ದೇವಾಯಾನಿ ಖೋಬ್ರಾಗಡೆ ಪ್ರಕರಣ

ಈ ಪ್ರಕರಣ 2013ರ ಅಂತ್ಯದಲ್ಲೇ ಬೆಳಕಿಗೆ ಬಂದಿತ್ತಾದರೂ ದೇಶಾದ್ಯಂತ ತೀವ್ರ ಸುದ್ದಿಗೆ ಗ್ರಾಸವಾಗಿದ್ದು ಮಾತ್ರ 2014ರ ಆರಂಭದಲ್ಲಿ. ಅಮೆರಿಕದಲ್ಲಿರುವ ಭಾರತೀಯ ರಾಜತಂತ್ರಜ್ಞೆ ದೇವಯಾನಿ ಖೋಬ್ರಾಗಡೆ ಅವರು ಮನೆಕೆಲಸದಾಕೆ ಮೇಲೆ ದೈಹಿಕ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿ ಅವರನ್ನು ಅಮೆರಿಕದ ಅಧಿಕಾರಿಗಳು ಬಂಧಿಸಿದ್ದರು.
ಆದರೆ ಬಂಧನಕ್ಕೂ ಮುನ್ನ ರಾಜತಂತ್ರ ನೀತಿಗಳನ್ನು ಪಾಲಿಸದ ಅಮೆರಿಕ ಅಧಿಕಾರಿಗಳು ಈ ಬಗ್ಗೆ ಭಾರತಕ್ಕೆ ಯಾವುದೇ ರೀತಿಯ ಮಾಹಿತಿ ನೀಡಿದೇ ಏಕಾಏಕಿ ಅವರನ್ನು ಬಂಧಿಸಿ ವಿಚಾರಣೆ ನಡೆಸಿತ್ತು. ದೇವಯಾನಿ ಅವರನ್ನು ತನಿಖಾಧಿಕಾರಿಗಳು ವಿವಸ್ತ್ರಗೊಳಿಸಿ ವಿಚಾರಣೆ ನಡೆಸಿದ್ದರು ಎಂಬ ವಿಚಾರ ಭಾರತದ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಅಮೆರಿಕದಲ್ಲಿ ಭಾರತೀಯ ರಾಯಭಾರಿಯಾಗಿದ್ದ ದೇವಯಾನಿ ಕೋಬ್ರಾಗಡೆ ಅವರ ಮನೆಕೆಲಸದಾಕೆ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಭಾರತೀಯ ಮೂಲದವರೇ ಆದ ಮನೆಕೆಲಸದಾಕೆ ದೂರು ಸಲ್ಲಿಕೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ತನಿಖಾಧಿಕಾರಿಗಳು ದೇವಯಾನಿ ಕೋಬ್ರಾಗಡೆ ಅವರನ್ನು ಬಂಧಿಸಿ ಅವರ ವಿರುದ್ಧ ದೈಹಿಕ ಹಲ್ಲೆ ಪ್ರಕರಣ ದಾಖಸಿದ್ದರು. ಇದಷ್ಟೇ ಅಲ್ಲದೇ ದೇವಯಾನಿ ಅವರ ವಿರುದ್ಧ ವೀಸಾ ವಂಚನೆ ಪ್ರಕರಣದಂತಹ ಗಂಭೀರ ಆರೋಪವನ್ನು ಮಾಡಿ ಅವರ ವಿರುದ್ಧ ತನಿಖೆಗೆ ಮುಂದಾಗಿದ್ದರು.
ಈ ಪ್ರಕರಣ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯಕ್ಕೆ ಹಿನ್ನಡೆಯಾಗಿದ್ದಲ್ಲದೇ, ಪರಸ್ಪರ ಕೆಸರೆರಚಾಟಕ್ಕೂ ಕಾರಣವಾಗಿತ್ತು. ಒಂದು ಹಂತದಲ್ಲಿಯಂತೂ ಭಾರತ, ರಾಜಧಾನಿ ನವದೆಹಲಿಯಲ್ಲಿದ್ದ ಅಮೆರಿಕ ರಾಯಭಾರ ಕಚೇರಿಗೆ ನೀಡಿದ್ದ ವಿವಿಧ ಬಗೆಯ ಸವಲತ್ತುಗಳನ್ನು ಏಕಾಏಕಿ ನಿಲ್ಲಿಸಿತ್ತು. ಅಲ್ಲದೆ ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ರಾಯಭಾರ ಕಚೇರಿ ಅಧಿಕಾರಿಗಳಿಗೂ ಕೂಡ ನೋಟಿಸ್ ನೀಡುವ ಮೂಲಕ ಅಮೆರಿಕಕ್ಕೆ ದಿಟ್ಟ ಉತ್ತರ ನೀಡಿತ್ತು. ಈ ಘಟನೆಯ ಬಳಿಕ ಕೊಂಚ ಮೆತ್ತಗಾಗಿದ್ದ ಅಮೆರಿಕ ಬಳಿಕ ತಾನು ಯಾವುದೇ ಕಾರಣಕ್ಕೂ ದೇವಯಾನಿ ವಿರುದ್ಧ ಪ್ರಕರಣದ ವಿಚಾರಣೆಯನ್ನು ಕೈ ಬಿಡುವುದಿಲ್ಲ ಎಂದು ತನ್ನ ವಾದವನ್ನು ಮುಂದಿಟ್ಟಿತು.
ಇನ್ನು ಪ್ರಕರಣದಲ್ಲಿ ಅಮೆರಿಕ ಅಧಿಕಾರಿಗಳು ಕೊಂಚ ಹೆಚ್ಚೇ ಎನ್ನುವಂತೆ ತಾವು ಮಾಡಿದ್ದೇ ಸರಿ ಎನ್ನುವಂತಹ ಮೊಂಡುವಾದ ಮುಂದಿಟ್ಟಿದ್ದರು. ಹೀಗಾಗಿ ಅಮೆರಿಕಕ್ಕೆ ದಿಟ್ಟ ಉತ್ತರ ನೀಡಿದ್ದ ಭಾರತ ದೇವಯಾನಿ ಖೋಬ್ರಾಗಡೆ ಅವರಿಗೆ ಭಡ್ತಿ ನೀಡಿದ್ದಲ್ಲದೇ ವಿಶ್ವಸಂಸ್ಥೆ ಕಚೇರಿಗೆ ಅವರನ್ನು ರವಾನೆ ಮಾಡಿತು. ಭಾರತದ ಈ ದಿಟ್ಟ ನಡೆಯಿಂದ ಕೊಂಚ ಮುಜುಗರಕ್ಕೊಳಗಾದ ಅಮೆರಿಕ ತದ ನಂತರ ಮೆತ್ತಗಾಯಿತು. ಈ ವಿಚಾರ ಸಂಸತ್ ಉಭಯ ಸದನಗಳಲ್ಲಿ ಕೋಲಾಹಲವನ್ನೇ ಎಬ್ಬಿಸಿತ್ತಲ್ಲದೇ, ದೇಶದಲ್ಲಿ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


