ಈಗಿನ ಸುದ್ದಿ

ಮೋದಿ ಭೇಟಿ ಮಾಡಿದ ಜರ್ಮನ್ ರಾಯಭಾರಿ

ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರನ್ನು ಜರ್ಮನಿ ದೇಶದ ರಾಯಭಾರಿ ಭೇಟಿ ಮಾಡಿ ಚರ್ಚೆ ನಡೆಸಿದರು.

ಮೋದಿ ಭೇಟಿ ಮಾಡಿದ ಜರ್ಮನ್ ರಾಯಭಾರಿ
Published On :

ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರನ್ನು ಜರ್ಮನಿ ದೇಶದ ರಾಯಭಾರಿ ಭೇಟಿ ಮಾಡಿ ಚರ್ಚೆ ನಡೆಸಿದರು.

ನವದೆಹಲಿಯಲ್ಲಿರುವ ನರೇಂದ್ರಮೋದಿ ಅವರನ್ನು ಜರ್ಮನಿ ದೇಶದ ರಾಯಭಾರಿ ಮೈಕೆಲ್ ಸ್ಟೈನರ್ ಅವರು ಶುಕ್ರವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಚರ್ಚೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರ. ನಾವು ಪ್ರಜಾಪ್ರಭುತ್ವವನ್ನು ಮತ್ತು ಚುನಾವಣಾ ವ್ಯವಸ್ಥೆಯನ್ನು ಗೌರವಿಸುತ್ತೇವೆ.

'ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಮಗೆ ನಂಬಿಕೆ ಇದೆ. ಭಾರತ ಮತ್ತು ಜರ್ಮನಿ ದೇಶಗಳು ಹೊಸ ಹಂತದಲ್ಲಿ ಮುನ್ನಡೆಯ ಬೇಕಿದೆ. ಪರಸ್ಪರ ಸ್ನೇಹ, ನಂಬಿಕೆ ಮತ್ತು ಸೌಹಾರ್ದತೆಯಿಂದ ಅಭಿವೃದ್ದಿಯತ್ತ ಚಿತ್ತ ಹರಿಸಬೇಕಿದೆ. ಇದನ್ನೇ ಭಾರತೀಯ ಪ್ರಜೆಗಳು ನಮ್ಮಿಂದ ಆಶಿಸುತ್ತಿದ್ದಾರೆ' ಎಂದು ಹೇಳಿದರು.

ರಾಷ್ಟ್ರರಾಜಕಾರಣದತ್ತ ಮುಖ ಮಾಡಿರುವ ನರೇಂದ್ರ ಮೋದಿ ಅವರಿಗೆ ಇದು ಬಹುಶಃ ಶುಭಸೂಚಕವೆಂದೆನಿಸುತ್ತದೆ. ಏಕೆಂದರೆ ನಿನ್ನೆಯಷ್ಟೇ ವಿಶ್ವ ಹಿಂದೂಪರಿಷತ್ತ್, ಮೋದಿ ಅವರು ಪ್ರಧಾನಿ ಅಭ್ಯರ್ಥಿಯಾದರೆ ತಮ್ಮ ಬೆಂಬಲ ಅವರಿಗೆ ಎನ್ನುವ ದಾಟಿಯಲ್ಲಿ ಹೇಳಿಕೆ ಬಿಡುಗಡೆ ಮಾಡಿತ್ತು. ಅಲ್ಲದೆ ಬಿಜೆಪಿಯ ಕೆಲ ಹಿರಿಯ ನಾಯಕರೂ ಸಹ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಜರ್ಮನಿ ದೇಶದ ರಾಯಭಾರಿಯ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗುವ ನಿಟ್ಟಿನಲ್ಲಿ ನರೇಂದ್ರಮೋದಿ ಅವರಿಗೆ ಇಂತಹ ಭೇಟಿಗಳು ಯಾವ ಮಟ್ಟದಲ್ಲಿ ಸಹಕಾರಿಯಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.