ದೇಶೀ ಗ್ಲೈಡ್ ಬಾಂಬ್ ಪರೀಕ್ಷೆ ಯಶಸ್ವಿ
ದೇಶೀಯವಾಗಿ ಅಭಿವೃದ್ಧಿಪಡಿಸಿದ ದೇಶದ ಮೊದಲ ಗ್ಲೈಡ್ ಬಾಂಬ್...

ನವದೆಹಲಿ: ದೇಶೀಯವಾಗಿ ಅಭಿವೃದ್ಧಿಪಡಿಸಿದ ದೇಶದ ಮೊದಲ ಗ್ಲೈಡ್ ಬಾಂಬ್ (ತೇಲುತ್ತಾ ಸಾಗುವ ಬಾಂಬ್) ಪರೀಕ್ಷೆ ಶುಕ್ರವಾರ ಯಶಸ್ವಿಯಾಗಿದೆ
ಒಡಿಶಾ ಕರಾವಳಿಯಲ್ಲಿ ವಾಯುಸೇನೆ ವಿಮಾನ ಇಳಿಸಿದ ಈ ಬಾಂಬ್ 100 ಕಿ.ಮೀ ದೂರದ ಗುರಿಯನ್ನು ಯಶಸ್ವಿಯಾಗಿ ಭೇದಿಸಿದೆ. ಈ ಮೂಲಕ ನಿಖರವಾಗಿ ಗುರಿ ತಲುಪಬಲ್ಲ ಪೂರ್ವ ನಿರ್ದೇಶಿತ ಬಾಂಬ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ಭಾರತ ಈಗ ಸ್ವಾವಲಂಬನೆ ಸಾಧಿಸಿದಂತಾಗಿದೆ.
ಕ್ಷಿಪಣಿಗಿಂತ ಭಿನ್ನ
ಕ್ಷಿಪಣಿಗೆ ಹೋಲಿಸಿದರೆ ಈ ಬಾಂಬ್ ಭಿನ್ನ. ಇದರಲ್ಲಿ ವಿಶೇಷ ರೀತಿಯ ನೇವಿಗೇಷನ್ ವ್ಯವಸ್ಥೆ ಅಳವಡಿಸಲಾಗಿರುತ್ತದೆ. ಅದರಂತೆ ಈ ಬಾಂಬ್ 100 ಕಿ.ಮೀ. ದೂರದ ಗುರಿ ಭೇದಿಸುವಂತೆ ನೋಡಿಕೊಳ್ಳಲಾಗುತ್ತದೆ.
ಕ್ಷಿಪಣಿಗೆ ಹೋಲಿಸಿದರೆ ಈ ರೀತಿಯ ಬಾಂಬ್‌ಗಳಲ್ಲಿ ಯಾವುದೇ ರೀತಿಯ ಮೋಟಾರ್‌ಗಳಿರುವುದಿಲ್ಲ. ನಿಗದಿತ ಗುರಿ ತಲುಪಲು ಸಣ್ಣ ನಿಯಂತ್ರಣ ಸಾಧನಗಳನ್ನಷ್ಟೇ ಅಳವಡಿಸಲಾಗಿರುತ್ತದೆ. ಹಾಗಾಗಿ ಈ ರೀತಿಯ ಬಾಂಬ್‌ಗಳ ತಯಾರಿಕೆ ಮತ್ತು ನಿರ್ವಹಣೆಗೆ ತಗಲುವ ವೆಚ್ಚ ಕಡಿಮೆ. ವಿಶೇಶವೆಂದರೆ ಈ ರೀತಿಯ ಬಾಂಬ್‌ಗಳನ್ನು ಶತ್ರುಗಳ ಕ್ಷಿಪಣಿ ಸುರಕ್ಷಾ ವ್ಯವಸ್ಥೆಯ ವ್ಯಾಪ್ತಿ ಪ್ರವೇಶಿಸುವ ಮೊದಲೇ ವಿಮಾನದ ಮೂಲಕ ಇಳಿಸಬಹುದು. ನಂತರ ಇವು ತಮ್ಮಷ್ಟಕ್ಕೆ 100 ಕಿ.ಮೀ ವ್ಯಾಪ್ತಿಯ ಗುರಿ ತಲುಪುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


