ದಾಖಲೆಯ ಏರಿಕೆ ಕಂಡ ನಿಫ್ಟಿ
ಭಾರತೀಯ ಷೇರುಮಾರುಕಟ್ಟೆಯಲ್ಲಿ ಭಾರಿ ವಹಿವಾಟು ನಡೆದ ಪರಿಣಾಮ ನಿಫ್ಟಿ 7, 809 ಅಂಶಗಳಿಗೇರಿದೆ.

ಮುಂಬೈ: ಭಾರತೀಯ ಷೇರುಮಾರುಕಟ್ಟೆಯಲ್ಲಿ ಭಾರಿ ವಹಿವಾಟು ನಡೆದ ಪರಿಣಾಮ ನಿಫ್ಟಿ 7, 809 ಅಂಶಗಳಿಗೇರಿದೆ.
ಮಾಹಿತಿ ಮತ್ತು ತಂತ್ರಜ್ಞಾನ, ವಾಹನ ಘಟಕಗಳ ಷೇರುಗಳಿಗೆ ಭಾರಿ ಬೇಡಿಕೆ ಕಂಡುಬಂದ ಹಿನ್ನಲೆಯಲ್ಲಿ ನಿಫ್ಟಿ 7, 809ಕ್ಕೆ ಏರಿಕೆಯಾಗಿದೆ. ಮಂಗಳವಾರ ಸಾಗರೋತ್ತರ ಷೇರುದಾರರು ಸುಮಾರು 412 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದು ಕೂಡ ಷೇರು ಮಾರುಕಟ್ಟೆ ಚೇತರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಆರ್ಥಿಕ ತಜ್ಞರ ಅಭಿಪ್ರಾಯದಂತೆ ಮುಂದಿನ ಒಂದು ವಾರಗಳ ಕಾಲ ಭಾರತೀಯ ಷೇರುಮಾರುಕಟ್ಟೆಯಲ್ಲಿ ಇದೇ ಪರಿಸ್ಥಿತಿ ಮುಂದುವರೆಯುವ ಭರವಸೆ ಇದ್ದು, ನಿಫ್ಟಿ 8000 ಗಡಿ ದಾಟುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಚಿಲ್ಲರೆ ಮಾರುಕಟ್ಟೆಯಲ್ಲಿಯೂ ವಿದೇಶಿ ಬಂಡವಾಳದಾರರು ಹೆಚ್ಚಾಗಿ ವಹಿವಾಟು ನಡೆಸುತ್ತಿದ್ದು, ನಿಫ್ಟಿ ಮತ್ತಷ್ಟು ಏರಿಕೆಯಾಗುವ ಸಂಭವವಿದೆ.
ಆದರೆ ರಿಲಯನ್ಸ್ ಆಯಿಲ್ ಇಂಡಸ್ಟ್ರಿ ಮತ್ತು ಒಎನ್ಜಿಸಿ ಸಂಸ್ಥೆಗಳ ಷೇರುಗಳಲ್ಲಿ ಶೇ.1ರಷ್ಟು ಕುಸಿತಕಂಡಿದ್ದು, ಟಿಸಿಎಸ್ನ ಷೇರುಗಳ ಮೌಲ್ಯ 2, 583ರು.ಗೆ ಏರಿಕೆಯಾಗಿದೆ. ಭಾರತೀಯ ಷೇರುಮಾರುಕಟ್ಟೆಯಂತೆಯೇ ಏಷ್ಯನ್ ಷೇರು ಮಾರುಕಟ್ಟೆ ಮತ್ತು ಯೂರೋಪಿಯನ್ ಷೇರುಮಾರುಕಟ್ಟೆಗಳು ಚೇತರಿಕೆ ಕಂಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


