ಈಜುಕೊಳ ದುರಂತ ರು.2 ಕೋಟಿ ಪರಿಹಾರ
ಆರು ವರ್ಷಗಳ ಹಿಂದೆ ಬೆಂಗಳೂರಿನ ಜಯನಗರ ಈಜುಕೊಳದಲ್ಲಿ ಮೃತಪಟ್ಟಿದ್ದ ಸಾಫ್ಟ್‌ವೇರ್...

ನವದೆಹಲಿ: ಆರು ವರ್ಷಗಳ ಹಿಂದೆ ಬೆಂಗಳೂರಿನ ಜಯನಗರ ಈಜುಕೊಳದಲ್ಲಿ ಮೃತಪಟ್ಟಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಸ್ಮೃತಿ ರಂಜನ್ ಶರ್ಮ ಅವರ ಕುಟುಂಬಕ್ಕೆ ರು.2 ಕೋಟಿ ಪರಿಹಾರ ನೀಡುವಂತೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿದೆ.
ಬೆಂಗಳೂರು ಮಹಾನಗರ ಪಾಲಿಕೆ 50 ಲಕ್ಷ ಪಾವತಿಸಬೇಕು, ಈಜುಕೊಳಕ್ಕೆ ವಿಮೆ ಒದಗಿಸಿದ್ದ ಓರಿಯಂಟಲ್ ಇನ್ಷುರೆನ್ಸ್ ಕಂಪನಿ ರು.16 ಲಕ್ಷ ಹಾಗೂ ಈಜುಕೊಳ ಗುತ್ತಿಗೆ ಪಡೆದಿದ್ದ ಮೆಸರ್ಸ್ ಪಿ.ಎಂ ಸ್ವಿಮ್ಮಿಂಗ್ ಸೆಂಟರ್ ರು. 1.34 ಕೋಟಿ ಪಾವಿತಸಬೇಕು ಎಂದು ಆಯೋಗವು ಬುಧವಾರ ನೀಡಿರುವ ತೀರ್ಪಿನಲ್ಲಿ ತಿಳಿಸಿದೆ.
ಪರಿಹಾರ ಮೊತ್ತವನ್ನು 90 ದಿನಗಳಲ್ಲಿ ಪಾವತಿಸಬೇಕು. ವಿಳಬಂವಾದರೆ ಶೇ.12ರಷ್ಟು ಬಡ್ಡಿ ಸಹಿತ ಪಾವತಿಸಬೇಕು ಎಂದೂ ಸೂಚಿಸಿದೆ. ಈಜುಕೊಳದಲ್ಲಿ ಮೃತಪಟ್ಟ ಪ್ರಕರಣಗಳ ಪೈಕಿ ಅತಿ ಹೆಚ್ಚು ಪರಿಹಾರ ಘೋಷಿಸಿರುವ ಪ್ರಕರಣ ಇದಾಗಿದೆ.
ಜಯನಗರದಲ್ಲಿರುವ ಈಜುಕೊಳವನ್ನು ಪಿ.ಎಂ ಸ್ವಿಮ್ಮಿಂಗ್ ಸೆಂಟರ್ 2004ರಲ್ಲೇ 35 ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿದೆ. ಇಲ್ಲಿ ಈಜು ತರಬೇತಿ ಮತ್ತು ಈಜುವ ವ್ಯವಸ್ಥೆ ಕಲ್ಪಿಸುತ್ತಿದೆ. 2-4 2008ರಿಂದ 22-4-2008ರವರೆಗೆ ಪಿ.ಎಂ ಸ್ಮಿಮ್ಮಿಂಗ್ ಸೆಂಟರ್ ಆಯೋಜಿಸಿದ್ದ ಈಜು ತರಬೇತಿಗೆ ಜೆ.ಪಿ ಸ್ಮೃತಿ ರಂಜನ್ ಶರ್ಮ ಸೇರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


