ಪ್ರಬಂಧದ ಮೇಲೊಂದು ಪ್ರಬಂಧ
ಉಳಿದ ಪ್ರಕಾರಗಳಂತೆ ಪ್ರಬಂಧ ಸಾಹಿತ್ಯವೂ ಕನ್ನಡಕ್ಕೆ ಇಂಗ್ಲಿಷ್ ಮೂಲಕವೇ ಬಂದುದು. ಪ್ರಬಂಧ ಸಾಹಿತ್ಯದ...
ಉಳಿದ ಪ್ರಕಾರಗಳಂತೆ ಪ್ರಬಂಧ ಸಾಹಿತ್ಯವೂ ಕನ್ನಡಕ್ಕೆ ಇಂಗ್ಲಿಷ್ ಮೂಲಕವೇ ಬಂದುದು. ಪ್ರಬಂಧ ಸಾಹಿತ್ಯದ ಹುಟ್ಟು, ಬೆಳವಣಿಗೆ, ಕನ್ನಡದ ಪ್ರಮುಖ ಪ್ರಬಂಧಕಾರರು, ಅವರ ಪ್ರಬಂಧದ ತುಣುಕುಗಳು ಹೀಗೆ ಎಲ್ಲ ರೀತಿಯಿಂದಲೂ ಸಮಗ್ರ ಎನ್ನುವಂಥ ಒಂದು ಪುಟ್ಟ ಅಧ್ಯಯನ ಕೃತಿಯನ್ನು ಪ್ರೊ. ವೀರೇಂದ್ರ ಸಿಂಪಿಯವರು 'ಶತಮಾನದ ಕನ್ನಡ ಲಲಿತ ಪ್ರಬಂಧ ಸಾಹಿತ್ಯ' ಹೆಸರಿನಲ್ಲಿ ರಚಿಸಿದ್ದಾರೆ. ನವೋದಯ ಸಾಹಿತ್ಯದಲ್ಲಿ ಪ್ರಬಂಧಗಳ ಲಕ್ಷಣಗಳು ಏನೇನು, ನವ್ಯದಲ್ಲಿ ಅದು ಯಾವ ರೂಪವನ್ನು ಪಡೆದುಕೊಂಡಿತು, ಬಂಡಾಯದಲ್ಲಿ ಹೇಗೆ ಮೊನಚಾಯಿತು ಎಂಬುದನ್ನೆಲ್ಲ ಇಲ್ಲಿ ಹೇಳಿದ್ದಾರೆ. ಒಟ್ಟಾರೆ ಪ್ರಬಂಧಗಳ ಬಗ್ಗೆ ಅರಿಯಲು ಇದೊಂದು ಕಿಟಕಿ.
ಪ್ರ: ಸಾಹಿತ್ಯ ಸಂತೆ, ಬೆಳಗಾವಿ, ಪುಟಗಳು 102, ಬೆಲೆ ರು. 90
ಆರದಿರಲಿ ಬೆಳಕು
ಪ್ರಕಾಶ್ ಕಂಬತ್ತಳ್ಳಿಯವರು ಬರೆದಿರುವ ನಾಟಕ 'ಆರದಿರಲಿ ಬೆಳಕು'. ಒಮ್ಮೆ ಮಾನಸಿಕ ಅಸ್ವಸ್ಥರಾದವರು ಗುಣಮುಖರಾದನಂತರವೂ ಸಮಾಜ ಅವರನ್ನು ಹೇಗೆ ಸ್ವೀಕರಿಸುವುದಿಲ್ಲ ಎಂಬುದನ್ನು ಈ ನಾಟಕದಲ್ಲಿ ಪ್ರಕಾಶ್ ಅವರು ಮನಮುಟ್ಟುವಂತೆ ಹೇಳಿದ್ದಾರೆ. ಈ ನಾಟಕದ ಪ್ರಮುಖ ಪಾತ್ರ ಆನಂದ. ಒಮ್ಮೆ ಮಾನಸಿಕ ಅಸ್ವಸ್ಥನಾದವನು ಗುಣಮುಖನಾಗುತ್ತಾನೆ. ಕೇವಲ ಸಮಾಜ ಮಾತ್ರವಲ್ಲ ಅವನ ಕುಟುಂಬದವರೂ ಅವನನ್ನು ಸಹಾನುಭೂತಿಯಿಂದ ನೋಡುವುದಿಲ್ಲ. ಈ ನಾಟಕದಲ್ಲಿ ಒಂದು ಸಂದೇಶವಿದೆ. ಇದು ರಂಗದ ಮೇಲೂ ಪ್ರಯೋಗಗೊಂಡು ಯಶಸ್ವಿಯಾಗಿದೆ. ಪ್ರಕಾಶ್ ಇನ್ನಷ್ಟು ನಾಟಕಗಳನ್ನು ಬರೆಯಲಿ.
ಪ್ರ: ಅಂಕಿತ ಪುಸ್ತಕ, ಬೆಂಗಳೂರು, ಪುಟಗಳು 48, ಬೆಲೆ ರು. 40
ಗಾಂಧಿ ಮತ್ತು ನಾಸ್ತಿಕ
ಗೋರಾ ಎಂದೇ ಸಂಕ್ಷಿಪ್ತ ಹೆಸರಿನಿಂದ ಪ್ರಸಿದ್ಧರಾಗಿರುವ ಗೋಪರಾಜು ರಾಮಚಂದ್ರರಾವ್ 1902ರಲ್ಲಿ ಜನಿಸಿ 1975ರ ವರೆಗೂ ಜೀವಿಸಿದ್ದ ಅಪ್ರತಿಮ ಸಾಮಾಜಿಕ ಕ್ರಾಂತಿಕಾರಿ. ಈಶ್ವರನನ್ನು ನಂಬುವ ಗಾಂಧಿ ಹಾಗೂ ಈಶ್ವರನ ಅಸ್ತಿತ್ವದಲ್ಲಿ ನಂಬಿಕೆಯಿಲ್ಲದ ಗೋರಾ ಅವರ ವಿಚಾರಗಳ ವಿನಿಮಯದ ದಾಖಲೆಯೇ 'ಗಾಂಧಿಯೊಂದಿಗೆ ಒಬ್ಬ ನಾಸ್ತಿಕ' ಎಂಬ ಕೃತಿ. ನಾಸ್ತಿಕತೆಯ ಬಗ್ಗೆ ಗಾಂಧೀಜಿ ಚಿಂತಿಸುವಂತೆ ಮಾಡಿದವರು ಗೋರಾ. ನಾಸ್ತಿಕವಾದ ಕೇವಲ ದೈವವಿರೋಧಿ ಸಿದ್ಧಾಂತವಾಗಿರದೆ ಮಾನವನ ಮುಕ್ತ ಬೆಳವಣಿಗೆಗೆ, ಹೊಸ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ದಾರಿಯಾಗಿದೆ ಎಂಬುದು ಗೋರಾ ನಿಲವು. ನಾಸ್ತಿಕವಾದ ಇತ್ಯಾತ್ಮಕ ಎಂದು ಅವರು ಹೇಳುತ್ತಿದ್ದರು. ಈ ಕೃತಿಯನ್ನು ಕನ್ನಡಕ್ಕೆ ತಂದವರು ವೆಂಕಟೇಶ ಮಾಚಕನೂರ.
ಪ್ರ: ಲೋಹಿಯಾ ಪ್ರಕಾಶನ, ಬಳ್ಳಾರಿ, ಪುಟಗಳು 76, ಬೆಲೆ ರು. 30
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

