ಈಗಿನ ಸುದ್ದಿ

ರೈಲ್ವೇ ಬಜೆಟ್: ನಾಯಕರ ಅಭಿಪ್ರಾಯ

ಸದಾನಂದಗೌಡ ಅವರ ರೇಲ್ವೇ ಬಜೆಟ್ ಕುರಿತಂತೆ ವಿವಿಧ ನಾಯಕರ ಅಭಿಪ್ರಾಯ..

ರೈಲ್ವೇ ಬಜೆಟ್: ನಾಯಕರ ಅಭಿಪ್ರಾಯ
Published On :

ನವದೆಹಲಿ: ಮಂಗಳವಾರ ಕೇಂದ್ರ ರೇಲ್ವೇ ಸಚಿವ ಡಿ.ವಿ.ಸದಾನಂದಗೌಡ ಅವರು ಮಂಡಿಸಿದ ರೇಲ್ವೇ ಬಜೆಟ್ ಕುರಿತಂತೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದ್ದು, ವಿವಿಧ ನಾಯಕರ ಅಭಿಪ್ರಾಯ ಇಲ್ಲಿವೆ.
--

21ನೇ ಶತಮಾನದ ಬಜೆಟ್

21ನೇ ಶತಮಾನದ ಬಜೆಟ್. ಸುರಕ್ಷತೆ, ಸ್ವಚ್ಛತೆಗೆ ಆಧ್ಯತೆ ನೀಡಲಾಗಿದ್ದು, ಸಂಪೂರ್ಣ ಪಾರದರ್ಶಕ ಮತ್ತು ಸಮಗ್ರ ಬಜೆಟ್ ಮಂಡಿಸಲಾಗಿದೆ.
-ನರೇಂದ್ರ ಮೋದಿ
ಪ್ರಧಾನ ಮಂತ್ರಿ

--

ದೂರದೃಷ್ಟಿ ಇಲ್ಲ
ಡಿ.ವಿ.ಸದಾನಂದಗೌಡ ಅವರು ಮಂಡಿಸಿರುವ ಬಜೆಟ್‌ನಲ್ಲಿ ಯಾವುದೇ ದೂರದೃಷ್ಟಿ ಇಲ್ಲ. ಅವರು ಘೋಷಣೆ ಮಾಡಿರುವ ಯೋಜನೆಗಳನ್ನು ಅನುಷ್ಟಾನಕ್ಕೆ ತರಲು ಅಸಾಧ್ಯ
-ರಾಹುಲ್‌ಗಾಂಧಿ
ಎಐಸಿಸಿ ಉಪಾಧ್ಯಕ್ಷ

--

ಅನುದಾನ ಘೋಷಣೆಯಲ್ಲಿ ತಾರತಮ್ಯ
ಸದಾನಂದಗೌಡ ಅವರು ಮಂಡಿಸಿರುವ 2014-15ರ ಸಾಲಿನ ಬಜೆಟ್‌ನಲ್ಲಿ ತಾರತಮ್ಯವಾಗಿದ್ದು, ಭಾರತದ ಬಹುತೇಕ ಭಾಗಳಿಗೆ ಯಾವುದೇ ಅನುದಾನ ಘೋಷಣೆ ಮಾಡಿಲ್ಲ.
-ಶರದ್‌ಯಾದವ್,
ಜೆಡಿಯು ಮುಖಂಡ

--

ಭವಿಷ್ಯದ ಆಧಾರಿತ ಬಜೆಟ್
ಮುಂಬರುವ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಸದಾನಂದಗೌಡ ಅವರು ರೇಲ್ವೇ ಬಜೆಟ್ ರೂಪಿಸಿದ್ದು, ಇದೊಂದು ಭವಿಷ್ಯದ ದೃಷ್ಟಿಕೋನದ ಬಜೆಟ್ ಆಗಿದೆ.
-ಧರ್ಮೇಂದ್ರ ಪ್ರಧಾನ್
ಕೇಂದ್ರ ಸಚಿವ

--

ತಂತ್ರಜ್ಞಾನದ ಸದ್ಭಳಕೆಗೆ ಒತ್ತು ನೀಡಿದ ಮೊದಲ ಬಜೆಟ್
ಕೇಂದ್ರ ರೇಲ್ವೇ ಸಚಿವರು ತಂತ್ರಜ್ಞಾನವನ್ನು ಸದ್ಭಳಕೆ ಮಾಡುವ ಸದುದ್ದೇಶದಿಂದ ಬಜೆಟ್ ಮಂಡಿಸಿದ್ದು, ತಂತ್ರಜ್ಞಾನದ ಸದ್ಭಳಕೆಗೆ ಒತ್ತು ನೀಡಿದ ಮೊದಲ ಬಜೆಟ್ ಆಗಿದೆ.
-ಅರುಣೇಂದ್ರ ಕುಮಾರ್
ರೇಲ್ವೇ ಬೋರ್ಡ್ ಅಧ್ಯಕ್ಷ

