ಮೆಗಾಮಾಲ್ ಶಾಪಿಂಗ್

ಈ ಮೆಗಾ ಶಾಪಿಂಗ್ ಮಾಲ್ನಲ್ಲಿ ಶಾಪಿಂಗ್ ಮಾಡುವಾಗ
ಬರುತ್ತವೆ ಅತಿ ಮೈಕ್ರೋ ವಿಚಾರಗಳು...
ಉದಾಹರಣೆಗೆ, ನಾನು ಮೊದಲ ರ್ಯಾಕ್ನಲ್ಲಿರುವ
ವ್ಹಿಸ್ಪರ್ ನ್ಯಾಪ್ಕಿನ್ ಪ್ಯಾಡ್
ಯುವತಿಯೊಬ್ಬಳ ಅತಿ ಸಮೀಪವಿದ್ದು
ಹೀರಿಕೊಳ್ಳುತ್ತಿದ್ದೇನೆ ಅದರಲ್ಲಿರುವ ರಸವನ್ನು.
ನೆಕ್ಸ್ಟ್ ರ್ಯಾಕ್ನಲ್ಲಿಡಲಾದ ಹಗ್ಗೀಜ್ ಪ್ಯಾಕ್ ಆಗಿ
ಶೇಖರಿಸಿಟ್ಟುಕೊಳ್ಳುತ್ತಿದ್ದೇನೆ ಮಗುವೊಂದರ ಮಲ-ಮೂತ್ರವನ್ನು
ನಾಲ್ಕೈದು ಗಂಟೆಗಳ ಅದರ ಸಹವಾಸದಲ್ಲಿ
ಚಿಂತಿಸುತ್ತಿದ್ದೇನೆ ಅದರ ಬಗ್ಗೆ ಇಡೀ ಏಕಾಗ್ರತೆಯೊಂದಿಗೆ
ಉದಾಹರಣೆಗೆ ನಾನೊಂದು ಶ್ರೇಷ್ಠ ದರ್ಜೆಯ ಕೆಮೆ ಸಾಬೂನು
ಅಥವಾ ಯಾರ್ಡಲೆ, ಲಕ್ಸ್ ಇಂಟರ್ನ್ಯಾಶನಲ್ ಇತ್ಯಾದಿ-ಇತ್ಯಾದಿ
ಮತ್ತೆ ಓರ್ವ ದಢೂತಿ ಮಹಿಳೆಯ ತೊಡೆಗಳಲ್ಲಿ,
ಚಡಪಡಿಸುತ್ತಿದ್ದೇನೆ ನುಗ್ಗಿ.
ಅಥವಾ ನಾನೊಂದು ಮುಳ್ಳು- ಚಮಚ?
ನಲವತ್ತನ್ನು ದಾಟಿದ ಒಬ್ಬ ಮರಾಠ ಮನುಷ್ಯ ಈ ಚಮಚದಿಂದ
ತಿನ್ನುತ್ತಿದ್ದಾನೆ ಮ್ಯಾಗಿ ನೂಡಲ್ಸ್
ಮತ್ತೆ ನಾನು ಟಿ.ವಿ.
ಇಡೀ ಪರಿವಾರ ಕೂತಿದೆ ನನ್ನೆದುರು
ನೋಡುತ್ತಾ, ಊಟ ಮಾಡುತ್ತಾ, ನನ್ನ ಚಾನಲ್ಗಳನ್ನು ಬದಲಿಸುತ್ತಾ
ಅಥವಾ ಆಫ್ ಮಾಡಿ ಹೊರಟು ಹೋಗಿದ್ದಾರೆ ಎಲ್ಲರೂ ನನ್ನನ್ನು
ಏಕಾಂಗಿಯಾಗಿ ಬಿಟ್ಟು ಆ ಕೋಣೆಯಲ್ಲಿ ನನ್ನನ್ನು
ಮತ್ತೆ ನಾನು ಬಾಟಾ ರುಪಾಯಿಗಳ ಪಾದಪೀಠ,
ಅಪ್ಹೋಲ್ಸ್ಸ್ಟರಿಯ ಖರೀದಿಗೆ ಫ್ರೀಯಲ್ಲಿ ಸಿಕ್ಕ ಬೆಸ್ಟ್
ಆದರೂ ಬಾತ್ ರೂಮಿನಿಂದ ಬಂದ ನನ್ನ ಮಾಲೀಕ
ಒರೆಸುತ್ತಾನೆ ನನ್ನ ಮೇಲೇ ತನ್ನ ಒದ್ದೆ ಕಾಲುಗಳನ್ನು.
ಅಥವಾ ಪೊರಕೆಯೇ ನಾನು?
- ಇದರಿಂದ ಈ ಜನ ತಮ್ಮ ನೆಲವನ್ನು
ಮೇಲು- ಮೇಲೇ ಸ್ವಚ್ಛಗೊಳಿಸುತ್ತಾರೆ
ತೆಗೆಯುತ್ತಾರೆ ಬಲೆಗಳನ್ನು
ನನ್ನನ್ನು ಉಪಯೋಗಿಸುವ ಒಡತಿ ಉಪಯೋಗಿಸುತ್ತಾ ನನ್ನನ್ನು
ವ್ಯಾಕ್ಯೂಮ್ ಕ್ಲೀನರ್ ಕನಸು ಕಾಣುತ್ತಾಳೆ
ತಪ್ಪಿಯೂ ನನ್ನ ಸ್ಪರ್ಶ ಸ್ಪರ್ಶಿಸಿದರೆ ಇವಳ ಗಂಡನ ಶರೀರವನ್ನು
ಉಗಿಯುತ್ತಾಳೆ ಥೂ-ಥೂ ಎಂದು
ಅಥವಾ ನಾನು ನಾಲ್ಕನೇ ರ್ಯಾಕ್ನಲ್ಲಿರುವ ಕಿಟ್ ಕ್ಯಾಟ್
ಯಾರಿಗೂ ತಿಳಿಯದಂತೆ ಮಜವಾಗಿ ತಿನ್ನುತ್ತಿದ್ದಾರೆ ಜನ ನನ್ನನ್ನು
ಕುರಂ-ಕುರುಂ ಎಂದು.
ಅಥವಾ ನಾನು ವಿಟಾ-ಮಾರಿ ಬಿಸ್ಕತ್ ಪ್ಯಾಕ್?
ನನ್ನನ್ನು ತೆಗೆದುಕೊಂಡು ಹೋಗುವ ಕರುಣಾಳು ವ್ಯಕ್ತಿಗಾಗಿ
ಕಾಯುತ್ತಿದ್ದೇನೆ ದಾರಿ. ಅಥವಾ ನಾನು ಕಂದಿದ ಹಳದಿ ಬಣ್ಣದ
ಜೆಟ್ ಬ್ಲಾಕ್ನಲ್ಲಿ 20ರ್ ಆಫ್ನ ಹತಾಶ ಲೇಬಲ್
- ಈ ದಿನಗಳಲ್ಲಿ ಖುಷಿಗೊಳ್ಳುವುದೇ ಇಲ್ಲ ಇದನ್ನು ಓದಿ ನೀವು.
-ಕನ್ನಡಕ್ಕೆ: ಡಿ. ಎನ್. ಶ್ರೀನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


