ದೇಶ

ರಸ್ತೆಯಲ್ಲಿ ಬಿದ್ದಿದ್ದ ಕೋಟಿ ಕೋಟಿ ಹಣ ಬಾಚಲು ಮುಗಿಬಿದ್ದ ಜನ!

ಹಣ ಎಂದರೆ ಹೆಣ ಕೂಡ ಬಾಯಿಬಿಡುತ್ತದೆ..

ರಸ್ತೆಯಲ್ಲಿ ಬಿದ್ದಿದ್ದ ಕೋಟಿ ಕೋಟಿ ಹಣ ಬಾಚಲು ಮುಗಿಬಿದ್ದ ಜನ!
ರಸ್ತೆಯಲ್ಲಿ ಬಿದ್ದಿದ್ದ ನೋಟುಗಳನ್ನು ಜನರು ಬಾಚುತ್ತಿರುವ ದೃಶ್ಯ
Published On :

ಗ್ಲೌಸೆಸ್ಟರ್/ಹಾಂಕಾಂಗ್: ಹಣ ಎಂದರೆ ಹೆಣ ಕೂಡ ಬಾಯಿಬಿಡುತ್ತದೆ ಎಂಬ ಗಾದೆ ಇದೆ. ಅದೇ ಹಣ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೆ ಜೀವಂತ ಮನುಷ್ಯರು ಬಿಡ್ತಾರಾ..!

ಹಾಂಕಾಂಗ್‌ನ ಗ್ಲೌಸೆಸ್ಟರ್‌ನಲ್ಲಿ ಆಗಿದ್ದು ಅದೆ. ರಸ್ತೆಯಲ್ಲಿ ಬಿದ್ದಿದ್ದ ನೋಟುಗಳನ್ನು ಜನರು ತಾ ಮುಂದು ನಾ ಮುಂದು ಅಂತ ಬಾಚಿಕೊಂಡ್ರು..

ಜಿ4 ಎಸ್ ಕಂಪನಿಯ ಹಣ ಸಾಗಣೆ ವ್ಯಾನ್‌ನಲ್ಲಿ 30 ಪೆಟ್ಟಿಗೆಗಳಲ್ಲಿ 525 ಮಿಲಿಯನ್ ಹಾಂಕಾಂಗ್ ಡಾಲರ್ ಅಂದ್ರೆ ಸುಮಾರು 430 ಕೋಟಿ ರುಪಾಯಿ ಮೌಲ್ಯದ ಹಣ ಸಾಗಿಸಲಾಗುತ್ತಿತ್ತು. ಈ ವೇಳೆ ವ್ಯಾನ್‌ನ ಡಿಕ್ಕಿ ತೆರೆದುಕೊಂಡು 3 ಪೆಟ್ಟಿಗೆಗಳು ಕೆಳಕ್ಕೆ ಬಿದ್ದಿವೆ. ಬಿದ್ದ ರಭಸಕ್ಕೆ ಪೆಟ್ಟಿಗೆಯ ಬಾಗಿಲು ತೆರೆದು 30 ಕೋಟಿ ರು. ಹಣ ದಾರಿಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದವೆ.

ಇದರ ಪರಿವೇ ಇಲ್ಲದೆ ಚಾಲಕ ಹಣವನ್ನು ತಲುಪಿಸಬೇಕಾದ ಸ್ಥಳಕ್ಕೆ ಹೋಗಿ ನೋಡಿದಾಗ ಎಡವಟ್ಟಾಗಿರುವುದು ಗಮನಕ್ಕೆ ಬಂದಿದೆ. ಅಷ್ಟರದಲ್ಲಿ ಹಾದಿಹೋಕರು, ಟ್ಯಾಕ್ಸಿ ಚಾಲಕರು ರಸ್ತೆಯಲ್ಲಿ ಬಿದ್ದಿದ್ದ ದುಡ್ಡು ಬಾಚಿಕೊಂಡಿದ್ದಾರೆ.

ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, 'ರಸ್ತೆಯಲ್ಲಿ ಚೆಲ್ಲಾಡಿದ್ದ ದುಡ್ಡನ್ನು ಕೂಡಲೇ ವಾಪಸು ಕೊಡದಿದ್ದರೆ ಕಳ್ಳತನದ ಕೇಸ್‌ ಜಡಿಯಬೇಕಾಗುತ್ತದೆ' ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.. ಈಗಾಗಲೇ 16 ಕೋಟಿ ರೂ.ನಷ್ಟು ಹಣ ವಾಪಸ್‌ ಸಿಕ್ಕಿದೆಯಂತೆ. ಇನ್ನುಳಿದ ಹಣ ಪಡೆಯಲು ಪೊಲೀಸರು, ನೋಟಿನ ನಂಬರ್​ ಪಡೆದು ತನಿಖೆ ಪತ್ತೆ ಕಾರ್ಯ ಮುಂದುವರಿಸಿದ್ದಾರೆ..


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.