ದೇಶ

ಕಪ್ಪುಹಣ: ಜಿ 20 ರಾಷ್ಟ್ರಗಳ ನೆರವು ಕೋರಲಿರುವ ಮೋದಿ

ದೇಶದ ಅರ್ಥವ್ಯವಸ್ಥೆ ಪಾಲಿಗೆ ತಲೆನೋವಾಗಿ ಪರಿಣಮಿಸಿರುವ ಕಪ್ಪು ಹಣದ ವಿಚಾರವನ್ನು ಬ್ರಿಸ್ಟೇನ್‌ನಲ್ಲಿ...

ಕಪ್ಪುಹಣ: ಜಿ 20 ರಾಷ್ಟ್ರಗಳ ನೆರವು ಕೋರಲಿರುವ ಮೋದಿ
ಪ್ರಧಾನಿ ನರೇಂದ್ರ ಮೋದಿ
Published On :

ನವದೆಹಲಿ: ದೇಶದ ಅರ್ಥವ್ಯವಸ್ಥೆ ಪಾಲಿಗೆ ತಲೆನೋವಾಗಿ ಪರಿಣಮಿಸಿರುವ ಕಪ್ಪು ಹಣದ ವಿಚಾರವನ್ನು ಬ್ರಿಸ್ಟೇನ್‌ನಲ್ಲಿ ನಡೆಯಲಿರುವ ಈ ಬಾರಿಯ ಜಿ 20 ಶೃಂಗದಲ್ಲೂ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಲಿದ್ದಾರೆ. ಕಪ್ಪು ಹಣ ವಾಪಸ್ ತರಲು ಸದಸ್ಯ ರಾಷ್ಟ್ರಗಳ ಸಹಕಾರವನ್ನೂ ಅವರು ಕೋರಲಿದ್ದಾರೆ.

'ಪೂರ್ವ ರಾಷ್ಟ್ರಗಳತ್ತ ಗಮನ ಹರಿಸಿ' ಎಂಬ ಘೋಷಣೆಯೊಂದಿಗೆ ಪ್ರಧಾನಿ ಮೋದಿ ಮಂಗಳವಾರದಿಂದ 10 ದಿನಗಳ ಪ್ರವಾಸ ಆರಂಭಿಸಲಿದ್ದಾರೆ. ಮೊದಲು ಮ್ಯಾನ್ಮಾರ್‌ಗೆ ಭೇಟಿ ನೀಡಲಿರುವ ಅವರು ಅಲ್ಲಿ ಆಸಿಯಾನ್-ಇಂಡಿಯಾ ಮತ್ತು ಈಸ್ಟ್ ಇಂಡಿಯಾ ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ.

ಆ ಬಳಿಕ ಅವರು ಆಸ್ಟ್ರೇಲಿಯಾದ ಬ್ರಿಸ್ಟೇನ್‌ನಲ್ಲಿ ನಂ. 15ರಂದು ನಡೆಯಲಿರುವ ಜಿ20 ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಅವರು ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬ್ಬೋಟ್ ಜತೆ ಮಾತುಕತೆ ನಡೆಸಲಿದ್ದಾರೆ.

ಅಲ್ಲಿಂದ 19ರಂದು ಸ್ವದೇಶಕ್ಕೆ ಮರಳಲಿರುವ ಅವರು ದಾರಿ ಮಧ್ಯೆ ಫಿಜಿಗೆ ಭೇಟಿ ಕೊಡಲಿದ್ದಾರೆ.

ಸಹಕಾರ ನೀಡಿ: ವಿದೇಶಿ ಬ್ಯಾಂಕುಗಳಲ್ಲಿರುವ ಭಾರತೀಯರ ಕಪ್ಪುಹಣವನ್ನು ಮರಳಿ ಪಡೆಯಲು ಭಾರತ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳಿಗೆ ಕೈಜೋಡಿಸುವಂತೆ ವಿವಿಧ ದೇಶಗಳ ನಾಯಕರನ್ನೂ ಪ್ರಧಾನಿ ಕೋರಲಿದ್ದಾರೆ.

ಕಪ್ಪುಹಣ ಮರಳಿ ತರುವಲ್ಲಿ ಭಾರತಕ್ಕೆ ಸಾಕಷ್ಟು ತೊಡಕುಗಳಿವೆ. ಗಡಿ ತೆರಿಗೆ ಪದ್ಧತಿ ಸೇರಿ ಹಲವು ನಿಯಮಗಳು ಕಪ್ಪುಹಣವನ್ನು ಮರಳಿ ತರಲು ಅಡ್ಡಿಯಾಗುತ್ತಿದೆ. ಈ ನಿಟ್ಟಿನಲ್ಲಿ ವಿದೇಶಗಳು ತಮ್ಮ ಕೆಲವು ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ಮನವಿ ಮಾಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.