ಸರ್ಕಾರಿ ಮಂಜೂರಾತಿ ಪಿತ್ರಾರ್ಜಿತವಲ್ಲ
ಎಸ್. ಗಣೇಶ್, ಭದ್ರಾವತಿ
ತಂದೆಗೆ ಭೂಸುಧಾರಣೆ ಕಾಯ್ದೆಯನ್ವಯ ಎರಡು ಎಕರೆ ಹಾಗೂ ಸರ್ಕಾರದಿಂದ ಮೂರು ಎಕರೆ ಜಮೀನು ಮಂಜೂರಾಗಿದ್ದು, ಅದರಲ್ಲಿ ಎರಡನೇ ಮಗನಿಗೆ 3 ಎಕರೆ ಜಮೀನನ್ನು ವಿಲ್ ಮೂಲಕ ಕೊಟ್ಟು ಉಳಿದ 2 ಎಕರೆಯನ್ನು ಬಾಕಿ 4 ಜನ ಗಂಡುಮಕ್ಕಳಿಗೆ ತಲಾ 1/2 ಎಕರೆ ಬರೆದಿದ್ದಾರೆ. ಹೆಣ್ಣುಮಕ್ಕಳಿಗೆ ಹಿಸ್ಸೆ ಕೊಟ್ಟಿಲ್ಲ. ತಂದೆ ತೀರಿಹೋಗಿದ್ದಾರೆ. ಪ್ರಶ್ನೆ ಏನೆಂದರೆ, ಸರ್ಕಾರ ಮಂಜೂರು ಮಾಡಿದ ಜಮೀನಿನಲ್ಲಿ ಉಳಿದವರಿಗೆ ಹಕ್ಕಿಲ್ಲವೇ?
- ಸರ್ಕಾರಿ ಮಂಜೂರಾತಿಯು ಪಿತ್ರಾರ್ಜಿತವಲ್ಲ. ಆದ್ದರಿಂದ ಉಳಿದವರಿಗೆ ಯಾವ ಹಕ್ಕೂ ಬರುವುದಿಲ್ಲ. ಭೂಸುಧಾರಣಾ ಜಮೀನು ತಂದೆಯ ಕಾಲದಿಂದ ಬಂದಿದ್ದರೆ ಮಾತ್ರ ಹೆಣ್ಣುಮಕ್ಕಳಿಗೂ ಹಕ್ಕು ಬರುತ್ತದೆ. ಇಲ್ಲದಿದ್ದರೆ ಇಲ್ಲ.
ವಂಚನೆ ಮೊಕದ್ದಮೆ ದಾಖಲಿಸಿ
ರಮೇಶ್ಅರಾಮು.ಊರಿಲ್ಲ
ಲ್ಯಾಂಡ್ ಡೆವಲಪರ್ ಒಬ್ಬ ಇಪ್ಪತ್ತು ಜನರಿಗೆ ಒಂದು ರೆವೆನ್ಯೂ ಜಾಗವನ್ನು ಬೇರೆ ಬೇರೆಯಾಗಿ ಖರೀದಿಗೆ ಕೊಟ್ಟು ನಂತರ ತನ್ನ ಹೆಂಡತಿ ಹೆಸರಿಗೆ ದಾನಪತ್ರ ಮಾಡಿಕೊಟ್ಟಿದ್ದಾನೆ. ನಮ್ಮ ಜಾಗ ಭದ್ರಪಡಿಸಿಕೊಳ್ಳಲು ಏನು ಮಾಡಬೇಕು?
