ಬಿಜೆಪಿ 'ಭಾರತೀಯ ಜೋಕರ್ ಪಾರ್ಟಿ': ಅಭಿಷೇಕ್ ಬ್ಯಾನರ್ಜಿ
ಬಿಜೆಪಿ ಭಾರತೀಯ ಜೋಕರ್ ಪಕ್ಷ ಎಂದು ತೃಣಮೂಲ ಕಾಂಗ್ರೆಸ್‌ನ ಯುವ ಘಟಕದ...

ಕೊಲ್ಕತಾ: ಬಿಜೆಪಿ ಭಾರತೀಯ ಜೋಕರ್ ಪಕ್ಷ ಎಂದು ತೃಣಮೂಲ ಕಾಂಗ್ರೆಸ್‌ನ ಯುವ ಘಟಕದ ಅಧ್ಯಕ್ಷ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ನಡೆಸಿರುವ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ, ಬಿಜೆಪಿ ನಾಯಕರು ದಿನದಲ್ಲಿ ಐದು ಬಾರಿ ಬಟ್ಟೆ ಬದಲಿಸುತ್ತಾರೆ, ಹಾಗಾಗಿ, ಇದು ಭಾರತೀಯ ಜೋಕರ್ ಪಾರ್ಟಿ ಎಂದು ವ್ಯಂಗ್ಯವಾಡಿದ್ದಾರೆ
ಮಮತಾ ಬ್ಯಾನರ್ಜಿ ವಿರುದ್ಧ ಪ್ರಜಾಸತ್ತೀಯವಾಗಿ ಪ್ರತಿಭಟಿಸಲು ಬಿಜೆಪಿಗೆ ಸಾಧ್ಯವಿಲ್ಲ. ಪಶ್ಚಿಮ ಬಂಗಾಳದ ಜನತೆಗೆ ಶಾಂತಿ ಮತ್ತು ಸೌಹಾರ್ಧ ಬೇಕಿದೆ. ಇಂತಹ ಶಾಂತಿಯನ್ನು ಬಿಜೆಪಿ ಕದಡಲು ಯತ್ನಿಸುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಗಲಭೆ ಹೆಚ್ಚಾಗುತ್ತಿದೆ ಎಂದು ಅಭಿಷೇಕ್ ಆರೋಪಿಸಿದ್ದಾರೆ.
ಭಾರತದ ಪ್ರಧಾನಿ ನಮ್ಮ ದೇಶದಲ್ಲಿ ಇರುವುದಕ್ಕಿಂತ ವಿದೇಶದಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ. ಹಾಗಾಗಿ ಇವರು ವಿದೇಶಿ ಮಂತ್ರಿಯಾಗಿಬಿಟ್ಟಿದ್ದಾರೆ. ಇಂತಹವರು ನಮಗೆ ಬೇಕಿಲ್ಲ. ಖಾಸಗಿ ವಿಮಾನದಲ್ಲಿ ವಿದೇಶಕ್ಕೆ ತೆರಳಿ ದಿನಕ್ಕೆ ಐದಾರು ಬಾರಿ ಬಟ್ಟೆ ಬದಲಿಸುವುದೇ ಕೆಲಸವಾಗಿದೆ ನಮ್ಮ ಪ್ರಧಾನಿಗೆ.
ಆದರೆ, ಮಮತಾ ಬ್ಯಾನರ್ಜಿ ಅವರು ಬಹಳ ಸರಳವಾಗಿದ್ದು, ಚಿಕ್ಕ ಮನೆಯಲ್ಲಿ ವಾಸವಾಗಿದ್ದಾರೆ, ಅಲ್ಲದೇ, ಈಗಲೂ ಹಾವಾಯ್ ಚಪ್ಪಲಿ ಹಾಕಿಕೊಳ್ಳತ್ತಾರೆ.
ಮಮತಾ ಬ್ಯಾನರ್ಜಿ ಅಂತಹ ಸರಳಜೀವಿ ನಮ್ಮ ನಾಯಕರಾಗಬೇಕೇ ಹೊರತು, ಭಾರತದ ಪ್ರಧಾನಿಯಂತಲ್ಲ ಎಂದು ಪರೋಕ್ಷವಾಗಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