--

ನಷ್ಟದಲ್ಲಿರುವ ಇಲಾಖೆಯಿಂದ ಆಧುನೀಕರಣ ಹೇಗೆ ಸಾಧ್ಯ..?
ಸದಾನಂದಗೌಡ ಅವರು ಇಲಾಖೆಯ ವಾಸ್ತವಿಕತೆಯನ್ನು ಮರೆತು ಬಜೆಟ್ ಮಂಡಿಸಿದ್ದಾರೆ. ರೇಲ್ವೆ ಇಲಾಖೆ ನಷ್ಟದಲ್ಲಿದ್ದು, ಇಂತಹ ಸಂದರ್ಭದಲ್ಲಿ ಇಲಾಖೆಯ ಆಧುನೀಕರಣ ಹೇಗೆ ಸಾಧ್ಯ. ಬುಲೆಟ್ ರೈಲು ಬಗ್ಗೆ ಇಲಾಖೆಯ ಸಮೀಕ್ಷೆ ಸಮಂಜಸವಾಗಿದೆಯೇ...?
-ಮಾಯಾವತಿ
ಬಿಎಸ್‌ಪಿ ನಾಯಕಿ

--

ಆದ್ಯತೆ ಮೇರೆಗೆ ಯೋಜನೆ ಪೂರ್ಣ

ಸದಾನಂದಗೌಡ ಅವರು ಉತ್ತಮ ಬಜೆಟ್ ಮಂಡಿಸಿದ್ದು, ಕೆಲವರಿಗೆ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಯೋಜನೆಗಳನ್ನು ಆದ್ಯತೆಯ ಮೇರೆದೆ ಪೂರ್ಣಗೊಳಿಸಲಾಗುವುದು.
-ವೆಂಕಯ್ಯನಾಯ್ಡು
ಕೇಂದ್ರ ಸಚಿವ

--

ನನಗೇನೂ ತಿಳಿಯಲೇ ಇಲ್ಲ

ಸದಾನಂದಗೌಡ ಅವರು ತಾವು ಬರೆದುಕೊಂಡಿದ್ದನ್ನು ಸದನದಲ್ಲಿ ಆತುರಾತುರವಾಗಿ ಓದಿದ್ದಾರೆ ಅಷ್ಟೇ. ಅವರು ಏನು ಹೇಳಿದರು ಎಂಬುದು ನನಗೆ ತಿಳಿಯಲೇ ಇಲ್ಲ.
-ಲಾಲು ಪ್ರಸಾದ್ ಯಾದವ್
ಮಾಜಿ ರೈಲ್ವೇ ಸಚಿವ ಮತ್ತು ಆರ್‌ಜೆಡಿ ಮುಖ್ಯಸ್ಥ

--

ಇಲಾಖೆಯ ಖಾಸಗೀಕರಣದ ಪತ್ರ
ಸದಾನಂದಗೌಡ ಅವರು ಕಲಾಪದಲ್ಲಿ ಮಂಡಿಸಿದ್ದು ರೇಲ್ವೇ ಬಜೆಟ್ ಅಲ್ಲ. ಅದು ಇಲಾಖೆಯ ಖಾಸಗೀಕರಣದ ಪತ್ರ.
-ಮನೀಶ್ ತಿವಾರಿ
ಕಾಂಗ್ರೆಸ್ ಮುಖಂಡ

--

ನಿರಾಶಾದಾಯಕ ಬಜೆಟ್
ಸದಾನಂದಗೌಡ ಅವರು ಮಂಡಿಸಿದ ಬಜೆಟ್ ನಿರಾಶಾದಾಯಕವಾಗಿದ್ದು, ರಾಜ್ಯಕ್ಕೆ ಯಾವುದೇ ಹೊಸ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಇಲಾಖೆಯನ್ನು ಖಾಸಗೀಕರಣ ಮಾಡುವತ್ತ ಅವರು ಚಿತ್ತಹರಿಸಿದ್ದಾರೆ.
-ಸಿದ್ದರಾಮಯ್ಯ
ಕರ್ನಾಟಕ ರಾಜ್ಯ ಮುಖ್ಯಮಂತ್ರಿ

--

ಇದು ಅಹಮದಾಬಾದ್ ಬಜೆಟ್
ಸದಾನಂದಗೌಡ ಅವರು ಮಂಡಿಸಿರುವ ಬಜೆಟ್ ಅಹಮದಾಬಾದ್‌ಗೆ ಮಾತ್ರ ಸೀಮಿತವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ತವರು ಜಿಲ್ಲೆಗೆ ಆಧ್ಯತೆ ನೀಡಿ ಬಜೆಟ್ ತಯಾರಿಸಿದ್ದಾರೆ.
-ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಮುಖಂಡ

--

ಉತ್ತಮ ಪ್ರಯತ್ನ
ಸದಾನಂದಗೌಡ ಅವರು ತಮ್ಮ ಪ್ರಥಮ ರೇಲ್ವೇ ಬಜೆಟ್‌ನಲ್ಲಿ ಹೊಸ ಯೋಜನೆಗಳನ್ನು ಘೋಷಣೆ ಮಾಡುವುದಕ್ಕಿಂತ ಹಳೆಯ ಯೋಜನೆಗಳನ್ನೇ ಪೂರ್ಣಗೊಳಿಸಲು ಆಧ್ಯತೆ ನೀಡಿದ್ದಾರೆ. ಹೀಗಾಗಿ ಇದೊಂದು ಉತ್ತಮ ಪ್ರಯತ್ನ.
-ಪ್ರಹ್ಲಾದ್ ಜೋಷಿ
ಬಿಜೆಪಿ ಮುಖಂಡ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.