ಎನ್‌ಟಿಆರ್ ಮೊಮ್ಮಗ ಜಾನಕಿ ರಾಮ್‌ಗೆ ಅಂತಿಮ ನಮನ
ಟಾಲಿವುಡ್ ಚಿತ್ರ ನಿರ್ಮಾಪಕ ಹಾಗೂ ಎನ್‌ಟಿಆರ್ ಮೊಮ್ಮಗ...

ನಲಗೊಂಡ: ಟಾಲಿವುಡ್ ಚಿತ್ರ ನಿರ್ಮಾಪಕ ಹಾಗೂ ಎನ್‌ಟಿಆರ್ ಮೊಮ್ಮಗ ಜಾನಕಿರಾಮ್ ಅವರ ಅಂತಿಮ ಸಂಸ್ಕಾರ ಭಾನುವಾರ ನಡೆಯಲಿದೆ.
ಜಾನಕಿರಾವ್ ತಮ್ಮ ಟಾಟಾ ಸಫಾರಿ ಕಾರು ಚಾಲನೆ ಮಾಡಿಕೊಂಡು ಹೈದರಾಬಾದ್‌ನಿಂದ ವಿಜಯವಾಡಗೆ ಹೋಗುತ್ತಿದ್ದರು. ನಿನ್ನೆ ಸಂಜೆ ಸುಮಾರು 6.30ರ ವೇಳೆಗೆ ಕರ್ನೂಲ್ ಜಿಲ್ಲೆ, ಮುನಾಗಲ ಹಳ್ಳಿಯ ಕೋದಾಡ್ ಪ್ರದೇಶಕ್ಕೆ ತಲುಪುತ್ತಿದ್ದಂತೆ ಎದುರಿಗೆ ಬರುತ್ತಿದ್ದ ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಜಾನಕಿರಾಮ್ ತಲೆಗೆ ಹಾಗೂ ಹೃದಯಕ್ಕೆ ತೀವ್ರವಾದ ಪೆಟ್ಟು ಬಿದ್ದಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ್ದ ಪೊಲೀಸರು ಜಾನಕಿರಾಮ್ ಅವರನ್ನು ಕೋದಾಡ್‌ನ ಖಾಸಗೀ ಆಸ್ಪತ್ರೆಯೊಂದಕ್ಕೆ ದಾಖಲಿಸಲಿದ್ದರು. ಆದರೆ ಹೃದಯದ ಭಾಗಕ್ಕೆ ತೀವ್ರವಾಗಿ ಪೆಟ್ಟು ಬಿದ್ದ ಕಾರಣ ರಕ್ತಪರಿಚಲನೆಯಾಗದೆ ನಿನ್ನೆ ರಾತ್ರಿ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಂತಿಮ ದರ್ಶನ ಇಂದು ಮಧ್ಯಾಹ್ನ 2 ರವರೆಗೆ ಹೈದರಾಬಾದ್‌ನಲ್ಲಿರುವ ಜಾನಕಿರಾಮ್ ಅವರ ನಿವಾಸದಲ್ಲಿ ನಡೆಯುತ್ತಿದ್ದು, ಅಂತಿಮ ಸಂಸ್ಕಾರದ ವಿಧಿವಿಧಾನ ಸಂಜೆ 4 ಗಂಟೆಯಿಂದ ಪಂಜಾಗುಟ್ಟಾದ ಹಿಂದೂ ಸ್ಮಶಾನದಲ್ಲಿ ನೆರವೇರಲಿದೆ.
ಜಾನಕಿರಾಮ್ ಸಾವಿಗೆ ಅಚ್ಚರಿ ವ್ಯಕ್ತಪಡಿಸುತ್ತಿರುವ ಟಾಲಿವುಡ್ ಚಿತ್ರರಂಗ ಹಾಗೂ ರಾಜಕೀಯ ರಂಗದವರು ಈಗಾಗಲೇ ಜಾನಕಿರಾಮ್ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಅಲ್ಲದೆ, ನಿನ್ನೆ ರಾತ್ರಿಯಿಂದಲೇ ಜಾನಕಿರಾಮ್ ನಿವಾಸದಲ್ಲೇ ಇದ್ದು ಅಂತಿಮ ದರ್ಶನ ಪಡೆಯುತ್ತಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


