ಬಿಲ್ಗೇಟ್ಸ್ಗೆ ಪತ್ರ
ಬಿಲ್ಗೇಟ್ಸ್ಗೆ ಪತ್ರ
ಕಳೆದ ಏಪ್ರಿಲ್ 1ರಂದು ಬಿಲ್ಲೂ ತನ್ನ ಕಂಪ್ಯೂಟರ್ ತೊಂದರೆಗಳ ಕುರಿತು ಬಿಲ್ಗೇಟ್ಸ್ಗೆ ಬರೆದ ಪತ್ರದಲ್ಲಿದ್ದ ಕೆಲವು ಸಾಲುಗಳು:
ನನ್ನ ಕಂಪ್ಯೂಟರಿನಲ್ಲಿ ಸ್ಟಾರ್ಟ್ ಬಟನ್ ಕೊಟ್ಟಿದೀರ. ಸ್ಟಾಪ್ ಬಟನ್ ಮಾತ್ರ ಯಾಕಿಲ್ಲ? ಪ್ಲೀಸ್ ಪರಾಂಬರಿಸಿ.
ಕಂಪ್ಯೂಟರಿನಲ್ಲಿ ರೀಸೈಕಲ್ ಬಿನ್ ಅಂತ ಇದೆ. ನನ್ ಹತ್ರ ಸೈಕಲ್ ಇಲ್ಲ ಸ್ಕೂಟರ್ ಇದೆ. ರೀ ಸ್ಕೂಟರ್ ಬಿನ್ ಹಾಕಿಸೋದ್ ಹೇಗೆ?
ಸರ್ಚ್ ಬಟನ್ನಲ್ಲಿ ಕಳೆದು ಹೋದ ನನ್ನ ನಾಯಿಮರೀನ ಹುಡುಕೋಕೆ ಆಗ್ತಾ ಇಲ್ಲ. ಯಾಕೆ? ಸರ್ಚ್ ಬಟನ್ ಸರಿಯಾಗಿ ವರ್ಕ್ ಆಗೋ ಹಾಗೆ ಮಾಡಿ ಬ್ರದರ್.
ಮೈಕ್ರೋಸಾಫ್ಟ್ ವರ್ಡ್ ಕಲಿತಾಗಿದೆ ನಾನು. ಇನ್ನೂ ಎಷ್ಟು ದಿನ ವರ್ಡ್ ಕಲೀಲಿ? ನಮ್ ಕಂಪ್ಯೂಟರಲ್ಲಿ ಬೇಗ ಮೈಕ್ರೋಸಾಫ್ಟ್ ಸೆಂಟೆನ್ಸ್ ಬರೋ ಹಾಗೆ ಮಾಡಿ.
ಮೈಕ್ರೋಸಾಫ್ಟ್ ಆಫೀಸ್ ಏನೋ ಇದೆ. ಮನೇಲಿ ಬಳಸೋಕೆ ಮೈಕ್ರೋಸಾಫ್ಟ್ ಹೋಮ್ ಬೇಕು. ಅದ್ಯಾವಾಗ ಬರುತ್ತೆ?
ಇನ್ನೊಂದ್ ಡೌಟು... ಗೇಟ್ ಅಂತ ಹೆಸ್ರಿಟ್ಕೊಂಡು ವಿಂಡೋಸ್ ಮಾರ್ತೀರಲ್ಲ ನೀವು... ಯಾಕೆ?
ಇನ್ನೂ ಸುಮಾರು ಡೌಟಿದೆ. ಮುಂದಿನ ಪತ್ರದಲ್ಲಿ ಬರೀತೀನಿ. ಸದ್ಯಕ್ಕೆ ಈ ಬಗ್ಗೆ ಒಂಚೂರು ನಿಗಾ ಕೊಡಿ
(ಬಿಲ್ ಗೇಟ್ಸ್ ಯಾಕೆ ಸತ್ಯಾ ನಾದೆಲ್ಲಾಗೆ ಜವಾಬ್ದಾರಿ ವಹಿಸಿಕೊಟ್ಟಿದ್ದು ಅಂತ ಗೊತ್ತಾಯ್ತಾ? )
=
ಮಾರುತಿ ಕಾರು ಹರಾಜು
ವ್ಯಾಪಾರಿಯೊಬ್ಬ ತನ್ನ ಹಳೇ ಲಟಾರಿ ಮಾರುತಿ ಕಾರು ಹರಾಜು ಹಾಕುತ್ತಿದ್ದ.
ಹರಾಜಿನ ಬೆಲೆ ಭರ್ಜರಿಯಾಗಿ ಏರತೊಡಗಿತು.
ಹದಿನೈದು ಲಕ್ಷ... ಇಪ್ಪತ್ತು ಲಕ್ಷ... ನಲವತ್ತು ಲಕ್ಷ...
