ಈಗಿನ ಸುದ್ದಿ

ಪ್ರವಾಸಿ ತಾಣವಾಗಿ ವಿಶಾಖಪಟ್ಟಣ

ಬಂದರು ನಗರ ವಿಶಾಖಪಟ್ಟಣವನ್ನು ಪ್ರವಾಸಿ ತಾಣವಾಗಿ ನಿರ್ಮಾಣ ಮಾಡಲು ಆಂಧ್ರ...

ಪ್ರವಾಸಿ ತಾಣವಾಗಿ ವಿಶಾಖಪಟ್ಟಣ
Published On :

ವಿಶಾಖಪಟ್ಟಣ: ಬಂದರು ನಗರ ವಿಶಾಖಪಟ್ಟಣವನ್ನು ಪ್ರವಾಸಿ ತಾಣವಾಗಿ ನಿರ್ಮಾಣ ಮಾಡಲು ಆಂಧ್ರ ಸರ್ಕಾರ ನಿರ್ಧರಿಸಿದೆ.

ಪ್ರಸಿದ್ಧ ತಾಣಗಳಿಗೆ ಹೆಸರುವಾಸಿಯಾಗಿರುವ ಆಂಧ್ರಪ್ರದೇಶದ ಅತೀ ದೊಡ್ಡ ಜಿಲ್ಲೆ ಹಾಗೂ ಕರಾವಳಿ ತೀರ ಪ್ರದೇಶವಾದ ವಿಶಾಖಪಟ್ಟಣವನ್ನು ದೇಶ ವಿದೇಶದಲ್ಲಿ ಹೆಸರುವಾಸಿ ಮಾಡುವ ಉದ್ದೇಶದಿಂದ ಆಂಧ್ರಸರ್ಕಾರ ವಿಶಾಖಪಟ್ಟಣವನ್ನು ಪ್ರವಾಸಿ ತಾಣವಾಗಿಸಲು ನಿರ್ಧರಿಸಿದೆ.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾನವ ಸಂಪನ್ಮೂಲ ಸಚಿವ ಶ್ರೀನಿವಾಸ್ ರಾವ್,  ಸರ್ಕಾರ ಈಗಾಗಲೇ ವಿಶಾಖಪಟ್ಟಣದ ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿದೆ. ಸುಮಾರು 50 ಕೋಟಿ ವೆಚ್ಚದಲ್ಲಿ ಭೀಮ್ಲಿ ಹಾಗೂ ವಿಶಾಖಪಟ್ಟಣದ ನಡುವೆ ಬೀಚ್‌ವೊಂದನ್ನು ನಿರ್ಮಾಣ ಮಾಡುತ್ತಿದ್ದು ಸದ್ಯದಲ್ಲೇ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.

ಈಗಾಗಲೇ ಪ್ರಯಾಣಿಕರಿಗೆ ಅನುಕೂಲವಾಗಲೆಂದು ರಾತ್ರಿ ವೇಳಾ ಪ್ಯಾಕೇಜ್ ಬಸ್‌ಗಳ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರವಾಸಿ ಬಸ್‌ಗಳು ಸಬ್‌ಮರಿನ್ ಮ್ಯೂಸಿಯಂ, ರಿಷಿಕೊಂಡ, ಕೈಲಾಸಗಿರಿ ಹಿಲ್ ಸೇರಿದಂತೆ ಶಿಲ್ಪಾರಮಂಮ್ ಹಾಗೂ ಜಾತ್ರಾ ಕ್ಷೇತ್ರಗಳಿಗೆ ಸಂಚರಿಸಲಿದೆ.

ಪಾರಂಪರಿಕ ಹಿನ್ನೆಲೆ ಹೊಂದಿರುವ ತಾಣಗಳಾದ ಬುದ್ಧ ಕೇಂದ್ರ, ಚಿತ್ರ ಸಾದೃಶ್ಯ ತಾಣವಾದ ಅರಕುವಲ್ಲೈ, ಬೊರ್ರಾ ಗುಹೆ ಹಾಗೂ ಎರ್ರಮಟ್ಟಿ ದಿಬ್ಬಲು ತಾಣಗಳನ್ನು ಪ್ರವಾಸಿತಾಣವಾಗಿ ಅಭಿವೃದ್ಧಿಗೊಳಿಸುವ ಕಾರ್ಯ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಸಿಂಗಾಪುರದಂತೆಯೇ ವಿಶಾಖಪಟ್ಟಣ ಜಿಲ್ಲೆಯನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.