ದೇಶ

ನಿರ್ಭಯವಾಗಿ ಮೊಬೈಲ್ ಬಳಸಿ

ಇನ್ನು ನೀವು ಬಿಂದಾಸ್‌ನಿಂದ ಮೊಬೈಲ್ ಬಳಸಬಹುದು. ಇದರ ಬಳಕೆಯಿಂದ...

ನಿರ್ಭಯವಾಗಿ ಮೊಬೈಲ್ ಬಳಸಿ
ಮೊಬೈಲ್
Published On :

ನವದೆಹಲಿ: ಇನ್ನು ನೀವು ಬಿಂದಾಸ್‌ನಿಂದ ಮೊಬೈಲ್ ಬಳಸಬಹುದು. ಇದರ ಬಳಕೆಯಿಂದ ಕ್ಯಾನ್ಸರ್ ಸೇರಿದಂತೆ ಇತರೆ ಕಾಯಿಲೆಗಳು ಬರುತ್ತೆ ಅನ್ನೋ ಭಯವೂ ಇನ್ನು ಬೇಡ. ಆರೋಗ್ಯದ ಮೇಲೆ ಇದು ಯಾವುದೇ ತರಹದ ಪರಿಣಾಮ ಬೀರುವುದಿಲ್ಲ ಎಂಬದನ್ನು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲೂಎಚ್‌ಒ) ದೃಢಪಡಿಸಿದೆ.

ಮೊಬೈಲ್ ಬಳಕೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ, ಇಲ್ಲವೇ ಎಂಬ ಬಗ್ಗೆ ಕಳೆದ ಎರಡು ದಶಕಗಳಿಂದ ಹವಾರು ರೀತಿಯ ಸಂಶೋಧನೆಗಳನ್ನು ಮಾಡಲಾಗಿದ್ದು, ದುಷ್ಪರಿಣಾಮ ಬೀರುವ ಸಾಧ್ಯತೆ ತೀರಾ ಕಡಿಮೆ ಎಂಬ ವರದಿ ಲಭ್ಯವಾಗಿದೆ.

ಕ್ಯಾನ್ಸ್‌ರ್‌ನಂಥ ಮಾರಕ ರೋಗ ಸೇರಿದಂತೆ ಮೆದುಳು ಹಾಗೂ ಇತರೆ ಕಾಯಿಲೆಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹಲವಾರು ದೇಶಗಳು ನಂಬಿದ್ದವು. ಆದರೆ, ಇಲ್ಲಿಯವರೆಗೆ ಅಂಥ ಯಾವುದೇ ದುಷ್ಪರಿಣಾಮ ಆಗಿಲ್ಲ. ಭಯ ಬೇಡ ಎಂದು ಸಂಸ್ಥೆ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.