ದೇಶ

ಐಐಐಟಿ ವಿಧೇಯಕ ಸಂಸತ್ತಿನ ಅನುಮತಿ

ವಿದ್ಯಾರ್ಥಿಗಳು ಪದವಿ ಪಡೆಯಲು ಮಾಹಿತಿ ತಂತ್ರಜ್ಞಾನ ಕಲಿಸುವ 4 ವಿದ್ಯಾಸಂಸ್ಥೆಗಳಿಗೆ...

ಐಐಐಟಿ ವಿಧೇಯಕ ಸಂಸತ್ತಿನ ಅನುಮತಿ
Published On :

ನವದೆಹಲಿ: ವಿದ್ಯಾರ್ಥಿಗಳು ಪದವಿ ಪಡೆಯಲು ಮಾಹಿತಿ ತಂತ್ರಜ್ಞಾನ ಕಲಿಸುವ 4 ವಿದ್ಯಾಸಂಸ್ಥೆಗಳಿಗೆ ಒಂದೇ ಆಡಳಿತ ಮಂಡಳಿ ಮಾಡುವ ಬಗೆಗಿನ ಪ್ರಸ್ತಾಪವನ್ನು ಸಂಸತ್ತಿನಲ್ಲಿ ಜಾರಿಗೊಳಿಸಲಾಯಿತು. ದಿ ಇಂಡಿಯನ್ ಇನ್ಸ್‌ಟಿಟ್ಯೂಟ್ಸ್ ಆಫ್ ಇನ್ಫರ್ಮೇಷನ್ ಆ್ಯಂಡ್ ಟೆಕ್ನಾಲಜಿ(ಐಐಐಟಿ) ಮಸೂದೆ 2014ರನ್ನು ರಾಜ್ಯಸಭೆ ಧ್ವನಿ ಮತದ ಮೂಲಕ ಜಾರಿ ಮಾಡಿದೆ.

ಈ ಮಸೂದೆಗೆ ನ.26ರಂದು ಸಮ್ಮತಿ ಸಿಕ್ಕಿದ್ದು, 4 ವಿದ್ಯಾಸಂಸ್ಥೆಗಳಿಂದ ತೇರ್ಗಡೆಯಾಗಿ ಬರುವ ವಿದ್ಯಾರ್ಥಿಗಳಿಗೀಗ ಪದವಿಯೂ ಸಿಗಲಿದೆ. ಉತ್ಮಮ ಶಿಕ್ಷಕ ವೃಂದವನ್ನು ಆಯ್ದು ತರಲು ಸರ್ಕಾರ ಮುಂದಾಗಿದೆ ಎಂದು ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ಯಾವುದೀ 4 ಐಐಐಟಿಗಳು?
ಅಲಹಾಬಾದ್, ಗ್ವಾಲಿಯರ್, ಜಬಲ್ಪುರ ಮತ್ತು ಕಾಂಚೀಪುರದಲ್ಲಿರುವ ಈ ಐಐಐಟಿಗಳಿಗೆ ಸ್ವಾಯತ್ತ ಸ್ಥಾನಮಾನ ನೀಡಲಾಗಿದೆ. 2008ರಿಂದ ತಮ್ಮ ಪದವಿಗಾಗಿ ಕಾದು ಕುಳಿತಿರುವ ಐಐಐಟಿ-ಕಾಂಚೀಪುರಂನ ವಿದ್ಯಾರ್ಥಿಗಳು ಇದೀಗ ನಿಟ್ಟುಸಿರು ಬಿಡುವಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.