ದೇಶ

ಜನತಾ ಪಕ್ಷಗಳ ವಿಲೀನಕ್ಕೆ ಅರ್ಥವಿಲ್ಲ: ಗಿರಿರಾಜ್‌ ಸಿಂಗ್‌

ಜನತಾ ಪಕ್ಷಗಳ ವಿಲೀನಕ್ಕೆ ಅರ್ಥವಿಲ್ಲ: ಗಿರಿರಾಜ್‌ ಸಿಂಗ್‌
ಗಿರಿರಾಜ್‌ ಸಿಂಗ್‌(ಸಂಗ್ರಹ ಚಿತ್ರ)
Published On :

ಮಥುರಾ: ಜನತಾ ಪರಿವಾರದ ಆರು ಘಟಕಗಳ ವಿಲೀನಕ್ಕೆ ಪ್ರಜಾಪ್ರಭುತ್ವದಲ್ಲಿ ಯಾವ ಅರ್ಥವೂ ಇಲ್ಲ ಎಂದು ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ಗಿರಿರಾಜ್‌ ಸಿಂಗ್‌ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಮುಲಾಯಂ ಸಿಂಗ್, ಲಾಲು ಪ್ರಸಾದ್‌, ನಿತಿಶ್‌ ಕುಮಾರ್‌, ಶರದ್‌ ಯಾದವ್‌ ಹಾಗೂ ಇತರೆ ನಾಯಕರು ಒಂದೇ ವೇದಿಕೆಗೆ ಬರುವ ನಿರ್ಧಾರಕ್ಕೆ ಪ್ರಜಾಪ್ರಭುತ್ವದಲ್ಲಿ ಯಾವುದೇ ಅರ್ಥವಿಲ್ಲ ಎಂದರು.

ಒಬ್ಬ ನಾಯಕನ ವಿಶ್ವಾಸಾರ್ಹತೆಯು ಆತನ ಬೆಂಬಲಿಗರ ಮೇಲೆ ಅವಲಂಬಿಸಿರುತ್ತದೆ. ಜನತಾ ಪರಿವಾರದವರು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆಯೇ ಹೊರತು ಜನರಿಗಾಗಿ ಅಲ್ಲ ಎಂದೂ ಅವರು ಟೀಕಿಸಿದ್ದಾರೆ.

ಮುಲಾಯಂ ಸಿಂಗ್‌ ಯಾದವ್‌ ಅವರ ನೇತೃತ್ವದಲ್ಲಿ ಸಮಾಜವಾದಿ ಪಕ್ಷ, ಜನತಾದಳ (ಜಾತ್ಯತೀತ), ಜನತಾದಳ (ಸಂಯುಕ್ತ) ಹಾಗೂ ರಾಷ್ಟ್ರೀಯ ಲೋಕದಳ ಪಕ್ಷಗಳು ಒಂದೇ ಪಕ್ಷದ ಅಡಿಯಲ್ಲಿ ವಿಲೀನಗೊಳಿಸಲು ಆ ಪಕ್ಷಗಳ ನಾಯಕರು ಇತ್ತೀಚಿಗೆ ನಿರ್ಧರಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.