾರತಕ್ಕೂ ಕಾಲಿಟ್ಟ ಡೆಡ್ಲಿ ಎಬೊಲಾ ವೈರೆಸ್

ದೇಶದಲ್ಲಿ ಮೊದಲ ಎಬೊಲಾ ಪ್ರಕರಣ ಪತ್ತೆಯಾಗಿದೆ. ಲೈಬೀರಿಯಾದಿಂದ ವಾಪಾಸಾದ ಭಾರತೀಯರೊಬ್ಬರ...

ಭಾರತಕ್ಕೂ ಕಾಲಿಟ್ಟ ಡೆಡ್ಲಿ ಎಬೊಲಾ ವೈರೆಸ್
ಎಬೊಲಾ (ಸಾಂದರ್ಭಿಕ ಚಿತ್ರ)
Published On :

ನವದೆಹಲಿ: ದೇಶದಲ್ಲಿ ಮೊದಲ ಎಬೊಲಾ ಪ್ರಕರಣ ಪತ್ತೆಯಾಗಿದೆ. ಲೈಬೀರಿಯಾದಿಂದ ವಾಪಾಸಾದ ಭಾರತೀಯರೊಬ್ಬರ ದೇಹದಲ್ಲಿ ಎಬೊಲಾ ವೈರೆಸ್ ಪತ್ತೆಯಾಗಿದ್ದು, ಆತನ್ನು ದೆಹಲಿ ಏರ್‌ಪೋರ್ಟ್‌ನ ವಿಶೇಷ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ನ.10 ರಂದು ದೆಹಲಿಗೆ ಬಂದಿಳಿದ 26 ವರ್ಷದ ವ್ಯಕ್ತಿ ಈ ಹಿಂದೆ ಆಫ್ರಿಕಾದಲ್ಲಿ ಎಬೊಲಾಗಾಗಿ ಚಿಕಿತ್ಸೆ ಪಡೆದು, ಗುಣಮುಖನಾಗಿದ್ದ. ಆದರೆ ಆತನ ವೀರ್ಯ ಮಾದರಿಯ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಎಂಬ ಫಲಿತಾಂಶ ಬಂದಿದೆ. ಆ ವ್ಯಕ್ತಿಯ ರಕ್ತದ ಮಾದರಿಯನ್ನು ಮೂರು ಬಾರಿ ಪರೀಕ್ಷೆ ನಡೆಸಿದಾಗಲೂ ಫಲಿತಾಂಶ ನೆಗೆಟಿವ್ ಎಂದು ಬಂದಿದೆ. ಹೀಗಾಗಿ ಆತ ಬೇಗನೆ ಗುಣಮುಖನಾಗಬಹುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಎಬೊಲಾ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯಾರೂ ಭಯಪಡಬೇಕಾದ ಅಗತ್ಯವಿಲ್ಲ  ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.