ಖುಷಿ

ಕೆಲವು ಪುಟಗಳು

Published On :

'ಕಲಾ ಸಂಗೀತ ಎಂದರೇನು?' ಎನ್ನುವ ಪ್ರಶ್ನೆ ನನ್ನನ್ನು ತುಂಬಾ ಕಾಡುತ್ತಿದೆ. ಸಂಗೀತ ಮತ್ತು ಸಂಗೀತದ ಪ್ರದರ್ಶನ ಎರಡಕ್ಕೂ ವ್ಯತ್ಯಾಸವಿಲ್ಲವೇ? ಅವೆರಡೂ ಒಂದೆಯೇ? ಕಲಾ ಸಂಗೀತದ ಅನುಭವ (ನಾನು ಕರ್ನಾಟಕ ಸಂಗೀತವನ್ನು ಕಲಾ ಸಂಗೀತ ಎಂದೇ ಭಾವಿಸುತ್ತೇನೆ) ಕೇವಲ ಮನರಂಜನೆಯೇ ಅಥವಾ ಅದಕ್ಕಿಂತ ಹೆಚ್ಚಿನದು ಏನಾದರೂ ಇದೆಯೇ? ನಾನಿಲ್ಲಿ 'ಇನ್ನೂ ಹೆಚ್ಚಿನದು' ಎನ್ನುವಾಗ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಅನುಭವಗಳನ್ನು ಕುರಿತು ಮಾತನಾಡುತ್ತಿಲ್ಲ. ಏಕೆಂದರೆ ಒಂದರ್ಥದಲ್ಲಿ ಅವುಗಳು ಕೂಡ ಮನರಂಜನೆ ಎನ್ನುವ ಪ್ಯಾಕೇಜಿನಲ್ಲೇ ಬಂದುಬಿಡುತ್ತವೆ ಎನ್ನಿಸುತ್ತದೆ. ಇಲ್ಲಿ ನಾನು ಒಂದು ಸಿದ್ಧಚೌಕಟ್ಟಿನ ಮಿತಿಯನ್ನು ಮೀರಿಕೊಂಡ ಕಲಾ ಸಂಗೀತದ ಅಭಿವ್ಯಕ್ತಿಯನ್ನು ಒಪ್ಪಿಕೊಳ್ಳುವ ಮತ್ತು ಅದನ್ನು ಹಾಗೇ ಪ್ರದರ್ಶಿಸುವುದಕ್ಕೆ ಕಲಾವಿದನಿಗೆ ಇರುವ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿದ್ದೇನೆ. ನನ್ನ ದೃಷ್ಟಿಯಲ್ಲಿ ಕಲಾ ಸಂಗೀತ ಎನ್ನುವುದು ಎಲ್ಲರೂ ಅನುಭವಿಸಬಹುದಾದ, ಒಂದು ತೀವ್ರ ರಸಾನುಭವ. ಅದು ಶೋತೃಗಳಿಗೆ ಒಬ್ಬ ಸಂಗೀತಗಾರ ಒದಗಿಸುವ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಸೇವೆಯಲ್ಲಿ ಅಥವಾ ಮನರಂಜನೆಯೂ ಅಲ್ಲ.  ಕಳೆದ ನೂರು ವರ್ಷಗಳಲ್ಲಿ ನಾವು ಸಂಗೀತ ಹಾಗೂ ಅದರ ಪ್ರದರ್ಶನ ಎರಡೂ ಒಂದೇ ಎನ್ನುವ ಹಂತಕ್ಕೆ ತಂದುಬಿಟ್ಟಿದ್ದೇವೆ ಎನ್ನಿಸುತ್ತದೆ. ಇದು ಹೇಗಾಗಿದೆಯೆಂದರೆ, ಇಂದು ನಾವು ಸಂಗೀತವನ್ನು ಕಚೇರಿ ಎನ್ನು ಪ್ರಿಸಂ ಮೂಲಕ ನೋಡುತ್ತಿದ್ದೇವೆ. ಕಳೆದ ಶತಮಾನದಿಂದ ಈ ಗ್ರಹಿಕೆಯ ಪರಿಣಾಮ ಹಲವಾರು ಸಂಗೀತಗಾರರ ಮೇಲೆ ಆಗಿದೆ. ಪ್ರದರ್ಶನ ಎನ್ನುವ ಬಲೆಯಲ್ಲಿ ಕರ್ನಾಟಕ ಸಂಗೀತ ಸಿಲುಕಿಕೊಂಡುಬಿಟ್ಟಿದೆ. ಇಂದು ಇದೇ ಕರ್ನಾಟಕ ಸಂಗೀತದ ಚಾಲಕಶಕ್ತಿಯಾಗಿಬಿಟ್ಟಿದೆ. ಶ್ರೋತೃಗಳ ಮುಂದೆ ಹಾಡಲು ಪ್ರಾರಂಭಿಸಿದ ಕೂಡಲೆ ಅವರ ದೃಷ್ಟಿಯಲ್ಲಿ ನೀವೊಬ್ಬ ಮನೋರಂಜನೆಗಾರ ಮತ್ತು ನೀವು ಪ್ರೇಕ್ಷಕರ ನಿರೀಕ್ಷೆಗಳನ್ನು ಪೂರೈಸಲೇಬೇಕು ಮತ್ತು ರೂಢಿಯಲ್ಲಿರುವ ನಿಯಮಗಳಿಗೆ ಅನುಗುಣವಾಗಿ ಹಾಡಲೇಬೇಕಾಗುತ್ತದೆ. ಆದರೆ ನಾನಿದನ್ನು ಒಪ್ಪುವುದಿಲ್ಲ. ಕಲಾ ಸಂಗೀತದ ದೃಷ್ಟಿಯಿಂದ ಪ್ರದರ್ಶನದ ಸ್ಥಳ ಎನ್ನುವುದು ಮುಖ್ಯವಾಗುವುದೇ ಇಲ್ಲ.
ಕಲಾ ಸಂಗೀತ ಎಂದರೇನು?
ಕೃತಿ: ಸಹಸ್ಪಂದನ
(ಸಂಗೀತವನ್ನು ಕುರಿತ ಟಿ.ಎಂ.ಕೃಷ್ಣ ಅವರ ಚಿಂತನೆಗಳು)
ರಾಗಮಾಲಾ ಪುಸ್ತಕ ಮಾಲಿಕೆ- 3
ಸಂ: ಶೈಲಜ, ಟಿ.ಎಸ್.ವೇಣುಗೋಪಾಲ್
ಪುಟ: 128, ಬೆಲೆ: 100

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.