ಅಳಿಯನನ್ನೇ ಪಿಎ ಆಗಿ ನೇಮಕ ಮಾಡಿಕೊಂಡ ಬಿಹಾರ ಸಿಎಂ

ಪಾಟ್ನ: ವಿವಾದಾತ್ಮಕ ನಡೆಯನ್ನು ಕೈಗೊಂಡಿರುವ ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಅವರು ತಮ್ಮ ಅಳಿಯನ್ನು ವೈಯಕ್ತಿಕ ಸಹಾಯಕ(ಪಿಎ)ನಾಗಿ ನೇಮಕ ಮಾಡಿಕೊಂಡಿದ್ದಾರೆ.
ಕುಟುಂಬ ಸದಸ್ಯರನ್ನು ಸರ್ಕಾರಿ ಕೆಲಸಗಳಿಗೆ ನೇಮಕ ಮಾಡಿಕೊಳ್ಳಬಾರದೆಂಬ ಆದೇಶವನ್ನು ಉಲ್ಲಂಘಿಸಿ ಬಿಹಾರದ ಸಿಎಂ ತಮ್ಮ ಅಳಿಯ ದೇವೇಂದ್ರ ಕುಮಾರ್ರನ್ನು ಸಹಾಯಕನಾಗಿ ನೇಮಕ ಮಾಡಿಕೊಂಡು ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದಾರೆ. ಇದೇ ಅಲ್ಲದೆ, ಮಾಂಜಿ ಅವರು ತಮ್ಮ ಮತ್ತೊಬ್ಬ ಕುಟುಂಬದ ಸದಸ್ಯ ಸತ್ಯೇಂದ್ರ ಕುಮಾರ್ನನ್ನು ಜವಾನನಾಗಿ ನೇಮಕ ಮಾಡಿಕೊಂಡಿದ್ದಾರೆ.
ಮೇ 23, 2000ದ ಸಚಿವ ಸಂಪುಟ ಕಾರ್ಯದರ್ಶಿ ಇಲಾಖೆ ಆದೇಶ ಹೊರಡಿಸಿತ್ತು. ಅದರಂತೆ ಮಂತ್ರಿಗಳು ತಮ್ಮ ವೈಯಕ್ತಿಕ ಸಹಾಯಕರಾಗಿ ಸಂಬಂಧಿಗಳನ್ನು ನೇಮಕ ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


