ಪ್ರತೀಕಾರ ತೀರಿಸಿಯೇ ಸಿದ್ಧ
ಜಮ್ಮು ಮತ್ತು ಕಾಶ್ಮೀರದಲ್ಲಿ 11 ಮಂದಿ ಯೋಧರನ್ನು ಕಳೆದುಕೊಂಡು ನೋವನ್ನು ಭಾರತ ಅನುಭವಿಸುತ್ತಿದ್ದರೆ...

ಜಮ್ಮು ಮತ್ತು ಕಾಶ್ಮೀರದಲ್ಲಿ 11 ಮಂದಿ ಯೋಧರನ್ನು ಕಳೆದುಕೊಂಡು ನೋವನ್ನು ಭಾರತ ಅನುಭವಿಸುತ್ತಿದ್ದರೆ, ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್, ಧರ್ಮ ಯುದ್ಧವನ್ನು ಗೆದ್ದೇ ಗೆಲ್ಲುತ್ತೇನೆ ಎನ್ನುವ ಮೂಲಕ ಭಾರತದ ಗಾಯಯಕ್ಕೆ ಉಪ್ಪು ಸವರಿದ್ದಾನೆ. ಕಣಿವೆ ರಾಜ್ಯದಲ್ಲಿ ಸರಣಿ ಆತ್ಮಾಹುತಿ ದಾಳಿ ಬಳಿಕ ಟ್ವೀಟ್ ಮಾಡಿರುವ ಪಾತಕಿ ಸಯೀದ್, ಧರ್ಮಯುದ್ಧವನ್ನು ತಡೆಯಲಾಗದು. ಕಾಶ್ಮೀರಕ್ಕೆ ಸ್ವಾತಂತ್ರ್ಯ ಸಿಕ್ಕೇ ಸಿಗುತ್ತದೆ. 1971 ರ ಘಟನೆಗೆ ಪ್ರತೀಕಾರ ತೀರಿಸಿಯೇ ತೀರಿಸುತ್ತೇವೆ.
ಗುಜರಾತ್ ಗಲಭೆ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುತ್ತೇವೆ. ಇನ್‌ಷಾ ಅಲ್ಲಾಹ್ ಎಂದಿದ್ದಾರೆ. ಈ ಮೂಲಕ ದಾಳಿಯಲ್ಲಿ ಪಾಕ್ ಕೈವಾಡ ಇರುವುದನ್ನು ಈತನೇ ಸ್ಪಷ್ಟಪಡಿಸಿದ್ದಾನೆ.
ಭಾರತದಿಂದ ಮುಕ್ತಿ ಪಡೆಯಲು ಕಾಶ್ಮೀರಿಗಳಿಗೆ ಪಾಕ್ ಸರ್ಕಾರ ನೆರವಾಗಬೇಕು ಎಂದೂ ಹೇಳಿದ್ದಾನೆ ಸಯೀದ್. ಭಾರತವು ಆಫ್ಘನ್‌ಗೆ ಸೇನೆ ಕಳುಹಿಸಬಹುದು ಎಂದರೆ ಮುಜಾಹಿದೀನ್‌ಗಳಿಗೂ ಕಾಶ್ಮೀರಕ್ಕೆ ತೆರಳುವ ಅಧಿಕಾರ ಇದೆ. ಕಾಶ್ಮೀರ ವಿವಾದವನ್ನು ಪರಿಹರಿಸದೇ ಇದ್ದಲ್ಲಿ ಇಂತಹ ಜಿಹಾದ್ ಮುಂದುವರಿಯಲಿದೆ ಎನ್ನುವ ಮೂಲಕ ಪ್ರಧಾನಿ ಮೋದಿಗೆ ಸಯೀದ್ ನೇರ ಎಚ್ಚರಿಕೆ ನೀಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


