ಖುಷಿ

ಹೀಗೂ ಪ್ರಶ್ನೆಗಳು

ಹೀಗೂ ಪ್ರಶ್ನೆಗಳು
Published On :

1.    ಮಗು ತೊದಲಿದ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ದೇವರು ತಾಯಿಯ ಮಾತುಗಳಿಗೆ ಕಿವಿಗೊಡುತ್ತಾನೆ ಅನ್ನುತ್ತಾರೆ, ನಿಜವಾ?
2.    ನಾನು ನೋಡುತ್ತಿರುವ ಕನ್ನಡಿಯೊಳಗೆ ಇರುವ ಜಗತ್ತೂ ಈ ನಿಜದ ಜಗತ್ತಿನಷ್ಟೇ ವಿಸ್ತಾರವಾಗಿದೆಯಾ?
3.    ಮರದ ಎಲೆಗಳು ಬೇರುಗಳ ಜತೆ ಮಾತಾಡಬೇಕಾದರೆ, ಹೇಗೆ ಮಾತಾಡುತ್ತವೆ?
4.    ಪಾಸ್‌ವರ್ಡ್‌ಗಳಿಗೆ ನಮ್ಮ ಎಲ್ಲ ರಹಸ್ಯದ ಕೀಲಿಕೈಯನ್ನು ಕೊಟ್ಟವರ್ಯಾರು? ಸುಂದರ ಬದುಕಿನ ಪಾಸ್‌ವರ್ಡ್ ಯಾವುದು?
5.    ದುಃಖದ ಕವಿತೆಯನ್ನು ಬರೆದ ಕವಿ, ತನ್ನ ಕವಿತೆಯೇ ತನ್ನ ಕನಸಿನಲ್ಲಿ ಬಂದರೆ ಖುಷಿಪಡುತ್ತಾನಾ, ಬೆಚ್ಚಿಬೀಳುತ್ತಾನಾ?
6.    ಹತ್ತನೇ ಮಹಡಿಗಳಲ್ಲಿ ವಾಸಿಸುವವರಿಗೆ ಮಣ್ಣಿನ ಬಣ್ಣ ಮರೆತುಹೋಗುತ್ತದಲ್ಲ, ಆ ರೋಗಕ್ಕೆ ಏನನ್ನುತ್ತಾರೆ?
7.    ತಾನು ಬರೆದ ಪ್ರತಿಯೊಂದು ಸಾಲೂ ಮಹಾಕವಿಗೆ ನೆನಪಿದ್ದರೆ ಅದಕ್ಕಿಂತ ದುರಂತ ಮತ್ತೊಂದಿದೆಯಾ?
8.    ನಿದ್ರೆ ಹೋಗಿರುವ ಮಹಾಪಾಪಿಯನ್ನು ಕೊಲ್ಲುವುದು ಪಾಪವಾಗುತ್ತದಾ?
9.    ತೆರೆದಿಟ್ಟ ಪುಸ್ತಕದ ಪುಟಗಳನ್ನು ತಂಗಾಳಿ ಕದ್ದು ಓದುತ್ತದಾ?
10.    'ಎ' 'ಬಿ'ಯನ್ನು ಪ್ರೀತಿಸಿದರೆ, 'ಬಿ' 'ಸಿ'ಯನ್ನು ಪ್ರೀತಿಸಿದರೆ, 'ಸಿ' 'ಎ'ಯನ್ನು ಪ್ರೀತಿಸಿದರೆ, 'ಬಿ' 'ಎ'ಯನ್ನು ಪ್ರೀತಿಸಿದ ಹಾಗಾಗುತ್ತದಾ?
11.    ಯಾತನೆಯೆಂಬುದು ಪರಿಪಕ್ವತೆಯ ಮೆಟ್ಟಿಲಂತೆ. ಹಾಗಾದರೆ ಸುಖವು ಯಾವುದರ ಮೆಟ್ಟಿಲು?
12.    ದಾರಿ ತನ್ನ ದಾರಿಯಲ್ಲಿ ತಾನೇ ನಡೆಯುತ್ತದಾ?
(ಕವಿ ಪಾಬ್ಲೊ ನೆರೂಡನ 'ಬುಕ್ ಆಪ್ ಕ್ವೆಶ್ಚನ್ಸ್‌' ಪ್ರೇರಣೆಯಿಂದ)

-ಕೇರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.