ಅಮೀರ್ ಮೀರ್
ವನ್ಯಜೀವಿ ಛಾಯಾಗ್ರಹಣ ಅಷ್ಟು ಸುಲಭದ್ದಲ್ಲ. 'ಸ್ಲೈಲ್ ಪ್ಲೀಸ್' ಎಂದಾಕ್ಷಣ ಹಲ್ಲು ಕಿರಿಯಲು ಪ್ರಾಣಿಗಳು 'ಬುದ್ಧಿಜೀವಿ'ಗಳಲ್ಲ. ...

ವನ್ಯಜೀವಿ ಛಾಯಾಗ್ರಹಣ ಅಷ್ಟು ಸುಲಭದ್ದಲ್ಲ. 'ಸ್ಲೈಲ್ ಪ್ಲೀಸ್' ಎಂದಾಕ್ಷಣ ಹಲ್ಲು ಕಿರಿಯಲು ಪ್ರಾಣಿಗಳು 'ಬುದ್ಧಿಜೀವಿ'ಗಳಲ್ಲ. ಛಾಯಾಗ್ರಾಹಕನಿಗೆ ಸಾಕಷ್ಟು ಶ್ರದ್ಧೆ, ತಾಳ್ಮೆ, ಸಹನೆ ಬೇಕು. ಆದರೆ, 'ಚೀಕಿ ಮಿರ್ಕ್ಯಾಟ್ಸ್' ಎಂಬ ಬಣ್ಣದ ಬೆಕ್ಕುಗಳು ಹಾಗಲ್ಲ. ಅವಾಗಿಯೇ ಪೋಸು ಕೊಡುತ್ತವೆ. ಹೀಗಾಗಿ, ಅವನ್ನು ಫೋಟೋ ತೆಗೆಯಲು ಹೋದ ವಿಲ್ ಬುರಾರ್ಡ್ ಲುಕಾಸ್‌ಗೆ ಅವುಗಳ ಫೋಟೋ ಕ್ಲಿಕ್ಕಿಸುವುದು ದೊಡ್ಡ ಕೆಲಸ ಆಗಲೇ ಇಲ್ಲ.
ಅರೆರೆ! ಇದೇನಿದು ಮ್ಯಾಜಿಕ್ ಅಂದುಕೊಂಡ್ರಾ? ಕೀನ್ಯಾದ ಕಾಡುಗಳಲ್ಲಿ ಮಿರ್ಕ್ಯಾಟ್ಸ್ ಕುಟುಂಬದೊಂದಿಗೆ ಆರು ದಿನಗಳನ್ನು ಕಳೆದ ಬುರಾರ್ಡ್ ಲುಕಾಸ್‌ನ ಚಮತ್ಕಾರದ ಝಲಕ್‌ಗಳಿವು. ಮಿರ್ಕ್ಯಾಟ್ಸ್‌ಗಳಿಗೆ ಲುಕಾಸ್ ಹುಟ್ಟಿನಿಂದಲೇ ಪರಿಚಿತವಿರುವಂತೆ ಒಂಚೂರು ಭಯವಿಲ್ಲದೆ ಆತನ ಮೇಲೆಲ್ಲ ಹತ್ತಿ ಕುಣಿದಾಡುತ್ತವೆ. ಊಹ್ಞೂಂ, ಒಂಚೂರು ಮಿಸುಕಾಡದೆ, ಅವುಗಳ ಉಪದ್ರವನ್ನು ಸೈರಿಸಿಕೊಂಡು ಉತ್ತಮ ಕ್ಲಿಕ್‌ಗಳಿಗಾಗಿ ಕಾಯುವ ಲುಕಾಸ್‌ನ ಉತ್ಸಾಹ ಛಾಯಾಗ್ರಾಹಕರಿಗೆ ಮಾದರಿ.
