ಉಳಕೀ ಉಮ್ಮಳಗಳು
ಅತ್ತರ್ ಆರುವ ಹೊತ್ತಲ್ಲಿ ಜಿನುಗುವ ಬೆವರ ಹನಿಉಳಿದೆಲ್ಲಾ ಇದ್ದವು, ಇತ್ತು, ನಡೆದಿತ್ತು, ನಡೆದಿದ್ದೆವುಗಳ...

ಅತ್ತರ್ ಆರುವ ಹೊತ್ತಲ್ಲಿ ಜಿನುಗುವ ಬೆವರ ಹನಿ
ಉಳಿದೆಲ್ಲಾ ಇದ್ದವು, ಇತ್ತು, ನಡೆದಿತ್ತು, ನಡೆದಿದ್ದೆವುಗಳ
ಬಟ್ಟೆ ಸುಲಿದು, ಹಸಿ ಹಸಿಯಾಗಿ ನಾನು ಉರಿಯುತ್ತಿರುವ ಚಿತೆ
ಯಲ್ಲಿ ಎಸೆಯುತ್ತಿರುವಾಗ, ಅಸ್ಥಿಮಜ್ಜೆಯ ಕೊನೆಯ ತೇವ ಜತೆಯಾಗುತ್ತದೆ ನೆನಪುಗಳೆಂಬ ಬೆತ್ತಲಿಗೆ.
ಕರಟಿಹೋದ ಚಿಗುರುಗಳ ಉಳಕೀ ಇದ್ದಲು
ಶ್ವೇತಪತ್ರದ ಮೇಲೆ ಮಕಾಡೆ ಬಿದ್ದು, ಅರ್ಥವಾಗದ ಆಕಾರ
ದಲ್ಲಿ ಏನೋ ಹೇಳುವ ದಲ್ಲಾಳಿಕೆ ಮಾಡುತ್ತಿದ್ದರೆ
ಸಂಜೆಯೊಂದು ಅಮಲೇರಿ, ಥೈಯ ಥಕ ಕುಣಿದಿದೆ.
ನೋವಿಗೋ.. ನಲಿವಿಗೋ..
ದೀಡ್ ಶ್ಯಾಣಿ ಈ ಕ್ಷಣಗಳು ಅರ್ಥಕ್ಕಿಂತ ಹಡೆದದ್ದು ಅನರ್ಥ
ಗಳನ್ನೇ ಹೆಚ್ಚು ಓಟ ಕೀಳುವ ಹುಚ್ಚು ಕುದುರೆಯ ಲಗಾಮು
ಕೈತಪ್ಪಿರುವಾಗ ರಸ್ತೆ ಬೆಟ್ಟ ಬಯಲು ಹೊಳೆ ಕೊಳ್ಳಗಳು
ನಿಘಂಟಿನಾಚೆ ಜಿಗಿದು, ಪ್ರಾಣ ಕಳಕೊಳ್ಳುತ್ತವೆ.
ಎಲ್ಲ ತರಚು, ಮುರಿತ, ಕೀವುಗಟ್ಟಿದ ವೃಣಗಳ ದುರ್ನಾತ
ವನ್ನು ಮರೆಯಲಿಕ್ಕಾಗಿ ಪೂಸಿಕೊಂಡ ಅತ್ತರ್ ಕೊನೆ ಚರಣ
ದಲ್ಲಿ ಪ್ರಾಣ ಬಿಡುವ ಹೊತ್ತಿನಲ್ಲಿ ಬಿಡುವ ನಿಟ್ಟುಸಿರಿನ
ಜತೆಗೆಂಬಂತೆ ಹುಟ್ಟು ಪಡೆವ ಬೆವರ ಹನಿ
ಉಳಕೀ ಉಮ್ಮಳಗಳಿಗೆ ನೀರುಣಿಸುತ್ತದೆ ಸಾಕಿ,
ಎಂದೂ ಎದೆಯೂಡದ ನೀನಗಿದೆಲ್ಲ ಅರ್ಥವಾಗದು!
- ಎನ್ವೀ. ವೈದ್ಯ ಹೆಗ್ಗಾರ್
inachinenapu@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


