ಡಾಕ್ಟರ್ ಬಿಳಿ ಕೋಟನ್ನೂ ಲಾಯರ್ ಕರಿ ಕೋಟನ್ನೂ ಧರಿಸುವ ಉದ್ದೇಶವೇನು?

ಅಶೋಕ್ ಜಿ. ಶೇಟ್, ಭದ್ರಾವತಿ
ರಾಜಕಾರಣಿಗಳಿಗೆ ಪೊರಕೆಯಲ್ಲಿ ಹೊಡೆಯಿರಿ ಅನ್ನುತ್ತೇವೆ. ಆದರೆ ಈಗ ಅದೇ ಒಂದು ಪಕ್ಷದ ಚಿನ್ಹೆಯಾಗಿದೆಯಲ್ಲ?
ಇನ್ಮೇಲೆ ಚಪ್ಪಲಿ ಹಿಡ್ಕೋಬೇಕು!
ಕಾಳೀಹುಂಡಿ ಶಿವಕುಮಾರ್, ಮೈಸೂರು.
ಪ್ರತಿಯೊಬ್ಬ ರಾಜಕಾರಣಿಯೂ ನಾನು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಅಂತಾರಲ್ಲ?
ಇಲ್ಲದಿದ್ರೆ 'ಬಿದ್ದ' ಅಂತಲೇ ಅರ್ಥ!
ಆರ್.ಸಿ. ಪರಶುರಾಮ್, ಶಿಕಾರಿಪುರ.
ಡಾಕ್ಟರ್ ಬಿಳಿ ಕೋಟನ್ನೂ ಲಾಯರ್ ಕರಿ ಕೋಟನ್ನೂ ಧರಿಸುವ ಉದ್ದೇಶವೇನು?
ಅವರದ್ದು ವೈಟ್ ವಾಷ್, ಇವರದ್ದು ಬ್ಲ್ಯಾಕ್ ಲೀಸ್ಟ್!
ಶ್ರೀಕಾಂತ ಮುದಗಲ್ಲ, ಇಳಕಲ್ಲ.
ರಾಜಕಾರಣಿಗಳ ನಿವೃತ್ತಿ ವಯಸ್ಸನ್ನು 60ಕ್ಕೆ ನಿಗದಿಗೊಳಿಸಿದರೆ ಹೇಗೆ?
ಆಮೇಲೆ ರಾಜಕಾರಣವನ್ನು ಪ್ರವೃತ್ತಿ ಅಂತ ತಗೊಳ್ತಿದ್ರು!
ವಿ. ಹೇಮಂತ್‌ಕುಮಾರ್, ಬೆಂಗಳೂರು.
ಗಡ್ಡ, ಮೀಸೆ ಬಿಟ್ಟವರೆಲ್ಲ ಚುಂಬನ, ವಿರೋಧಿಗಳೇ?
ನೀವು ದೇವಿಶ್ರೀ ಗುರೂಜಿ 'ಲೀಲೆ' ನೋಡಿಯೂ ಈ ಪ್ರಶ್ನೆ ಕೇಳ್ತೀರಲ್ಲ!
ಶ್ರೀಕಾಂತ ಮುದಗಲ್ಲ, ಇಳಕಲ್ಲ
ಎದೆತುಂಬಿ ಹಾಡುವುದಕ್ಕೂ, ಹೊಟ್ಟೆ ತುಂಬಿ ಹಾಡುವುದಕ್ಕೂ ವ್ಯತ್ಯಾಸವೇನು?
ಎದೆ ತುಂಬಿ ಹಾಡಿದರೆ ರಾಗ, ಹೊಟ್ಟೆ ತುಂಬಿ ಹಾಡಿದರೆ ತೇಗ!
ಪಿ.ಜೆ. ರಾಘವೇಂದ್ರ, ಮೈಸೂರು.
ಬೇಬಿ ಇಂದಿರಾ, ಬೇಬಿ ರೇಖ, ಮಾ॥ ಮಂಜುನಾಥ್, ಬೇಬಿ ಶ್ಯಾಮಿಲಿಯಂತಹ ಬಾಲ ನಟ ನಟಿಯರು ಈಗೇಕಿಲ್ಲ?
ಇದ್ದಾರೆ, ಅಂಥವರೆಲ್ಲ ಈಗ ಟಿವಿ ಲಿಯಾಲಿಟಿ ಶೋಗೇ ಸುಸ್ತಾಗಿಬಿಡ್ತಾರೆ!
ಬಿ.ಎಂ. ಪರಶಿವಮೂರ್ತಿ, ಬೆಂಗಳೂರು.
ಹೆಂಗಸರು ಒಡವೆ ಅಂದ್ರೆ ಪ್ರಾಣ ಬಿಡ್ತಾರೆ, ಗಂಡಸರು?
ನಿಟ್ಟುಸಿರು ಬಿಡ್ತಾರೆ!
- ಎಸ್.ವಿ. ಪದ್ಮನಾಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