- ನಿಮ್ಮ ಕ್ರಯ ಪತ್ರದ ಆಧಾರದ ಮೇಲೆ ನಿಮ್ಮ ಹೆಸರಿಗೆ ಖಾತೆ ಮಾಡಲು ಗ್ರಾಮಪಂಚಾಯ್ತಿಗೆ ಅರ್ಜಿ ಕೊಡಿ. ತೆರಿಗೆಯನ್ನು ಪಾವತಿಸಿ. ಜತೆಗೆ ದಾನಪತ್ರವನ್ನು ರದ್ದುಗೊಳಿಸಲು ಕೋರಿ ನ್ಯಾಯಾಲಯದಲ್ಲಿ ದಾವಾ ಹಾಕಿ. ಅಲ್ಲದೆ ಆತನ ಹೆಂಡತಿಯು ಆ ಆಧಾರದ ಮೇಲೆ ಯಾರಿಗಾದರೂ ಮಾರಿದ್ದರೆ ನ್ಯಾಯಾಲಯದಲ್ಲಿ ಅವರ ಮೇಲೆ ವಂಚನೆ, ಫೋರ್ಜರಿ ಮೊಕದ್ದಮೆ ದಾಖಲಿಸಿ.
ಉಪವಿಭಾಗವಾಗದೆ ಸಾಧ್ಯವಿಲ್ಲ
ಜಿ.ಎಂ. ಕೋರಿಶೆಟ್ಟರ್, ಹಾವೇರಿ
ಒಂದು ಸರ್ವೇ ನಂಬರ್ನಲ್ಲಿಯ ಅವಿಭಕ್ತ ಕುಟುಂಬದ ಜಾಗ ಹಿಸ್ಸೆಯಾದಾಗ ಮಧ್ಯೆ ಬಿಟ್ಟ ಜಾಗ ಸಾಮೂಹಿಕ ದಾರಿ ಆ ಭಾಗದವರಿಗೆ ಲಭ್ಯವಿಲ್ಲವೇ? ವ್ಯವಸಾಯೇತರ ಜಮೀನು ಉಪವಿಭಾಗವಾಗದೆ ಪೂಟ್ ಹಿಸ್ಸೆ ಮಾಡಬಹುದೇ?
- ಖರೀದಿದಾರರಿಗೆ ಮೂಲ ಮಾಲೀಕರಿಗಿರುವ ಎಲ್ಲ ಹಕ್ಕೂ, ದಾರಿಯೂ ಒಳಗೊಂಡಂತೆ ಇರುತ್ತದೆ. ಉಪವಿಭಾಗವಾಗದೆ ಪೂಟ್ ಹಿಸ್ಸೆ ಮಾಡಲು ಬರುವುದಿಲ್ಲ.
ಕ್ರಯಪತ್ರ ರದ್ದತಿಗೆ ಅರ್ಜಿ ಸಲ್ಲಿಸಿ
ಸಂಪತ್ಕುಮಾರ್, ಅಗ್ರಹಾರ
ಪಿತ್ರಾರ್ಜಿತ ಆಸ್ತಿಯಲ್ಲಿ ಒಂದು ಎಕರೆ ಜಮೀನನ್ನು ಬೇರೊಬ್ಬರಿಗೆ ಮಾರಾಟ ಮಾಡಿದೆವು. ಖರೀದಿದಾರರು ಉಳಿದ ಜಮೀನಿನಲ್ಲಿ 10 ಗುಂಟೆ ಒತ್ತುವರಿ ಮಾಡಿಕೊಂಡು ಮಾರಾಟ ಮಾಡಿರುತ್ತಾರೆ. ನ್ಯಾಯಾಲಯಕ್ಕೆ ನಾವು ಹೋಗಬಹುದೇ?
- ತಹಸೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿ ಅವರಿಗೆ ಮಾರಾಟ ಮಾಡಿದ ಜಾಗವನ್ನು ಸರ್ವೇ ಮಾಡಿಸಿ. ನಂತರ ಸಂಬಂಧಿಸಿದವರಿಗೆ ನೋಟೀಸ್ ನೀಡಿ ಕ್ರಯಪತ್ರವನ್ನು ರದ್ದುಪಡಿಸುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ.
-ಎಚ್.ಆರ್. ಕಸ್ತೂರಿರಂಗನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

