ದೇಶ

ಅಂತ್ಯ ಸಂಸ್ಕಾರ ವೇಳೆ ಎದ್ದು ಬಂದ ವೃದ್ಧ

ಗೋವುಗಳಿಗೆ ಮೇವು ಹಾಕುತ್ತಿದ್ದ ವೇಳೆ ದೀಪಕ್ ಸಿಂಗ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು...

ಅಂತ್ಯ ಸಂಸ್ಕಾರ ವೇಳೆ ಎದ್ದು ಬಂದ ವೃದ್ಧ
ಮೃತಪಟ್ಟಿದ್ದ ವೃದ್ಧ ದೀಪಕ್ ಸಿಂಗ್
Published On :

ರಾಜಸ್ಥಾನ: ಅಂತ್ಯ ಸಂಸ್ಕಾರದ ಸಮಯದಲ್ಲಿ, ಮೃತಪಟ್ಟಿದ್ದ ವೃದ್ಧನೊಬ್ಬ ಎದ್ದು ಬಂದು ಎಲ್ಲರಿಗೂ ಶಾಕ್ ನೀಡಿದ ಘಟನೆ ರಾಜಸ್ಥಾನದ ಭೀಲವಾಡದಲ್ಲಿ ನಡೆದಿದೆ. ದೀಪಕ್ ಸಿಂಗ್(72) ಚಿತೆಯಿಂದ ಎದ್ದು ಬಂದು ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದ ವೃದ್ಧ.

ಗೋವುಗಳಿಗೆ ಮೇವು ಹಾಕುತ್ತಿದ್ದ ವೇಳೆ ದೀಪಕ್ ಸಿಂಗ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಈ ವೇಳೆ ದೀಪಕ್ ಸಿಂಗ್ ಮೊಮ್ಮಗ ಬಂದು ನೋಡಿದಾಗ ತಾತನ ದೇಹ ತಟಸ್ತವಾಗಿದ್ದನ್ನು ಕಂಡು ದಂಗಾದನು. ಕೂಡಲೇ ವೈದ್ಯರಿಗೆ ಸುದ್ದಿ ಮುಟ್ಟಿಸಲಾಯಿತು.

ಸ್ಥಳಕ್ಕೆ ಧಾವಿಸಿದ ವೈದ್ಯರು, ಪರಿಶೀಲನೆ ನಡೆಸಿ ತಾತಾ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ದೀಪಕ್ ಸಿಂಗ್ ಸಾವಿನಿಂದಾಗಿ ಕುಟುಂಬದ ರೋಧನ ಮುಗಿಲು ಮುಟ್ಟಿತ್ತು. ಅಂತ್ಯಕ್ರಿಯೆಗಾಗಿ ಸಂಬಂಧಿಕರೆಲ್ಲರು ಸೇರಿದರು.

ಮೆರವಣಿಗೆಯ ನಂತರ ಸಂಜೆಯ ವೇಳೆಗೆ ಚಿತೆಯ ಮೇಲೆ ಶವ ಮಲಗಿಸಿ ಅಂತ್ಯವಿಧಿಯ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಲಾಯಿತು. ಬಳಿಕ ಅಗ್ನಿ ಸ್ಪರ್ಷಕ್ಕೆ ಹಿರಿಯ ಮಗ ಮುಂದಾದ, ಇನ್ನೇನೂ ಅಗ್ನಿ ಸ್ಪರ್ಷ ಮಾಡಬೇಕಿತ್ತು, ಆ ವೇಳೆ ಶವ ಇದ್ದಕ್ಕಿದ್ದಂತೆ ಅಲುಗಾಡತೊಡಗಿತು.

ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದ ತಾತ ಚಿತೆಯಿಂದ ಎದ್ದು ಬಂದು ಎಲ್ಲರಿಗು ಶಾಕ್ ನೀಡಿದನು. ಅಲ್ಲಿ ಸೇರಿದ್ದ ಸಂಬಂಧಿಕರ ಪೈಕಿ ಕೆಲವರು ಹೆದರಿ ಓಡಿ ಹೋದರು.

ಈ ವೇಳೆ 'ನಾನು ಬದುಕಿರುವಾಗಲೇ ನನ್ನನ್ನು ಸುಟ್ಟು ಹಾಕಲು ನಿರ್ಧರಿಸಿದ್ದೀರಾ' ಎಂದು ತಾತ ಎಲ್ಲರನ್ನು ಗದರಿಸಿದರು.

ನನ್ನ ತಾತಾ ನಿಶ್ಯಕ್ತಿಯಿಂದ ಪ್ರಜ್ಞೆ ತಪ್ಪಿದ್ದರು ಅದನ್ನು ತಪ್ಪಾಗಿ ಭಾವಿಸಿ ಅಂತ್ಯ ಸಂಸ್ಕಾರ ನಡೆಸಲು ತಯಾರಿ ನಡೆಸಿದೆವು ಎಂದು ಮೊಮ್ಮಗ ಸ್ಪಷ್ಪಪಡಿಸಿದ್ದಾನೆ.

ಈ ಘಟನೆ ಭೀಲವಾಡ ಪ್ರದೇಶಾದ್ಯಂತ ತಲ್ಲಣ ಮೂಡಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.