ಹಿಟ್ ಅಂಡ್ ರನ್ ಪ್ರಕರಣ ಖುಲಾಸೆಯಾದ ನಟ ಸಲ್ಮಾನ್ ಖಾನ್
2015 ವರ್ಷ ಯಾರಿಗೆ ಎಷ್ಟು ಖುಷಿ ನೀಡಿದೆಯೋ ತಿಳಿದಿಲ್ಲ. ಆದರೆ ಬಾಲಿವುಡ್ ನ ಕೆಲ ನಿರ್ಮಾಪಕರಿಗೆ ಮತ್ತು ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಮಾತ್ರ ಭಾರಿ ಖುಷಿ ನೀಡಿದೆ. ಏಕೆಂದರೆ ದಶಕದಿಂದ ನಟ ಸಲ್ಮಾನ್...

2015 ವರ್ಷ ಯಾರಿಗೆ ಎಷ್ಟು ಖುಷಿ ನೀಡಿದೆಯೋ ತಿಳಿದಿಲ್ಲ. ಆದರೆ ಬಾಲಿವುಡ್ ನ ಕೆಲ ನಿರ್ಮಾಪಕರಿಗೆ ಮತ್ತು ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಮಾತ್ರ ಭಾರಿ ಖುಷಿ ನೀಡಿದೆ. ಏಕೆಂದರೆ ದಶಕದಿಂದ ನಟ ಸಲ್ಮಾನ್ ಖಾನ್ ರ ಬೆನ್ನು ಬಿಡದೇ ಅಂಟಿಕೊಂಡಿದ್ದ ಹಿಟ್ ಅಂಡ್ ರನ್ ಪ್ರಕರಣಕ್ಕೆ ಬಾಂಬೇ ಹೈಕೋರ್ಟ್ ತಾರ್ಕಿಕವಾಗಿ ಅಂತ್ಯವಾಡಿದೆ.
ಈ ಹಿಂದೆ ಮುಂಬೈ ಸೆಷನ್ಸ್ ನ್ಯಾಯಾಲಯ ನೀಡಿದ್ದ 5 ವರ್ಷಗಳ ಸಜೆಯನ್ನು ಅಮಾನತು ಮಾಡಿದ ಬಾಂಬೆ ಹೈಕೋರ್ಟ್ ಪ್ರಕರಣದಿಂದ ನಟ ಸಲ್ಮಾನ್ ಖಾನ್ ರನ್ನು ಖುಲಾಸೆಗೊಳಿಸಿದೆ. ಆದರೆ ಈ ವೇಳೆ ಪ್ರಾಸಿಕ್ಯೂಷನ್ ನನ್ನು ತೀವ್ರ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ ಸಲ್ಮಾನ್ ಅಪರಾಧಿ ಎಂದು ಸಾಬೀತು ಪಡಿಸುವಲ್ಲಿ ಅದು ವಿಫಲವಾಗಿದೆ. ನ್ಯಾಯಾಲಯಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ ಎಂದು ಹೈಕೋರ್ಟ್ ಕಿಡಿ ಕಾರಿತ್ತು. ಹೀಗಾಗಿಯೇ ಪೀಠ ಸಲ್ಮಾನ್ ಖಾನ್ ನನ್ನು ನಿರಪರಾಧಿ ಎಂದು ಘೋಷಣೆ ಮಾಡಿದೆ ಎಂದು ತನ್ನ ತೀರ್ಪನ್ನು ಸಮರ್ಥಿಸಿಕೊಂಡಿತು.
ಅಲ್ಲದೆ ಪ್ರಕರಣ ಸಂಬಂಧ ಪೊಲೀಸರು ನೀಡಿದ ಸಾಕ್ಷ್ಯಾಧಾರಗಳಾದ ರಕ್ತದ ಮಾದರಿ, ಅಪಘಾತದ ವೇಳೆ ಕಾರು ಚಾಲನೆ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದ ಚಾಲಕನ ದ್ವಂದ್ವ ಹೇಳಿಕೆ ಮತ್ತು ಅಂದು ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಆಗಿದ್ದ ರವೀಂದ್ರ ಪಾಟಿಲ್ ನ ಹೇಳಿಕೆಗಳು ಆರೋಪವನ್ನು ಪುಷ್ಠೀಕರಿಸುತ್ತಿಲ್ಲ ಎಂದು ನ್ಯಾಯಾಧೀಶರಾದ ಜೋಷಿ ಅಭಿಪ್ರಾಯಪಟ್ಟಿದ್ದರು.
ನ್ಯಾಯಾಲಯದ ತೀರ್ಪಿನ ವಿರುದ್ಧ ಮೃತ ವ್ಯಕ್ತಿಯ ಕುಟುಂಬಸ್ಥರ ಆಕ್ರೋಶ
ಇನ್ನು ಈ ಪ್ರಕರಣ ಸಂಬಂಧ ನ್ಯಾಯಾಲಯ ನೀಡಿದ್ದ ತೀರ್ಪಿನ ವಿರುದ್ಧ ಮೃತ ವ್ಯಕ್ತಿಯ ಕುಟುಂಬಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂದಿನ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದ ನೂರುಲ್ಲಾ ಖಾನ್ ಅವರು ಮಗ ಬಾಂಬೆ ಹೈಕೋರ್ಟ್ ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


