ಖುಷಿ

ಅವರಿಬ್ಬರಿಗೂ ಹಕ್ಕಿದೆ

Published On :

ಅವರಿಬ್ಬರಿಗೂ ಹಕ್ಕಿದೆ
-ಹೆಸರು, ಊರು ಬೇಡ

ನನ್ನ ತಂಗಿಯು ಮದುವೆಯಾಗಿ ಒಂದು ಮಗು ಹೆತ್ತು ತೀರಿಕೊಂಡಿದ್ದಾಳೆ. ನಾನು ಮನೆಕಟ್ಟಲು ಬ್ಯಾಂಕಿನಲ್ಲಿ ಸಾಲ ಕೇಳಿದಾಗ ಅವರ ವಕೀಲರು, ತಂಗಿಯ ಗಂಡನಿಗೆ ಆ ಆಸ್ತಿಯಲ್ಲಿ ಹಕ್ಕಿದೆ ಎನ್ನುತ್ತಿದ್ದಾರೆ. ಸರಿಯೇ?
- ಹಿಂದೂ ಉತ್ತರಾಧಿಕಾರ ಕಾಯ್ದೆಯ ಕಲಂ 15(1)(ಎ) ಪ್ರಕಾರ ನಿಮ್ಮ ಸತ್ತ ತಂಗಿಗೆ ಮಗು ಇರುವುದರಿಂದ ಆಕೆಯ ಪಿತ್ರಾರ್ಜಿತ ಆಸ್ತಿಯ ಭಾಗದಲ್ಲಿ ಅವಳ ಮಗು ಹಾಗೂ ಗಂಡನಿಗೆ ಹಕ್ಕಿರುತ್ತದೆ.

ದಾವಾ ಹಾಕಿ ಪಡೆಯಬಹುದು
-ವಿಜಯಕುಮಾರ್ ರಾವ್ ಕದಂ, ಬೆಂಗಳೂರು

ಹದಿನೇಳು ತಿಂಗಳ ಹಿಂದೆ ನಾವು ಸೈಟೊಂದನ್ನು ಮಾರಿದ್ದು ಇಲ್ಲಿಯವರೆಗೂ ಕ್ರಯಪತ್ರದ ನಕಲನ್ನು ಆತ ನಮಗೆ ಕೊಟ್ಟಿಲ್ಲ. ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಪಡೆಯಬಹುದೇ?
ನನ್ನ ತಮ್ಮ ಆಸ್ತಿ ವಿಭಾಗದಲ್ಲಿ ತಾಯಿಯ ಪಾಲಿನ ಹಣ ಇಟ್ಟುಕೊಂಡಿದ್ದು, ತಾಯಿ ತೀರಿಹೋಗಿ ಏಳು ತಿಂಗಳಾದರೂ ಹಣ ನನಗೆ ಕೊಟ್ಟಿಲ್ಲ. ಕೋರ್ಟಿಗೆ ಹೋಗಬಹುದೇ?
- ಕ್ರಯಪತ್ರದ ನಕಲನ್ನು ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಪಡೆಯಬಹುದು.
ನಿಮ್ಮ ತಮ್ಮನ ಮೇಲೆ ದಾವಾ ಹಾಕಿ ನಿಮ್ಮ ತಾಯಿಯ ಬಾಬ್ತಿನ ಹಣದಲ್ಲಿ ನಿಮ್ಮ ಪಾಲನ್ನು ಅವಶ್ಯವಾಗಿ ಪಡೆಯಬಹುದು.

ನ್ಯಾಯಾಲಯವೇ ಪರಿಹಾರ ನೀಡುತ್ತದೆ.
-ಹೆಸರು, ಊರು ಬೇಡ

ನಾನೊಬ್ಬಳು ವಿಧವೆ. ನನ್ನ ಹೆಸರು ಹಾಗೂ ಮಗನ ಹೆಸರು ಜಂಟಿ ಮಾಡಿ ಒಂದು ಮನೆ, ಆಸ್ತಿ ಖರೀದಿಸಿದೆ. ಆತ ಸತ್ತುಹೋದ. ಅವನ ಹೆಂಡತಿ ಮಕ್ಕಳು ಆ ಮನೆಯಲ್ಲಿ ವಾಸವಿದ್ದು, ನನ್ನ ಭಾಗ ಮಾರಲು ತಗಾದೆ ತೆಗೆದು ವಿಷಯ ಕೋರ್ಟಿನಲ್ಲಿದೆ. ಇದಕ್ಕೆ ಪರಿಹಾರವಿಲ್ಲವೇ?
- ಇದಕ್ಕೆ ನ್ಯಾಯಾಲಯವೇ ಪರಿಹಾರ ತೋರಿಸಬೇಕು. ಬೇಕಾದರೆ ನೀವು ಹಿಂದೂ ಉತ್ತರಾಧಿಕಾರ ಕಾಯ್ದೆಯ ಕಲಂ 22ರಂತೆ ಸತ್ತವನ ಜಮೀನಿಗೆ ಮಾತ್ರ ಈ ಆದ್ಯತಾ ಹಕ್ಕು ಇದೆಯೇ ಹೊರತು ನಾನು ಬದುಕಿರುವಾಗ ನನ್ನ ಜಮೀನಿನಲ್ಲಿ ಸತ್ತವನ ಹೆಂಡತಿಗೆ ಯಾವ ಆದ್ಯತಾ ಹಕ್ಕೂ ಇಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಬಹುದು.

ನೋಟೀಸ್ ನೀಡಿ
-ಜೋಗಯ್ಯ, ರಾಮನಗರ

ಜಮೀನೊಂದನ್ನು ಖರೀದಿಸಿದಾಗ ಜಮೀನಿನ ಆಕಾರವನ್ನು ಸರಿಯಾಗಿ ಬರೆದಿರಲಿಲ್ಲ. ನಂತರ ತಹಸೀಲ್ದಾರರು ಸರಿ ಮಾಡಿ ಕೊಟ್ಟಿದ್ದಾರೆ. ಆದರೆ ನೋಂದಣಿಯಾಗಿರುವುದಿಲ್ಲ. ತಿದ್ದುಪಡಿ ಮಾಡಿಕೊಡಲು ಮಾರಾಟ ಮಾಡಿದವರು ಬರುತ್ತಿಲ್ಲ. ಪರಿಹಾರವೇನು?
- ತಿದ್ದುಪಡಿ ಮಾಡಿದ ನೋಂದಣಿ ಪತ್ರವನ್ನು ನೋಂದಣಿ ಮಾಡಿಕೊಡಲು ಮಾರಾಟಗಾರರಿಗೆ ನೋಟೀಸ್ ನೀಡಿ. ಒಪ್ಪದಿದ್ದರೆ ದಾವಾ ಹಾಕಬೇಕು.

-ಎಚ್.ಆರ್. ಕಸ್ತೂರಿರಂಗನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.