ಈಗಿನ ಸುದ್ದಿ

ಟೊಕಿಯೋದಲ್ಲಿ ಕಂಪಿಸಿದ ಭೂಮಿ

Published On :

ಟೊಕಿಯೋ: ಜಪಾನ್ನಲ್ಲಿ ಸೋಮವಾರ 5.7 ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದು, ಕಂಪನದ ಹಿನ್ನೆಲೆಯಲ್ಲಿ ಯಾವುದೇ ಸುನಾಮಿ ಎಚ್ಚರಿಕೆ ಭಯವಿಲ್ಲ ಎಂದು ಜಪಾನ್ನ ಭೂವಿಜ್ಞಾನಿಗಳು ತಿಳಿಸಿದ್ದಾರೆ.

ಕಂಪನದಿಂದಾಗಿ ಉತ್ತರ ಟೊಕಿಯೋದ ಅಣು ಶಕ್ತಿ ಕೇಂದ್ರದಲ್ಲಿ ಕಟ್ಟಡ ಅರ್ಧ ನಿಮಿಷ ಅಲುಗಾಡಿದ್ದು, ಆದರೆ ಇದರಿಂದ ಕಟ್ಟಡಕ್ಕೆ ಯಾವುದೇ ಹಾನಿಯಾದ ವರದಿಯಿಲ್ಲ ಎಂದು ರಾಷ್ಟ್ರೀಯ ಸುದ್ದಿ ಪ್ರಸಾರಣ ಸಂಸ್ಥೆ ಎನ್ಎಚ್ಕೆ ತಿಳಿಸಿದೆ.

ಸುಮಾರು 4.23 ನಿಮಿಷಕ್ಕೆ ಜಪಾನ್ನಲ್ಲಿ ಭೂಮಿ ಕಂಪಿಸಿದೆ ಎಂದು ಅಮೆರಿಕ ಭೂವಿಜ್ಞಾನ ಮಾಪನ ಇಲಾಖೆ ಸ್ಪಷ್ಟಪಡಿಸಿದೆ. ಕಂಪನದ ಕೇಂದ್ರ ಬಿಂದುವಿನಿಂದ ನೈರುತ್ಯದ ಮೈಬಶಿವರೆಗೆ (57 ಕಿ.ಮಿ) ಹಾಗೂ ಟೊಕಿಯೋದ ವಾಯುವ್ಯ ದಿಕ್ಕನವರೆಗೆ (143 ಕಿ.ಮಿ) ಭೂಮಿ ಕಂಪಿಸಿದೆ ಎಂದು ಅಮೆರಿಕ ಹೇಳಿದೆ.

ಕಂಪನದಿಂದಾಗಿ ಹಲವು ಪ್ರದೇಶಗಳಲ್ಲಿ ಸುಮಾರು 10 ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿದ್ದು, ಇದರಿಂದ ಯಾವುದೇ ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ. ಭೂಕಂಪನದಿಂದಾಗಿ ಜಪಾನ್ನಲ್ಲಿ ಸ್ಪಲ್ಪ ಸಮಯ ಬುಲೆಟ್ ಟ್ರೆನ್ಗಳ ಓಡಾಟವನ್ನು ಸ್ಥಗಿತಗೊಳಿಸಿಸಲಾಗಿತ್ತು.

2011ರ ಮಾರ್ಚ್ನಲ್ಲಿ ಜಪಾನ್ ಸಮುದ್ರದ ತೀರ ಪ್ರದೇಶದಲ್ಲಿ 9.0ರಷ್ಟು ಭಾರಿ ತೀವ್ರತೆ ಭೂಕಂಪನ ಸಂಭವಿಸಿ, ಸುನಾಮಿಗೆ ಕಾರಣವಾಗಿತ್ತು. ಈ ಸುನಾಮಿ ಅಲೆಗಳಿಂದ ಸುಮಾರು 19000 ಜನರು ಪ್ರಾಣ ಕಳೆದುಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.