ಉತ್ತಮ ಆಡಳಿತ: ಪ್ರಧಾನಿ ಮೋದಿಗೆ 2ನೇ ಸ್ಥಾನ

ಬೀಜಿಂಗ್: ಉತ್ತಮ ಆಡಳಿತ ನೀಡುತ್ತಿರುವ ಜಗತ್ತಿನ 30 ಪ್ರಭಾವಿ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಸ್ಥಾನದಲ್ಲಿದ್ದು, ಚೀನಾದ ಅಧ್ಯಕ್ಷ ಕ್ಸೀ ಜಿನ್‌ಪಿಂಗ್ ಅಗ್ರಸ್ಥಾನದಲ್ಲಿದ್ದಾರೆ.
ನಾಗರೀಕರ ವಿಶ್ವಾಸ ಅರ್ಹತೆ ಆಧರಿಸಿ ಜಪಾನಿನ ಮಾರುಕಟ್ಟೆ ಸಂಶೋಧನಾ ಸಂಸ್ಥೆಯ ಈ ಸರ್ವೇ ಮಾಡಿದೆ. ಸರ್ವೇ ಪ್ರಕಾರ, ಉನ್ನತ ಪ್ರದರ್ಶನ ನೀಡುತ್ತಿರುವ ಪ್ರಭಾವಿ ನಾಯಕ ಪಟ್ಟಿಯಲ್ಲಿ ಚೀನಾದ ಅಧ್ಯಕ್ಷ ಕ್ಸೀ ಜಿನ್‌ಪಿಂಗ್ ಮೊದಲ ಸ್ಥಾನದಲ್ಲಿದ್ದಾರೆ. ನಂತರ ಸ್ಥಾನದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಇದ್ದು, ಜರ್ಮನಿಯ ಕುಲಪತಿ ಏಂಜೆಲಾ ಮರ್ಕೆಲ್ ಮೂರನೇ ಸ್ಥಾನದಲ್ಲಿದ್ದಾರೆ.
ಟೋಕಿಯೋ ಮೂಲದ ಜಿಎಂಒ ಸಂಶೋಧನೆಯಲ್ಲಿ 26 ಸಾವಿರ ಮಂದಿಯನ್ನು ಸರ್ವೇಗೊಳಪಡಿಸಲಾಗಿತ್ತು. ಅದರಂತೆ ಹತ್ತರಲ್ಲಿ ಕ್ಸೀ ಜಿನ್‌ಪಿಂಗ್ 7.5, ಮೋದಿ 7.3, ಮರ್ಕೆಲ್ 7.2 ಅಂಕ ಗಳಿಸಿ ಟಾಪ್ ಮೂರು ಸ್ಥಾನ ಪಡೆದಿದ್ದಾರೆ.
ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುತ್ತಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ 6.6 ಅಂಕಿ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 6.5 ಅಂಕ ಸಂಪಾದಿಸಿರುವ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಐದನೇ ಸ್ಥಾನದಲ್ಲಿದ್ದಾರೆ.
ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್, ಜಪಾನಿನ ಪ್ರಧಾನಿ ಶಿನ್ಝೋ ಅಬೆ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ರಮವಾಗಿ ಆರು, ಏಳು, ಎಂಟನೇ ಸ್ಥಾನದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


