ಖುಷಿ

ತೀರ್ಪು

ತೀರ್ಪು
Published On :

ಪ್ರಶಸ್ತಿವಿಜೇತ ಕಲಾವಿದನ ಸುತ್ತ
ಸ್ವಸ್ತಿ ಮಾಗಧರ ದಂಡು
ಕೈಕುಲುಕಿ ಹಾರ ಹಾಕಿ
ಅಭಿನಂದಿಸಿ ಹೊಗಳಿದ್ದು
ಅಜೀರ್ಣವಾಗುವ ರೀತಿ
ಪೆಚ್ಚಾಗಿಸಿದ ಗೊಂದಲ ಫಜೀತಿ

ವರ್ಷಗಟ್ಟಲೆ ತಾದಾತ್ಮ್ಯ ತಪಿಸಿ
ಗೆರೆ ಗೆರೆಗಳ ಎದೆಹೊಕ್ಕು ಒಲಿಸಿ
ಬಣ್ಣ ಬನಿಸಿ, ಪ್ರತಿಭೆ ಕೆನೆ ಸೋಸಿ
ಧಾರೆ ಎರೆದ ಚಿತ್ರಪಟ ಪಟಲಗಳನ್ನೆಲ್ಲ
ಇಕ್ಕಿ ಮೆಟ್ಟಿದ ಬಾಹುಬಲಿ
ಪದಕ- ಪ್ರಶಸ್ತಿಗಳನ್ನೆಲ್ಲ ಗೆದ್ದ ಗಂಡುಗಲಿ
ಇವನಾರೆಂದು ದಿಟ್ಟಿಸಿ ಕಕ್ಕಾಬಿಕ್ಕಿ!
ಇವನೆಲ್ಲಿಂದ ಉದ್ಭವಿಸಿದನೆಂಬುದು
ನಿಗೂಢ- ಚಿದಂಬರ ರಹಸ್ಯ

ಎರೆಮರೆಯ ಕಾಯಂತೆ ಮೂಲೆ ಸೇರಿದ್ದ
ಮೈಯ್ಯೊಳಗೆ ಹನಿಗೊಂಡ ವರ್ಣಮೇಳದಿ
ಅಸಾಮಾನ್ಯ ಏಕಲವ್ಯನ ಜನನ
ತಾನೇ ಆವಿರ್ಭವಿಸಿದ ಕೃತಿಯ
ಕೋನಕೋನಗಳಿಗೆ ದುರ್ಬೀನಿಟ್ಟು
ಒರೆಹಚ್ಚಿ ತೀರ್ಪಿಸಿದ ಪುಟವಿಟ್ಟ ಬಂಗಾರ

ತೀರ್ಪುಗಾರರ ಸೂಕ್ಷ್ಮ ವಿಶಿಷ್ಟ ಗ್ರಾಹ್ಯ
ಅಲೌಕಿಕ ಮಸೂರ ದೃಶ್ಯಕ್ತಿಗೆ
ಬೆಚ್ಚಿ ದಂಗಾದ ಕಲಾವಿದನ
ಅಣಕಿಸುತ್ತಿತ್ತು ಅವನ ಸೃಷ್ಟಿಯಲ್ಲದ ಸೃಷ್ಟಿ
ಸ್ವಯಂಭು ಮೇರುಕೃತಿ

ಕುಂಚದ ಬೆವರ ಹನಿಗೆ ಗರ್ಭಿಸಿ
ಶಿವೆಯ ಮೈ ಗಂಧಕೆ ಜೀವತಳೆದು
ಅಂಬೆಗಾಲಿಟ್ಟ ಕಂದನ ಬಾಲಲೀಲೆ
ಖಾಲಿ ಕ್ಯಾನ್ವಾಸಿನ ಹರಹು ಅಯೋವುಯ
ಅವನು ಹೆರದ ಹೆರಿಗೆ ಈ ಅನಾಥ
ಹೆಣೆದ ಅನೂಹ್ಯ- ಅಸಾಮಾನ್ಯ ಕಲ್ಪನೆ
ಬಿಚ್ಚಿಕೊಂಡ ಅಸಂಖ್ಯ ಅಂತರಾರ್ಥ
ಹೊಳಹು- ಸುಳುಹುಗಳು
ನಿಗೂಢ ವಿಸ್ಮಯ
ನಿಜವ ನುಂಗಿತ್ತು ಕಲೆಯ ನೆರಳು

- ವೈ.ಕೆ. ಸಂಧ್ಯಾಶರ್ಮ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.