ವಿಶ್ವ ಭಯೋತ್ಪಾದನೆ ನಿಗ್ರಹಕ್ಕೆ ತಂತ್ರಗಾರಿಕೆ ಅಗತ್ಯ: ಮೋದಿ
ವಿಶ್ವ ಭಯೋತ್ಪಾದನೆ ಹತ್ತಿಕ್ಕಲು ದೇಶಗಳ ಜಂಟಿ ತಂತ್ರಗಾರಿಕೆ ಅಗತ್ಯವಾಗಿದೆ...

ಬ್ರಿಸ್ಬೇನ್: ವಿಶ್ವ ಭಯೋತ್ಪಾದನೆ ಹತ್ತಿಕ್ಕಲು ದೇಶಗಳ ಜಂಟಿ ತಂತ್ರಗಾರಿಕೆ ಅಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ಪ್ರಸಕ್ತ ಸಾಲಿನ ಜಿ-20 ದೇಶಗಳ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಅವರು, ವಿಶ್ವ ಮಟ್ಟದಲ್ಲಿ ಬೆಳೆದಿರುವ ಭಯೋತ್ಪಾದನೆ ಹತ್ತಿಕ್ಕಬೇಕಾದರೆ, ಎಲ್ಲಾ ದೇಶಗಳು ಒಟ್ಟಾಗಿ ವ್ಯೂಹ ರಚಿಸಬೇಕು. ಆಗ ಮಾತ್ರ ಭಯೋತ್ಪಾದನೆಯನ್ನು ಬುಡದಿಂದ ಕಿತ್ತೊಗೆಯಲು ಸಾಧ್ಯ ಎಂದು ಮೋದಿ ತಿಳಿಸಿದ್ದಾರೆ.
ದೇಶಗಳ ನಡುವಿನ ಸಹಕಾರ ಸಂಬಂಧ ಸುಧಾರಣೆ ಮುಖ್ಯವಾಗಿದೆ. ಆದರೆ ಈ ಸುಧಾರಣೆ ಜನತೆಯಿಂದಲೇ ಆಗಬೇಕಿದೆ ಎಂದ ಅವರು, ತಂತ್ರಜ್ಞಾನ ಮತ್ತು ಆಡಳಿತ ಕಾರ್ಯವಿಧಾನ ಸುಧಾರಣೆಯಾಗಬೇಕಿದೆ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬ್ಬೋಟ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸೇರಿ ಹಲವರು ಸಭೆಯಲ್ಲಿ ಭಾಗಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


