ಖುಷಿ

ಬಲೂನ್ ಹೇಳಿದ ಪಾಠ

ವ್ಯಕ್ತಿತ್ವ ವಿಕಸನ ತರಗತಿ ನಡೆಯುತ್ತಿರುವಾಗ ಗುರುಗಳು ಅಲ್ಲಿ ಸೇರಿದವರಿಗೆಲ್ಲ ಬಲೂನ್ ನೀಡಿ ಅದರ ಮೇಲೆ ...

ಬಲೂನ್ ಹೇಳಿದ ಪಾಠ
Published On :

ವ್ಯಕ್ತಿತ್ವ ವಿಕಸನ ತರಗತಿ ನಡೆಯುತ್ತಿರುವಾಗ ಗುರುಗಳು ಅಲ್ಲಿ ಸೇರಿದವರಿಗೆಲ್ಲ ಬಲೂನ್ ನೀಡಿ ಅದರ ಮೇಲೆ ಮಾರ್ಕರ್ ಪೆನ್‌ನಲ್ಲಿ ತಮ್ಮ ತಮ್ಮ ಹೆಸರು ಬರೆದು ಊದಿ ಕಟ್ಟಲು ಹೇಳುತ್ತಾರೆ. ನಂತರ ಅವನ್ನೆಲ್ಲ ಕೋಣೆಯೊಂದರಲ್ಲಿ ರಾಶಿ ಹಾಕಿ ಬರಲು ಹೇಳುತ್ತಾರೆ. 5 ನಿಮಿಷದ ನಂತರ ಎಲ್ಲರಿಗೂ ಆ ಕೋಣೆಗೆ ಹೋಗಿ ತಮ್ಮ ಹೆಸರಿರುವ ಬಲೂನ್ ಹುಡುಕಲು ಹೇಳುತ್ತಾರೆ. ಎಲ್ಲರೂ ಗಡಿಬಿಡಿಯಲ್ಲಿ ಒಬ್ಬರಿಗೊಬ್ಬರು ಡಿಕ್ಕಿ ಹೊಡೆದು, ಬಲೂನ್ ಹುಡುಕಲು ಒದ್ದಾಡುತ್ತಾರೆ. ಈಗ ಗುರುಗಳು ಅಲ್ಲಿರುವವರೆಲ್ಲ ತಮಗೆ ಸಿಕ್ಕಿದ ಬಲೂನನ್ನು ಆ ಹೆಸರಿನವರಿಗೆ ನೀಡಿ ಎನ್ನುತ್ತಾರೆ. ಎರಡೇ ನಿಮಿಷದಲ್ಲಿ ಎಲ್ಲರ ಕೈಲಿ ಅವರವರ ಹೆಸರಿನ ಬಲೂನ್ ಇರುತ್ತದೆ.  ನಮ್ಮ ಜೀವನದಲ್ಲೂ ಇದೇ ಆಗುತ್ತಿರುವುದು. ನಾವು ನಮ್ಮ ಸಂತೋಷಕ್ಕಾಗಿ ಎಲ್ಲೆಡೆ ಹುಡುಕುತ್ತೇವೆ. ಆದರೆ ನಮ್ಮ ಖುಷಿ ಇನ್ನೊಬ್ಬರ ಖುಷಿಯಲ್ಲಿರುತ್ತದೆ. ಅವರಿಗೆ ಅವರ ಖುಷಿ ನೀಡಿದರೆ ನಮ್ಮ ಸಂತೋಷ ತಾನಾಗಿಯೇ ಸಿಗುತ್ತದೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.