ಖುಷಿ

ಮೊಸಳೆ ಮತ್ತು ಹೃದಯ

ಹುಡುಕುತ್ತಿದ್ದೇನೆ ಕಳಚಿಟ್ಟ ಹೃದಯವನ್ನುಮೊಸಳೆಯ ಬೆನ್ನೇರಿ ಹೊಳೆ ದಾಟುವಾಗ...

ಮೊಸಳೆ ಮತ್ತು ಹೃದಯ
Published On :

ಹುಡುಕುತ್ತಿದ್ದೇನೆ ಕಳಚಿಟ್ಟ ಹೃದಯವನ್ನು
ಮೊಸಳೆಯ ಬೆನ್ನೇರಿ ಹೊಳೆ ದಾಟುವಾಗ
ಜತನವಾಗಿ ತೆಗೆದಿಟ್ಟ ನೇರಳೆ ಮರವನ್ನು
ಗುರುತಿಸಲಾರದೆ ಕಂಗೆಟ್ಟಿದ್ದೇನೆ

ದಂಡೆಗುಂಟ ಬೆಳೆದು ನಿಂತಿವೆ
ಒಂದೇ ಬಗೆಯ ಹಿಂಡು ಹಿಂಡು ಮರ
ಅವವೇ ಫಳಫಳ ಹಣ್ಣ ಗೊಂಚಲು
ಅಸಲಿ ನಕಲಿ ಪತ್ತೆ ಸಿಗದ ನೇರಳೆಗಳು
ಎಲ್ಲಿ ಹುಡುಕಲಿ ಹೃದಯವನ್ನು
ನೀಲಿ ಬಾನ ನಿಲುವುಗನ್ನಡಿಯಂತೆ
ಹೊಳೆಯುತ್ತಿದೆ ಹೊಳೆಯ ಸುಳಿ ನಡುವು
ಅದರೊಳಗೆ ಬಿಂಬವಾದ ಆಚೆ ದಡ
ಮತ್ತೆ ಮತ್ತೆ ದಾಟಿ ಸೇರುವಾಸೆಯ ಸೆಳವು

ದಂಡೆ ತುಂಬಾ ಮೈ ಚೆಲ್ಲಿದ ಮೊಸಳೆಗೆ
ಬಿಸಿಲು ಮತ್ತು ಮರಳ ಜೋಡಿ ಕಾವು
ಚೂಪು ಹಲ್ಲಿನ ಬಾಯಿ ಜೊಲ್ಲು ನುಂಗಿ
ಕರೆದಾಗಲೊಮ್ಮೆ ಹಳೆಯದೆಲ್ಲ ಮರೆತು
ಬೆನ್ನೇರುವ ಮಂಗ ಬುದ್ಧಿ
ನೇರ ಮಾಡಿದಷ್ಟು ಸಲ ಸುರುಳಿ
ಸುತ್ತುವ ಬಾಲಗಳು
ಬಾನಿಗೆ ಚಾಚಿದ ಕೊಂಬೆಗಳಲಿ
ಅವಿಸಿಟ್ಟ ಹೃದಯಗಳ ಗುರುತಿಸಲರಿಯದೆ
ರೆಂಬೆ ರೆಂಬೆ ಜಿಗಿಯುವ
ಖಾಲಿ ಖಾಲಿ ಎದೆಗೂಡುಗಳು


- ಪ್ರಜ್ಞಾ ಮತ್ತಿಹಳ್ಳಿ
  prajna.mattihalli@rediffmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.