ದೇಶ

'ದಾಖಲೆ ಚಳಿ'ಗೆ ದೆಹಲಿ ಗಡಗಡ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭಾನುವಾರ ಕನಿಷ್ಟ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

'ದಾಖಲೆ ಚಳಿ'ಗೆ ದೆಹಲಿ ಗಡಗಡ
ನವದೆಹಲಿಯಲ್ಲಿ ಆವರಿಸಿರುವ ದಟ್ಟ ಮಂಜು (ಸಂಗ್ರಹ ಚಿತ್ರ)
Published On :

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದಾಖಲೆ ಪ್ರಮಾಣದಲ್ಲಿ ಉಷ್ಣಾಂಶ ಕುಸಿತವಾಗಿದ್ದು, ಭಾನುವಾರ ಕನಿಷ್ಟ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇಂದು 2.6ಡಿಗ್ರಿಯಷ್ಟು ಕನಿಷ್ಟ ಉಷ್ಣಾಂಶ ದಾಖಲಾಗಿದ್ದು, ಇದು ಪ್ರಸಕ್ತ ಸಾಲಿನ ಅತ್ಯಂತ ಕಡಿಮೆ ಉಷ್ಣಾಂಶವೆಂದು ತಿಳಿದುಬಂದಿದೆ. ರಾಜಧಾನಿಯಾದ್ಯಂತ ಮುಂಜುಕವಿದ ವಾತಾವರಣವಿದ್ದು, ಇಂದು ಬರೊಬ್ಬರಿ 55 ವಿಮಾನಗಳು ಮತ್ತು 70 ರೈಲುಗಳ ಸಂಚಾರದಲ್ಲಿ ಅಸ್ತವ್ಯಸ್ತವಾಗಿವೆ ಎಂದು ತಿಳಿದುಬಂದಿದೆ. 50 ಮೀಟರ್‌ಗಿಂತ ದೂರವಿರುವ ಯಾವುದೇ ವಸ್ತುಗಳು ಕಾಣದಷ್ಟರ ಮಟ್ಟಿಗೆ ದಟ್ಟವಾಗಿ ಮಂಜು ಆವರಿಸಿಕೊಂಡಿದೆ.

ಒಟ್ಟು 55 ವಿಮಾನಗಳ ಸಂಚಾರ ಸಮಯದಲ್ಲಿ ವಿಳಂಬವಾಗಿದ್ದು, ದಟ್ಟ ಮಂಜಿನಿಂದಾಗಿ 3 ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಹಳಿಗಳ ಮೇಲೆಯೂ ದಟ್ಟ ಮಂಜು ಆವರಿಸಿದ್ದು, 70 ರೈಲುಗಳ ಸಂಚಾರ ವಿಳಂಬವಾಗಿವೆ. ಈ ಪೈಕಿ ಉತ್ತರ ಭಾರತದ ರಾಜ್ಯಗಳಿಗೆ ಸಂಚಾರ ಕೈಗೊಂಡಿದ್ದ 50 ರೈಲುಗಳ ಸಂಚಾರ ವಿಳಂಬವಾಗಿದೆ ಎಂದು ಮೂಲಗಳ ತಿಳಿಸಿವೆ. ನಿನ್ನೆ ಇದೇ ದೆಹಲಿಯಲ್ಲಿ ಕನಿಷ್ಟ 4.8 ಡಿಗ್ರಿ ಕನಿಷ್ಟ ಉಷ್ಣಾಂಶ ದಾಖಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.