ಆಯುಕ್ತರ ವಿರುದ್ಧ ದೂರು ನೀಡಿ
-ಎ. ಸೂರ್ಯನಾರಾಯಣರಾವ್, ದೇವಾಲದಕೆರೆ, ಸಕಲೇಶಪುರ
ತಂದೆ 1946-47ರಲ್ಲಿ ಒಂದು ನಿವೇಶನ ಖರೀದಿಸಿ ಅದರಲ್ಲಿ ಒಂದು ಮನೆ ಕಟ್ಟಿಸಲು ಪ್ರಾರಂಭಿಸಿದ್ದರು. ಈ ಸಂಬಂಧ ವ್ಯಕ್ತಿಯೊಬ್ಬರಿಂದ 2,000 ರು. ಸಾಲ ಪಡೆದರು. ಅವರ ತಗಾದೆಯಿಂದ ಆ ಸಾಲಕ್ಕೆ ತಮ್ಮ ಜಮೀನಿನ ಒಂದು ಭಾಗವನ್ನು ಮಾರಿಕೊಂಡರು. ತಂದೆಯ ಕಾಲಾನಂತರ ಕಾಗದಪತ್ರ ಹುಡುಕಿ ಪರಿಶೀಲಿಸಿದಾಗ 76್ಢ144ರ ಪೈಕಿ 2317್ಢ85ರಷ್ಟು ನಿವೇಶನದ ಭಾಗವನ್ನು ಮಾತ್ರ ಮಾರಿದ್ದರು. ಆದರೆ ದಾಖಲೆಗಳು ಸಿಗುತ್ತಿಲ್ಲ. ಉಳಿದ ದಾಖಲೆಗಳಿಗೆ ಏನು ಮಾಡಬೇಕು? ನಗರಸಭೆಯ ಆಯುಕ್ತರು ಎಷ್ಟು ಕೇಳಿದರೂ ಕೊಡುತ್ತಿಲ್ಲ. ಪರಿಹಾರವೇನು?
- ಮಾಹಿತಿ ಹಕ್ಕು ಆಯೋಗಕ್ಕೆ ಆಯುಕ್ತರ ವಿರುದ್ಧ ದೂರು ನೀಡಿ, ಸಹಾಯವಾಗಬಹುದು. ಜತೆಗೆ 1946-47ರ ಕ್ರಯಪತ್ರಕ್ಕೆ ಸಬ್‌ರಿಜಿಸ್ಟ್ರಾರ್ ಕಚೇರಿಗೆ ಅರ್ಜಿ ಕೊಟ್ಟು ನಕಲು ಪಡೆಯಿರಿ. ಆ ಆಧಾರದ ಮೇಲೆ ನೀವು ಉಳಿದ ನಿವೇಶನವನ್ನು ಪಡೆಯಬಹುದು.
ಕೋರ್ಟಿಗೆ ಮನವಿ ಮಾಡಿ
-ಕುಶಲ ವಿ. ಕೇಕರೆ, ಬೆಳಗಾವಿ
ನನ್ನ ತಾತ ಹಾಗೂ ಅವರ ತಮ್ಮ ಕೂಡಿ ಒಂದು ಮನೆ ಖರೀದಿಸಿದ್ದು ಅದು ವಿಭಾಗವಾಗಿಲ್ಲ. ಈಗ ನಮ್ಮ ತಾತನ ತಮ್ಮನ ಮಕ್ಕಳು ಆ ಆಸ್ತಿಯ ಒಂದು ಭಾಗವನ್ನು ಬೇರೆಯವರಿಗೆ ಮಾರಿದ್ದಾರೆ. ನಾವು ಈ ಆಸ್ತಿಯನ್ನು ಖರೀದಿಸಲು ತಯಾರಿದ್ದೇವೆ. ಈ ಬಗ್ಗೆ ನಾವು ಕೋರ್ಟಿಗೆ ಹೋಗಬಹುದೇ?
- ನೀವು ಕೋರ್ಟಿಗೆ ಅರ್ಜಿ ಹಾಕಿ ಹಿಂದೂ ಉತ್ತರಾಧಿಕಾರ ಕಾಯ್ದೆಯ ಕಲಂ 22ರಂತೆ ಆ ಜಮೀನು ಖರೀದಿಯಲ್ಲಿ ನಿಮಗೆ ಆದ್ಯತೆ ನೀಡಬೇಕೆಂದು ಹೇಳಿ ಮನವಿ ಮಾಡಿ. ಸಾಧ್ಯವಾಗಬಹುದು.