ಇದನ್ನು ಗಮನಿಸಿದ ಗುಂಡ ಕೇಳ್ತಾನೆ: ಅರೇ.. ಇದೇನ್ ರೇಟು ಹೀಗ್ ಏರ್ತಾ ಇದೆ? ಅಂಥದ್ದೇನಿದೆ ಈ ಡಕೋಟಾ ಕಾರಲ್ಲಿ?
ವ್ಯಾಪಾರಿ: ಏನಿದೆ ಅಂತ ಕೇಳ್ತೀರಲ್ಲಾ ಗುಂಡಣ್ಣಾ..? ಈ ಕಾರು ಇಪ್ಪತ್ತೈದು ಸಲ ಭಯಂಕರ ಅಪಘಾತಕ್ಕೀಡಾಗಿದೆ. ಆದರೆ ಪ್ರತಿಸಲವೂ ಒಳಗಿದ್ದ ಹೆಂಡ್ತಿ ಮಾತ್ರ ಸತ್ತಿದ್ದಾಳೆ. ಇನ್ಯಾರಿಗೂ ಏನೂ ಆಗಿಲ್ಲ.
ಗುಂಡ: ಅರೆರೆರೆರೇ... ಮತ್ಯಾಕೆ ಇನ್ನೂ ನಲವತ್ತು ಲಕ್ಷದಲ್ಲೇ ಇದೀರಾ? ಒಂದು ಕೋಟಿ... ಒಂದ್ಸಲ ಎರಡ್ ಸಲ... ಮೂರ್ ಸಲ...!!
=
ತಪ್ಪು ಅನೌನ್ಸ್ಮೆಂಟ್
ಪಂಜಾಬಲ್ಲಿ ರೈಲಿಗೆ ಸಿಕ್ಕಿ ನೂರು ಜನ ಸತ್ತು ಹೋಗುತ್ತಾರೆ.
ಆದರೆ, ಕೋಲ್ಯ ಮಾತ್ರ ಉಳ್ಕೋತಾನೆ.
ಟಿವಿ ಸಂದರ್ಶಕ ಕೋಲ್ಯನನ್ನು ಕೇಳ್ತಾನೆ: ಇದೆಲ್ಲ ಹೇಗಾಯ್ತು ಸಾರ್?
ಕೋಲ್ಯ: ರೇಲ್ವೆ ಡಿಪಾರ್ಟ್ಮೆಂಟಿನ ಒಂದು ತಪ್ಪು ಅನೌನ್ಸ್ಮೆಂಟಿಂದ ಹೀಗಾಯ್ತು ನೋಡಿ.
ಶತಾಬ್ದಿ ಎಕ್ಸ್ಪ್ರೆಸ್ ಎರಡನೇ ನಂಬರ್ ಪ್ಲಾಟ್ಫಾರ್ಮ್ನತ್ತ ಬರುತ್ತಿದೆ ಅಂದದ್ದನ್ನು ಕೇಳಿ ಪ್ಲಾಟ್ಫಾರ್ಮಲ್ಲಿ ಇದ್ದವರೆಲ್ಲರೂ ಗಾಬರಿಯಿಂದ ಹಳಿಯ ಮೇಲೆ ಜಂಪ್ ಮಾಡಿದರು. ಆದರೆ, ಟ್ರೈನ್ ಪ್ಲಾಟ್ಫಾರ್ಮ್ನತ್ತ ಬರಲೇ ಇಲ್ಲ. ಹಳಿ ಮೇಲೇ ಬಂತು.
ಸಂದರ್ಶಕ: ಅಬ್ಬಾ ಪ್ಲಾಟ್ಫಾರ್ಮ್ ಮೇಲೆ ಟ್ರೈನ್ ಬರಲ್ಲ ಅಂತ ನೀವಾದ್ರೂ ಅರ್ಥ ಮಾಡ್ಕೊಂಡ್ರಲ್ಲ. ನಿಮ್ ಬುದ್ಧಿವಂತಿಕೆ ಮೆಚ್ಬೇಕು.
ಕೋಲ್ಯ: ಅಯ್ಯೋ ಇಲ್ಲಪ್ಪಾ... ನಾನು ಆತ್ಮಹತ್ಯೆ ಮಾಡ್ಕೊಳೋಕೆ ಬಂದಿದ್ದೆ. ಅವರ ಅನೌನ್ಸ್ಮೆಂಟ್ ಕೇಳಿ ನಾನು ಹಳಿ ಮೇಲಿದ್ದವ್ನು ಸಾಯೋದ್ ಮಿಸ್ ಆಗ್ಬಾರ್ದು ಅಂತ ಪ್ಲಾಟ್ಫಾರ್ಮ್ ಹತ್ಕೊಂಡೆ.
