ಖುಷಿ

ಜೇಡರ ಕಣಿವೆ

ಕೆನೆತ್ ಆಂಡರ್ಸನ್ ಅವರ ಕಾಡಿನ ಮತ್ತು ಬೇಟೆಯ ಕತೆಗಳನ್ನು ಪೂರ್ಣಚಂದ್ರ ತೇಜಸ್ವಿಯವರು ಕನ್ನಡಿಗರಿಗೆ..

Published On :

ಕೆನೆತ್ ಆಂಡರ್ಸನ್ ಅವರ ಕಾಡಿನ ಮತ್ತು ಬೇಟೆಯ ಕತೆಗಳನ್ನು ಪೂರ್ಣಚಂದ್ರ ತೇಜಸ್ವಿಯವರು ಕನ್ನಡಿಗರಿಗೆ ಪರಿಚಯಿಸಿದ್ದರು. ಇದೀಗ ನಡಹಳ್ಳಿ ವಸಂತ ಅವರು ಆಂಡರ್ಸನ್ ಅವರ ನಾಲ್ಕು ಬರೆಹಗಳನ್ನು ಕನ್ನಡಕ್ಕೆ ತಂದಿದ್ದಾರೆ. ಜೇಡರ ಕಣಿವೆಯಲ್ಲೊಂದು ರಾತ್ರಿ ಎಂಬ ಬರೆಹವನ್ನು 'ಜಂಗಲ್ಸ್ ಲಾಂಗ್ ಎಗೋ' ಎಂಬ ಕೃತಿಯಿಂದ ಹಾಗೂ ಬಿರುಗಾಳಿ ಮಳೆಯ ಅವಾಂತರ, ಗೆರ್ಹಟ್ಟಿಯ ನರಭಕ್ಷಕ ಚಿರತೆ, ಅಮ್ಲಿಗೊಳದ ಗೌಡನರಾಯ ಎಂಬ ಬರೆಹಗಳನ್ನು 'ಟೇಲ್ಸ್ ಫ್ರಾಮ್ ದಿ ಇಂಡಿಯನ್ ಜಂಗಲ್ಸ್‌' ಕೃತಿಯಿಂದ ಕನ್ನಡಿಸಿದ್ದಾರೆ. ಅನುವಾದದಲ್ಲಿ ಲವಲವಿಕೆ ಇದೆ.
ಪ್ರ: ಲಂಕೇಶ ಪ್ರಕಾಶನ, ಗುಲಬರ್ಗಾ, ಪುಟಗಳು 79, ಬೆಲೆ ರು 50
ಹಾಲಕ್ಕಿಗಳ ಅಧ್ಯಯನ
ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಜನಾಂಗವು ವಿಶಿಷ್ಟ ಸಂಸ್ಕೃತಿಯ ಆಗರವಾಗಿದೆ. ಅಂಕೋಲಾದ ಹಾಲಕ್ಕಿ ಕೊಪ್ಪವೊಂದರಲ್ಲಿ ಹುಟ್ಟಿ ಬೆಳೆದ ವಿಷ್ಣು ನಾಯ್ಕ ಅವರು ಹಾಲಕ್ಕಿಗಳ ಬಗೆಗೆ ಹಲವು ಹೊಸ ಸಂಗತಿಗಳನ್ನು ತಮ್ಮ 'ಹಾಲಕ್ಕಿಗಳು: ಒಂದು ಅಧ್ಯಯನ' ಕೃತಿಯಲ್ಲಿ ಹೇಳಿದ್ದಾರೆ. ಜಾನಪದ ಅಧ್ಯಯನದ ಕ್ಷೇತ್ರಕಾರ್ಯದ ಶಿಸ್ತು ಇದರಲ್ಲಿ ಇಲ್ಲದಿದ್ದರೂ ಒಂದಷ್ಟು ಒಳಗಿನ ವಿಚಾರಗಳು ಈ ಗ್ರಂಥದಲ್ಲಿ ಇದೆ ಎಂಬ ಭಾವನೆ ಲೇಖಕರದ್ದು. ಹಾಲಕ್ಕಿಗಳ ಕುರಿತ ಇದುವರೆಗಿನ ಅಧ್ಯಯನವನ್ನು ಈ ಕೃತಿ ವಿಸ್ತರಿಸಿದೆ.
ಪ್ರ: ಲೇಖಕ ಪ್ರಕಾಶಕರು, ಅಂಬಾರಕೊಡ್ಲ, ಅಂಕೋಲಾ, ಪುಟಗಳು 284, ಬೆಲೆ ರು 280
ಕಣವಿ ಬರೆದ ಮಕ್ಕಳ ಪದ್ಯ
ಕನ್ನಡದ ಹಿರಿಯ ಕವಿ ಚೆನ್ನವೀರ ಕಣವಿಯವರು ಮಕ್ಕಳಿಗಾಗಿ ಬರೆದ ಪದ್ಯಗಳ ಸಂಕಲನ 'ಚಿಣ್ಣರ ಲೋಕವ ತೆರೆಯೋಣ'. ಹಳೆಯ ಕವಿತೆಗಳ ಜತೆಗೆ ಇತ್ತೀಚೆಗೆ ಬರೆದ ಕೆಲವು ಹೊಸ ಕವಿತೆಗಳೂ ಸೇರಿ ಈ ಸಂಕಲನವಾಗಿದೆ. ಮಕ್ಕಳ ಮನಸ್ಸನ್ನು ಅರಿತು ಅವರ ಶಬ್ದಕೋಶದ ಮಿತಿಯೊಳಗೆ ಕವಿತೆ ರಚಿಸುವುದು ಸವಾಲಿನ ಕೆಲಸವೇ. ಮಕ್ಕಳು ಒಮ್ಮೆ ಕೇಳಿಸಿಕೊಂಡರೆ ಮತ್ತೆ ಮತ್ತೆ ನೆನಪಿಗೆ ತಂದುಕೊಳ್ಳುವ ಸರಳವಾದ ಭಾಷೆಯ, ಲಾಲಿತ್ಯಪೂರ್ಣವಾದ ಹಲವು ಪ್ರಾಸಬದ್ಧ ರಚನೆಗಳು ಇದರಲ್ಲಿವೆ.
ಪ್ರ: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ, ಪುಟಗಳು 68, ಬೆಲೆ ರು 50

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.