ಕೋರ್ಟಿಗೆ ವಿಷಯ ಸ್ಪಷ್ಟಪಡಿಸಿ
-ಶಶಿಕಲಾ ರಾವ್, ಬೆಂಗಳೂರು
ನನ್ನ ಯಜಮಾನರು ಒಂದು ನಕಲಿ ವಿಲ್ಲನ್ನು ಬರೆದು ಅದರಲ್ಲಿ ಸಾಕ್ಷಿಯನ್ನೂ ಹಾಕಿದ್ದು ಈಗ ಅದು ತಪ್ಪು ಎಂದು ಅರಿವಾಗಿದೆ. ವಿಷಯ ಕೋರ್ಟಿನಲ್ಲಿದೆ. ನಾವೇನು ಮಾಡಬೇಕು?
- ಕೋರ್ಟಿನಲ್ಲಿ ಇರುವ ವಿಷಯ ಹೇಳಿ (ನಿಮ್ಮ ಸಾಕ್ಷ್ಯ ಹೇಳಬೇಕಾದಾಗ)ದರೆ ಕೋರ್ಟು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ.
ಕೋರ್ಟ್ ಮೂಲಕ ಮನೆ ವಶಪಡಿಸಿಕೊಳ್ಳಿ
ತಂದೆ ಶಾಲಾ ಮುಖ್ಯೋಪಾಧ್ಯಾಯರಾಗಿದ್ದು, ಅವರ ಅಕ್ಕನ ಮಗ ಮನೆ ಕಟ್ಟಲು ಬ್ಯಾಂಕಿನಿಂದ ಪಡೆದ ಸಾಲಕ್ಕೆ ಶ್ಯೂರಿಟಿಯಾಗಿದ್ದಾರೆ. ಆತ ಸಾಲ ತೀರಿಸದೇ ಇದ್ದು ಅದಕ್ಕೆ ಬಡ್ಡಿ ಬೆಳೆದು ನಮ್ಮ ತಂದೆಯವರ ಸಂಬಳ ಪೂರ್ತಿ ಅವರ ಅಕ್ಕನ ಮಗನ ಸಾಲಕ್ಕೇ ಹೋಗುತ್ತದೆ. ಪರಿಹಾರವೇನು?
- ನಿಮ್ಮ ಸೋದರಮಾವ ಹಣ ಕೊಡಲು ಆಗದಿದ್ದರೆ ಆತ ಕಟ್ಟಿಸಿರುವ ಮನೆಯನ್ನು ವಶಪಡಿಸಿಕೊಳ್ಳಬಹುದೆಂದು ಕೋರ್ಟಿನಲ್ಲಿ ದಾವಾ ಹಾಕಬಹುದು. ಅಲ್ಲದೆ ಸಾಲ ವಸೂಲಿಗಾಗಿ ಸಂಬಳದ ಸ್ವಲ್ಪ ಭಾಗವನ್ನಷ್ಟೇ ಕಡಿತಗೊಳಿಸಬಹುದು. ಪೂರ್ತಿ ವಜಾ ಹಾಕುವಹಾಗಿಲ್ಲ.
ಸರ್ಕಾರಿ ನೌಕರ ಖರೀದಿಸಬಹುದು
-ಹೆಸರು, ಊರು ಬೇಡ
ಎನ್.ಎ. ಆಗದೇ ಇರುವ ನಿವೇಶನವನ್ನು ಸರ್ಕಾರಿ ನೌಕರ ಖರೀದಿಸಬಹುದೇ?
- ಇದು ಖಾಸಗಿ ವ್ಯವಹಾರವಾಗಿದ್ದು ಸರ್ಕಾರಿ ನೌಕರರಿಗೆ ಇದನ್ನು ಖರೀದಿಸಲು ಯಾವ ನಿಷೇಧವೂ ಇಲ್ಲ. ಆದರೆ ಸರ್ಕಾರದಿಂದ ಅಥವಾ ಬ್ಯಾಂಕಿನಿಂದ ಸಾಲ ಬೇಕಾದರೆ ಅವರು ಸಾಧ್ಯಾಸಾಧ್ಯತೆ ಪರಿಶೀಲಿಸುತ್ತಾರೆ ಅಷ್ಟೆ.
- ಎಚ್.ಆರ್. ಕಸ್ತೂರಿರಂಗನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