=
ಒಂದು ಬಾಡಿ ಕಥೆ
ಗುಂಡನ ಪಕ್ಕದ ಮನೇವ್ರು ಯಾರೋ ಕಾಯಿಲೆಯಿಂದಾಗಿ ಆಸ್ಪತ್ರೆಯಲ್ಲಿ ಸತ್ತು ಹೋಗಿರ್ತಾರೆ.
ಗುಂಡ ಬಂದು ಕೇಳ್ತಾನೆ: ಬಾಡಿ ಬಂತಾ?
ಗುಂಡ ಪ್ರಶ್ನೆ ಕೇಳೋ ಹೊತ್ತಿಗೆ ಸರಿಯಾಗಿ.. ಆ ಕಡೆಯಿಂದ ಆ್ಯಂಬುಲೆನ್ಸ್ಬರುತ್ತೆ.
ಗುಂಡ ಖುಷಿಯಿಂದ ಹೇಳ್ತಾನೆ. 'ಅರೆ ನಾನು ಕೇಳೋಕೂ... ಬಾಡಿ ಬರೋಕೂ... ಸರೀ ಹೋಯ್ತು! ನೂರ್ ವರ್ಷ ಆಯಸ್ಸು 'ಬಾಡಿ'ಗೆ!!!
ಚೇಂಜ್ ಎಲ್ಲ ಕಡೆಯೂ ಸಿಗಬೇಕು. ಎಟಿಎಂನಲ್ಲಿ ಮಾತ್ರ ಬೇಡ. - ರಿಕಿ ಕಂಡಕ್ಟರ್
ಸಾವು ಅನುವಂಶಿಕ ಕಾಯಿಲೆ ಬಿಡಿ, ನೀವಾದ್ರೂ ಏನ್ಮಾಡ್ತೀರಿ? - ಚಿನೀ ಡೆತ್
ಸಾಲ್ ಪನಿಕ
ಹಳೆ ಪ್ರಶ್ನೆ: ಅವಿಭಕ್ತ ಕುಟುಂಬ ಅಂದರೇನು?
ಹೊಸ ಉತ್ತರ: ಗಂಡ ಹೆಂಡತಿ ಒಟ್ಟಿಗೆ ಇರುವುದು.
ಅಜ್ಜಿತಾತಂದಿರೇ ಮೊಮ್ಮಕ್ಕಳ ನೆಚ್ಚಿನ ಗೆಳೆಯರಂತೆ. ಯಾಕೆ ಗೊತ್ತಾ? ಶತ್ರುವಿನ ಶತ್ರು, ಮಿತ್ರ ಎಂಬ ನಿಯಮ ನೆನಪಿಲ್ಲವಾ?
ತಿನ್ತಾ ಇರುವಾಗ ಅಥವಾ ಊಟ ಮಾಡ್ತಾ ಇರುವಾಗ ಓದೋ ಅಭ್ಯಾಸ ಒಳ್ಳೆಯದಲ್ಲ. ಯಾಕಂದ್ರೆ ಎರಡೆರಡು ವಸ್ತುಗಳು ಒಟ್ಟೊಟ್ಟಿಗೆ ಜೀರ್ಣ ಆಗೋದು ಕಷ್ಟ.
ಖಾರ ಹಾಗೂ ಬಿಸಿ ಬಿಸಿ ಊಟ ಮಾಡುವಾಗ ಮೈಯಿಂದ ಬರುವ ಬೆವರು, ವ್ಯಾಯಾಮದಿಂದ ಬರುವ ಬೆವರಿಗೆ ಸಮವಲ್ಲ. ಅದರಿಂದ ಕ್ಯಾಲರಿ ಇಳಿಯುವುದಿಲ್ಲ.
ಹೆಣ್ಮಕ್ಕಳು ಅತಿ ಕಡಿಮೆ ಮಾತಾಡುವ ತಿಂಗಳು ಯಾವುದು? ಫೆಬ್ರವರಿ. ಇರೋದೇ ಇಪ್ಪತ್ತೆಂಟು ದಿನ!
ಚೀನಾದ ಸ್ಕೂಲೊಂದರಲ್ಲಿ ಬಿಸಿಯೂಟದಲ್ಲಿ ಹಲ್ಲಿ ಬಿದ್ದಿತಂತೆ. ಅದರಿಂದಾಗಿ ಹದಿನೈದು ಮಕ್ಕಳು ಗಾಯಗೊಂಡರಂತೆ. ಹಿಡಿದು ತಿನ್ನಲು ಜಗಳವಾಡಿ!!
ಆಮ್ ಆದ್ಮಿ ಕೇಜ್ರಿವಾಲ್ ರಾಜಕೀಯ ಕಾರ್ಯಕ್ರಮಕ್ಕೆ ಲೇಟ್ ಆಗಿ ಬಂದರೆ 'ಆಮ್ಲೇಟ್ ಆದ್ಮಿ' ಅನ್ನಬಹುದಾ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

