ಆಧುನಿಕ ಗುಲಾಮಗಿರಿಗೆ ಭಾರತವೇ ನಂ.1
ಗುಲಾಮಗಿರಿ ನಿರ್ನಾಮವಾಗಿದೆ ಎಂದು ನೀವು ತಿಳಿದುಕೊಂಡಿದ್ದರೆ, ಅದು ತಪ್ಪು...

ನವದೆಹಲಿ: ಗುಲಾಮಗಿರಿ ನಿರ್ನಾಮವಾಗಿದೆ ಎಂದು ನೀವು ತಿಳಿದುಕೊಂಡಿದ್ದರೆ, ಅದು ತಪ್ಪು. ಇದು ಭಾರತದಲ್ಲಷ್ಟೇ ಅಲ್ಲ ವಿಶ್ವದಲ್ಲೇ ಚಾಲ್ತಿಯಲ್ಲಿದ್ದು, ಆಧುನಿಕತೆಯನ್ನು ನಾಚಿಸುವಂತೆ ಮಾಡಿದೆ. ಅಂದ ಹಾಗೆ, ಈ ಗುಲಾಮಗಿರಿಗೆ ವಿಶ್ವಾದ್ಯಂತ ತುತ್ತಾಗಿರುವ ಮಂದಿ ಎಷ್ಟು ಗೊತ್ತೇ? 3.5 ಕೋಟಿ!
ಇಲ್ಲಿ ಇನ್ನೊಂದು ಆಘಾತಕಾರಿ ಅಂಶವೆಂದರೆ, ಇದರಲ್ಲಿ ಭಾರತಕ್ಕೆ ಮೊದಲ ಸ್ಥಾನ. ಅಂದರೆ ಭಾರತದಲ್ಲಿ 1.40 ಕೋಟಿ ಗುಲಾಮರಿದ್ದಾರೆ. ಎರಡನೇ ಸ್ಥಾನವನ್ನು ಚೀನಾ ಪಡೆದುಕೊಂಡಿದ್ದು, 32 ಲಕ್ಷ ಜನ ಜೀತಕ್ಕಿದ್ದಾರೆ. ಕ್ರಮವಾಗಿ 3,4 ಮತ್ತು 5ನೇ ಸ್ಥಾನವನ್ನು ಪಾಕಿಸ್ತಾನ (20ಲಕ್ಷ), ಉಜ್‌ಬೇಕಿಸ್ತಾನ (10.2 ಲಕ್ಷ), ರಷ್ಯಾ (10 ಲಕ್ಷ) ಹೊಂದಿದೆ. ಇಂಥದ್ದೊಂದು ವರದಿಯನ್ನು ಆಸ್ಟ್ರೇಲಿಯಾ ಮೂಲದ ಎನ್‌ಜಿಒ ಪ್ರಕಟಿಸಿದೆ. ಇದಕ್ಕಾಗಿ ವಿಶ್ವದ 167 ದೇಶಗಳ ಅಧ್ಯಯ ನಡೆಸಲಾಗಿದೆ. ಪ್ರಮುಖ ದೇಶಗಳಲ್ಲೇ ಶೇ.61 ಕ್ಕೂ ಹೆಚ್ಚು ಮಂದಿ ಗುಲಾಮಗಿರಿಗೆ ತುತ್ತಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೇ ನೈಜಿರಿಯಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಇಂಡೋನೇಷ್ಯಾ, ಬಾಂಗ್ಲಾದೇಶ ಮತ್ತು ಥಾಯ್ಲಾಂಡ್‌ನಲ್ಲೂ ಈ ಪದ್ಧತಿ ಹೆಚ್ಚಾಗಿ ಚಾಲ್ತಿಯಲ್ಲಿದೆ. ಇದನ್ನು ಆಧುನಿಕ 'ಗುಲಾಮಗಿರಿ' ಎಂದು ಕರೆಯಲಾಗಿದೆ.
ಇವರಲ್ಲಿ ಕೂಲಿ ಕಾರ್ಮಿಕರು, ಬಲವಂತದಿಂದ ಮದುವೆಯಾಗಿರುವವರು, ಸಾಲ ತೀರಿಸದೇ ಜೀತದಾಳಾಗಿರುವುದು, ವೇಶ್ಯಾವಾಟಿಕೆಯಲ್ಲಿ ಕಿರುಕುಳ ಅನುಭವಿಸುವವರೇ ಹೆಚ್ಚಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಶೇ. 23 ಹೆಚ್ಚಳವಾಗಿದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


