ಈಗಿನ ಸುದ್ದಿ

'ಸರಳ್' ಉಡ್ಡಾಯನ ಯಶಸ್ವಿ

ಬಹುನಿರಿಕ್ಷಿತ ಫ್ರೆಂಚ್-ಭಾರತದ ಸಹಯೋಗದಿಂದ ನಿರ್ಮಿತವಾಗಿದ್ದ 'ಸರಳ್' ಸ್ಯಾಟಲೈಟನ್ನು, ಆಂಧ್ರಪ್ರದೇಶದ...

'ಸರಳ್' ಉಡ್ಡಾಯನ ಯಶಸ್ವಿ
Published On :

ಶ್ರೀಹರಿಕೋಟಾ: ಬಹುನಿರಿಕ್ಷಿತ ಫ್ರೆಂಚ್-ಭಾರತದ ಸಹಯೋಗದಿಂದ ನಿರ್ಮಿತವಾಗಿದ್ದ 'ಸರಳ್' ಸ್ಯಾಟಲೈಟನ್ನು, ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಅಂತರಿಕ್ಷ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ ಸಂಜೆ 6 ಗಂಟೆಗೆ ಯಶಸ್ವಿಯಾಗಿ ಉಡಾಯಿಸಲಾಯಿತು. ಈ ಮೂಲಕ ಇಸ್ರೋಗೆ ಮತ್ತೊಂದು ಗರಿಮೆ ಬಂದಂತಾಗಿದೆ.

ಉಡಾವಣೆ ಮಾಡಿದ ನಂತರ ರಾಕೆಟ್ನಿಂದ ಸ್ಯಾಟಲೈಟ್ಗಳು ಪ್ರತ್ಯೇಕಗೊಂಡು ಅಂತರಿಕ್ಷಕ್ಕೆ ಹಾರಿದವು. ಈ ಕುತೂಹಲದ ಉಡಾವಣೆಯನ್ನು ವೀಕ್ಷಿಸಲು ಖುದ್ದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೇ ಆಗಮಿಸಿದ್ದರು.

664 ಕೆ.ಜಿ ಭಾರ ಹಾಗೂ 44.8 ಮೀಟರ್ ಅಗಲದ ಈ ಉಪಗ್ರಹದಲ್ಲಿ ಒಟ್ಟು 7 ಸಣ್ಣ ಸಣ್ಣ ಸ್ಯಾಟಲೈಟ್ಗಳನ್ನು ಜೋಡಿಸಲಾಗಿತ್ತು. ಇಸ್ರೋ ಈವರೆಗೆ 23 ಪಿಎಸ್ಎಲ್ವಿ ಸ್ಯಾಟಲೈಟ್ಗಳನ್ನು ಉಡಾಯಿಸಿದ್ದು, ಅದರಲ್ಲಿ 21 ಯಶಸ್ವಿಯಾಗಿವೆ.

ಕಳೆದ ಡಿಸೆಂಬರ್ 2012ರಲ್ಲೇ ಇಸ್ರೋ ಸರಳ್ ಸ್ಯಾಟಲೈಟ್ ಅಂತರಿಕ್ಷಕ್ಕೆ ಹಾರಿಸುವ ಯೋಜನೆ ಹಾಕಿಕೊಂಡಿತ್ತು. ಆದರೆ ತಾಂತ್ರಿಕ ತೊಂದರೆಯಿಂದ ಉಡಾವಣೆ ಸಾಧ್ಯವಾಗಿರಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.