ಮಿರ್ಕ್ಯಾಟ್ಸ್ ಸಸ್ತನಿ ಪ್ರಾಣಿಗಳ ವರ್ಗಕ್ಕೆ ಸೇರಿದೆ. 90 ಡಿಗ್ರಿಯ ಮಾಪಕದಂತೆ ನೇರವಾಗಿ ನಿಂತುಕೊಳ್ಳುವುದು ಜಗತ್‌ಪ್ರಸಿದ್ಧ. ತಾಯಿ ಮಿರ್ಕ್ಯಾಟ್ 4-6 ಮರಿಗಳಿಗೆ ಜನ್ಮನೀಡುತ್ತದೆ. ಜನ್ಮ ನೀಡುವ ಸಲುವಾಗಿಯೇ ಸ್ಪೆಷಲ್ ಬಿಲ ಮಾಡಿಕೊಳ್ಳುತ್ತದೆ. ಹುಟ್ಟಿದ ಕೆಲವು ದಿನಗಳ ನಂತರ ಪುಟ್ಟ ಪುಟ್ಟ ಮುದ್ದಾದ ಮರಿಗಳು ಬಿಲದಿಂದ ಹೊರಬರುತ್ತವೆ. ಆ ಸಮಯದಲ್ಲಿ ಗಿಡುಗ ಮತ್ತು ಹದ್ದುಗಳ ಆಕ್ರಮಣದಿಂದ ಮರಿಗಳನ್ನು ಕಾಪಾಡುವುದು ದೊಡ್ಡ ಮಿರ್ಕ್ಯಾಟ್ಸ್‌ಗಳ ಜವಾಬ್ದಾರಿ. ಬಿಲದ ಹೊರಗೆ ಮಾರು ದೂರಕ್ಕೆ ಒಂದರಂತೆ ಕಾವಲು ಪಡೆ ಸಜ್ಜುಗೊಳ್ಳುತ್ತದೆ. ಥೇಟ್ ಸೈನಿಕರ ಹಾಗೆ!
ನೇರವಾಗಿ ನಿಂತ ತಾಯಿ ಮಿರ್ಕ್ಯಾಟ್‌ನ ಕಾಲು ಸಂಧಿಯಲ್ಲಿ ನಿಂತುಕೊಳ್ಳುವ ಮರಿಗಳನ್ನು ನೋಡಲು ಮಜವೆನಿಸುತ್ತದೆ. ಮಿರ್ಕ್ಯಾಟ್ಸ್‌ಗಳು ಅತ್ಯಂತ ಸೂಕ್ಷ ಪ್ರಾಣಿಗಳು. ಅಪಾಯದ ಲಕ್ಷಣ ಕಂಡಾಕ್ಷಣ ವಿಶಿಷ್ಟ ಸಂಜ್ಞೆ ಮಾಡುತ್ತವೆ. ಕ್ಷಣಾರ್ಧದಲ್ಲೇ ಬಿಲಸೇರಿಕೊಂಡು ಬಿಡುತ್ತವೆ. ಕೀಟಗಳು, ಹಲ್ಲಿ, ಸಣ್ಣಪುಟ್ಟ ಪಕ್ಷಿಗಳು, ಹಣ್ಣು ತಿನ್ನುತ್ತವೆ. ಬೇಟೆ ಸಂದರ್ಭ ವಿಶಿಷ್ಟ ಧ್ವನಿ ಹೊರಡಿಸಿ ಒಂದಕ್ಕೊಂದು ಸಂದೇಶ ವಿನಿಮಯ ಮಾಡಿಕೊಳ್ಳುತ್ತವೆ. ಯಾವಾಗಲು ಎತ್ತರ ಹುಲ್ಲಿರುವ ಅನುಕೂಲಕರ ಸ್ಥಳಗಳಲ್ಲಿ ನಿಂತುಕೊಳ್ಳುತ್ತವೆ. ಗುಂಪಾಗಿ ಬದುಕುತ್ತವೆ. ಉಳಿದವುಗಳು ಆಹಾರ ಸಂಗ್ರಹಿಸುತ್ತಿರುವಾಗ ಒಂದು ಮಿರ್ಕ್ಯಾಟ್ ಕಾವಲು ನಿಲ್ಲುತ್ತದೆ. <
-ಮಂಜುನಾಥ್ ಎಲ್.ಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


