ಮಕ್ಕಳನ್ನ ಕೊಂದಾಯ್ತು, ಮುಂದೆ ಇನ್ಯಾರನ್ನ?

ಇಸ್ಲಾಮಾಬಾದ್: ಮಕ್ಕಳನ್ನು ಕೊಂದಾಯ್ತು ಇನ್ನೇನು? ಇಂಥ ಪ್ರಶ್ನೆ ಕೇಳಿದ್ದು 132 ಮಕ್ಕಳನ್ನು ನಿರ್ದಯವಾಗಿ ಹತ್ಯೆ ಮಾಡಿದ ಉಗ್ರರು.
ಮುಗ್ಧ ಜೀವಗಳನ್ನು ಆಹುತಿ ಪಡೆದ ಬಳಿಕ ಇನ್ನೇನು ಎನ್ನುವ ಪಾತಕಿಗಳ ಪ್ರಶ್ನೆಗೆ ಉತ್ತರಿಸಿದ ಪಾಕಿಸ್ತಾನ ತಾಲಿಬಾನ್ ನಾಯಕತ್ವ 'ಇನ್ನು ಸೈನಿಕರು ಬರುತ್ತಾರೆ ಅವರನ್ನೂ ಮುಗಿಸಿ ಹುತಾತ್ಮರಾಗಿ' ಎಂಬ ಸೂಚನೆ ನೀಡಿದ್ದರಂತೆ. ಒಟ್ಟಾರೆ 7 ಗಂಟೆ ಕಾಲ ನಡೆದ ಹತ್ಯಾಕಾಂಡದ ವೇಳೆ ಉಗ್ರರು ಮೊಬೈಲ್ ಮೂಲಕ ನಡೆಸಿದ ಮಾತುಕತೆ ವಿವರವನ್ನು ಪಾಕ್ ಸೇನೆ ಛೇದಿಸಿ ಪಡೆಕೊಂಡಿದೆ.
ವಿಚಿತ್ರ ಖುಷಿ: ಈ ಉಗ್ರರು ಎಂಥ ಕಟುಕ ಮನಸ್ಥಿತಿಯವರೆಂದರೆ ಮಕ್ಕಳನ್ನು ಕೊಲ್ಲುವಾಗ ವಿಚಿತ್ರ ಖುಷಿ ಅನುಭವಿಸುತ್ತಿದ್ದರಂತೆ. ಈ ವಿಚಾರವನ್ನು ಉಗ್ರ ದಾಳಿಯಿಂದ ಪಾರಾದ 14 ವರ್ಷದ ಶಹನವಾಜ್ ಖಾನ್ ಎನ್ನುವ ಬಾಲಕ ಬಿಚ್ಚಿಟ್ಟಿದ್ದಾನೆ. ಉಗ್ರರು ದಾಳಿ ನಡೆಸಿದಾಗ ಇಂಗ್ಲಿಷ್ ತರಗತಿ ನಡೆಯುತ್ತಿತ್ತು.
ಕೊಠಡಿಯೊಳಗೆ ಮಿಲಿಟರಿ ಸಮವಸ್ತ್ರದಲ್ಲಿ ಬಂದೂಕುಧಾರಿ ಉಗ್ರರು 8 ವಿದ್ಯಾರ್ಥಿಗಳಿಗೆ ಕೈ ಎತ್ತುವಂತೆ ಸೂಚಿಸಿದರು. ಇಡೀ ತರಗತಿಯೇ ಕೈ ಎತ್ತಿತ್ತು. ಎಂಟು ವಿದ್ಯಾರ್ಥಿಗಳನ್ನಷ್ಟೇ ಆಯ್ಕೆ ಮಾಡಿದ ಅವರು ಕ್ಲಾಸಿನ ಮುಂದೆ ಹೋಗಿ ನಿಲ್ಲುವಂತೆ ಸೂಚಿಸಿದರು.
ನಂತರ ಶಿಕ್ಷಕರನ್ನು ಕುರ್ಚಿಯಲ್ಲಿ ಕೂರಿಸಿ ನಿಮ್ಮ ಪ್ರೀತಿ ಪಾತ್ರರು ಕಣ್ಣ ಮುಂದೆಯೇ ಸಾಯುವುದನ್ನು ನೋಡಿ ಎನ್ನುತ್ತಾ ಮಕ್ಕಳ ಮೇಲೆ ಗುಂಡಿನಮಳೆಗರೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


