ದೇಶ

ರಾಜಸ್ಥಾನದಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟ: 10 ಮಂದಿ ಸಜೀವ ದಹನ

ರಾಜಸ್ಥಾನದಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟ: 10 ಮಂದಿ ಸಜೀವ ದಹನ
ಗ್ಯಾಸ್ ಟ್ಯಾಂಕರ್
Published On :

ಜೈಪುರ: ಜೈಪುರದ ಬಿಲ್‌ಪುರ ನಗರದಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡು 10 ಮಂದಿ ಸಜೀವವಾಗಿ ದಹನವಾದ ಭೀಕರ ದುರಂತ ಶನಿವಾರ ಬೆಳಗಿನ ಜಾವ ನಡೆದಿದೆ.

ರಾಜಸ್ಥಾನ ರಾಜಧಾನಿಯಲ್ಲಿ ಈ ದುರ್ಘಟನೆಯಲ್ಲಿ 12ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ದೆಹಲಿ -ಜೈಪುರ ಹೆದ್ದಾರಿಯಲ್ಲಿ ಬೈಕ್‌ಗಳನ್ನು ಸಾಗಿಸುತ್ತಿದ್ದ ಟ್ರಕ್‌ ಗ್ಯಾಸ್‌ ಟ್ಯಾಂಕರ್‌ಗೆ ಡಿಕ್ಕಿಯಾಗಿ ಸ್ಪೋಟಗೊಂಡಿದೆ. ಡಿಕ್ಕಿಯಾದ ಟ್ರಕ್‌ ಸೇರಿದಂತೆ ಸ್ಥಳದಲ್ಲಿದ್ದ 7 ವಾಹನಗಳು ಬೆಂಕಿಗಾಹುತಿಯಾದೆ. ಮೃತರಲ್ಲಿ ಮೂವರ ಗುರುತು ಪತ್ತೆಯಾಗಿದ್ದು ದಕ್ಷಿಲ್(6), ರಾಧಾಮೋಹನ್(40) ಮತ್ತು ವಿನೋದ್(37) ಎಂದು ಗುರುತಿಸಲಾಗಿದೆ ಎಂದು ಜೈಪುರ ಗ್ರಾಮೀಣ ಎಸ್‌ಪಿ ನಿತೀನ್ ದೀಪ್ ಹೇಳಿದ್ದಾರೆ.

ಗಂಭೀರವಾಗಿ ಸುಟ್ಟ ಗಾಯಗೊಳಗಾಗಿರುವ 12 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳದಲ್ಲಿ ಬೆಂಕಿ ನಂದಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.